ವಿವಿಧೆಡೆ ಭಗತ್‌ಸಿಂಗ್‌ ಜನ್ಮದಿನಾಚರಣೆ

ಭಗತ್‌ಸಿಂಗ್‌ ರವರ 115 ಜನ್ಮದಿನದ ಅಂಗವಾಗಿ ರಾಜ್ಯದ ವಿವಿದ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈ ಕುರಿತಾದ ಕಾರ್ಯಕ್ರಮಗಳ ವರದಿ ಇಲ್ಲಿದೆ

ಬೀದರ್‌ : ಎಸ್.ಎಫ್.ಐ ನಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಗತ್ ಸಿಂಗ್ ರವರ 115 ನೇ ಜನ್ಮ ದಿನಾಚರಣೆ ಕಾರ್ಯಕ್ರಮಮವನ್ನು ಎಸ್ಎಫ್ಐ ರಾಜ್ಯ ಅಧ್ಯಕ್ಷ ಅಮರೇಶ್ ಕಡಗದ  ಉದ್ಘಾಟನೆ ಮಾಡಿ ಮಾತನಾಡಿದರು.

ಸ್ವಾತಂತ್ರ್ಯವನ್ನು ಬ್ರಿಟಿಷರಿಂದ ಕಿತ್ತುಕೊಳ್ಳಬೇಕೆ ಹೊರತು ಅದೇನೂ ಆಕಾಶದಿಂದ ಬೀಳುವುದಿಲ್ಲ ಅಥವಾ ಚಳುವಳಿಗಳನ್ನು ಹಿಂತೆಗೆದುಕೊಂಡು ಶಾಂತಿಯ ಹೋಮ ಮಾಡಿದರೆ ಬರವುದಲ್ಲವೆಂದು ಭಗತ್ ರಿಗೆ ತಿಳಿದಿತ್ತು, ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಕೊನೆಗಾಣಿಸುವುದೇ ಅವರ ಅಂತಿಮ ಗುರಿ ಎಂದು ಹೇಳುತ್ತ ಇದ್ದರು ಇಂತಹ ವ್ಯಕ್ತಿಗೆ ಭಾರತ ರತ್ನ ಪ್ರಶಸ್ತಿ ಕೊಡದೆ ಇರದು ರಾಷ್ಟ್ರ ರಾಜಕೀಯಕ್ಕೆ ಹಿಡಿದ ಕೈಗೈನಡಿ ಆಗಿದೆ ಸ್ಪೂರ್ತಿಧಾಯಕ ನುಡಿಗಳನ್ನಾಡಿದರು.

 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಿಪ್ಲೊಮಾ ಕಾಲೇಜಿನ M.K ವಕೀಲ್ ಸರ್ ರವರು ಭಗತ್ ಸಿಂಗ್ ಇಂದು ನಮ್ಮ ಜೊತೆ ಇಲ್ಲದಿರಬಹುದು ಆದರೆ ಅವರ ತತ್ವ, ಸಿದ್ಧಾಂತ, ಮಾರ್ಗದರ್ಶನ ಇಂದಿಗೂ ಜೀವಂತವಾಗಿದೆ ಇಂದು ರಾಜ್ಯದಲ್ಲಿ, ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಲ್ಲಿಸಬೇಕಾಗಿದೆ, ವಿದ್ಯಾರ್ಥಿಗಳಿಗೆ ಉದ್ಯೋಗಕ್ಕಾಗಿ ಸಂಘಟನೆಗಳು ಹೋರಾಟ ಮಾಡಬೇಕಾಗಿದೆ ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಮಾಡಬೇಕಾಗಿದೆ ವಿದ್ಯಾರ್ಥಿಗಳು ಅದಕ್ಕಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂದರು.

ವೇದಿಕೆಯ ಮೇಲೆ ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ಅರುಣ ಕೋಡಗೆ ಜಿಲ್ಲಾ ಉಪಾಧ್ಯಕ್ಷ ಅಮರ ಗಾದಿಗ, ಕಾಲೇಜಿನ ಪ್ರಾಚಾರ್ಯರದ ಈ. ಧನರಾಜ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.

 

ಹಾಸನ :  ಹಾಸನದ ವಿಭಜಿತ ಪಿ.ಯು ಕಾಲೇಜಿನ ಭಗತ್‌ ಸಿಂಗ್‌ ಜನ್ಮದಿನದ ಕಾರ್ಯಕ್ರಮದಲ್ಲಿ ಹೆಚ್.ಆರ್ ನವೀನ್ ಕುಮಾರ್ ಮಾತನಾಡಿದರು. ಯುವ ಜನರು ಇಂದು ಕ್ರಾಂತಿಕಾರಿ ವಿಚಾರಗಳಿಂದ ದೂರವಾಗುತ್ತಿದ್ದಾರೆ. ಭಗತ್ ಸಿಂಗ್ ಕಂಡಂತಹ ಕನಸು ನನಸಾಗದೆ ಉಳಿದಿರುವುದು ದುರಂತದ ಸಂಗತಿಯಾಗಿದೆ. ಭಗತ್ ಸಿಂಗ್ ಕೇವಲ ಸ್ವಾತಂತ್ರ್ಯವನ್ನು ಮಾತ್ರ ಬಯಸಿರಲಿಲ್ಲ ಎಲ್ಲರಿಗೂ ಸಮಾನತೆ, ಜಾತಿ ಧರ್ಮಗಳಿಂದ ಸ್ವಾತಂತ್ರ್ಯವನ್ನು ಕೂಡ ಬಯಸಿದ್ದರು. ಜಲಿಯನ್ ವಾಲಾಬಾಗ್ ದುರಂತದ ನಂತರದಲ್ಲಿ ಭಗತ್ ಸಿಂಗ್ ಒಬ್ಬ ಕ್ರಾಂತಿಜಾರಿಯಾಗಿ ಬದಲಾಗುತ್ತಾರೆ. ಭಗತ್ ಸಿಂಗ್ ರವರು ಅಂದಿನ ಬ್ರಿಟೀಷರಿಗೆ ಸಿಂಹಸ್ವಪ್ನನಾಗಿದ್ದರು ಏಕೆಂದರೆ ಭಗತ್ ಸಿಂಗ್‌ರ ಬಳಗ ದೊಡ್ಡ ಮಟ್ಟದಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ದರಾಗಿದ್ದರು. ಭಗತ್ ಸಿಂಗ್, ರಾಜಗುರು, ಸುಖ್‌ದೇವ್ ಮೂವರು ಕೂಡ ಕೇವಲ

24 ವರ್ಷಗಳಿಗೆ ಗಲ್ಲಿಗೇರಿದವರು ಇಂತಹ ಆದರ್ಶ ಸ್ವಾತಂತ್ರ್ಯ ಹೋರಾಟಗಾರರು ನಮಗೆ ಆದರ್ಶವಾಗಬೇಕು ಈ ದೇಶದಲ್ಲಿ ಹಸಿವಿನಿಂದ, ಶಿಕ್ಷಣದಿಂದ, ಉದ್ಯೊಂಗದಿಂದ, ಸೂರಿನಿಂದ ವಂಚಿತರಾಗಬಾರದು ಎಲ್ಲರಿಗೂ ಎಲ್ಲವು ಸಿಗಬೇಕು ಎಂಬುದೆ ಭಗತ್ ಸಿಂಗ್ ರವರ ಕನಸಾಗಿತ್ತು ಎಂದು ನವೀನ್ ಕುಮಾರ್ ರವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಲೇಜಿನ ಭಾರತಿರವರು, ಪೃಥ್ವಿ ಎಂ.ಜಿ, ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ್, ಪೂಜ, ಶರತ್, ಹೇಮಂತ್, ನಳಿನಿ, ದಿವ್ಯ ಕಾಂಬ್ಳೆ, ಭಾವನ ಉಪಸ್ಥಿತರಿದ್ದರು.

ಹರಪನಹಳ್ಳಿ: ಭಗತ್ ಸಿಂಗ್ ಕೇವಲ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಹೋರಾಡಲಿಲ್ಲ. ಭಾರತದಲ್ಲಿ ಅಮೂಲಾಗ್ರ ಬದಲಾವಣೆ ತರಲು ಅಸಮಾನತೆಯ ಬುನಾದಿ ಮೇಲೆ ನಿರ್ಮಾಣವಾಗಿರುವ ಶ್ರೇಣೀಕೃತ, ಊಳಿಗಮಾನ್ಯ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿದ್ದ ಶೋಷಣೆ ಮತ್ತು ಅಸಮಾನತೆಯ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತು ಹಾಕಿ ಸಮಾಜವಾದಿ ವ್ಯವಸ್ಥೆಯ ಭಾರತ ಕಟ್ಟುವ ‌ಕನಸುಗಳಾಗಿತ್ತು ಎಂದು ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಹೇಳಿದರು.

ಹರಪನಹಳ್ಳಿ ಎಸ್ಎಫ್ಐ ತಾಲ್ಲೂಕು ಸಮಿತಿ ವತಿಯಿಂದ ಆಯೋಜಿಸಿದ್ದ ದೇಶಪ್ರೇಮಿ ಭಗತ್ ಸಿಂಗ್ 115 ನೇ ಜನ್ಮ ದಿನಾಚರಣೆಯನ್ನು ಉಧ್ಘಾಟಿಸಿ ಅವರು ಮಾತನಾಡಿ ಭಗತ್ ಸಿಂಗ್ ಮತ್ತು ಅವನ ಸಂಗಾತಿಗಳು ಒಂದು ವೇಳೆ ಸ್ವಾತಂತ್ರ್ಯದ ಕನಸು ಸಾಕಾರಗೊಳ್ಳುವ ಮುನ್ನವೇ ಅಮರರಾದರು ಹುತಾತ್ಮ ಎನ್ನುವ ಗೌರವ ಪಡೆಯುವ ಹಕ್ಕು ಕೇವಲ ಪ್ರಾಮಾಣಿಕ ದಿಟ್ಟ ಕ್ರಾಂತಿಕಾರಿಗಳಿಗೆ ಮಾತ್ರವೇ ಇರುತ್ತದೆ. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಾವಿರಾರು ಜನ ತಮ್ಮ ಜೀವವನ್ನೇ ಪಣವಿಟ್ಟು ಬ್ರಿಟೀಷರ ವಿರುದ್ಧ ಹೋರಾಡಿ ಮೃತರಾದರೂ ಹುತಾತ್ಮ ಎಂಬ ಪಟ್ಟಕ್ಕೆ ಅರ್ಹನಾದ ವ್ಯಕ್ತಿ ಸಂಗಾತಿ ಭಗತ್‍ಸಿಂಗ್, ರಾಜಗುರು ಸುಖದೇವ್ ಮತ್ತು ಆತನ ಸಂಗಾತಿಗಳು ಮಾತ್ರ ಎಂದರು.

ಇಂದು ಹುತಾತ್ಮ ಭಗತ್ ಸಿಂಗ್ ನ ರಾಜಕೀಯ, ಆರ್ಥಿಕ, ಸೈದ್ಧಾಂತಿಕ, ವಿಚಾರಗಳು ಆದರ್ಶ ಪ್ರೇರೇಪಣೆಯಾಗಿವೆ. ಸಂಘಪರಿವಾರದ ಕೇಸರಿ ಪಡೆಗಳಿಗೆ ಭಗತ್ ಸಿಂಗ್ ನಾಸ್ತಿಕವಾದ, ಜ್ಯಾತ್ಯಾತೀತ,ಸಮಾಜವಾದಿ ವಿಚಾರಗಳು ಬಲಪಂಥೀಯ ರಾಜಕಾರಣಕ್ಕೆ ವಿರುದ್ಧವಾಗಿರುವುದರಿಂದ ಭಗತ್ ಸಿಂಗ್ ನನ್ನು ಕೇಸರಿಪಡೆಗಳು ಹೈಜಾಕ್ ಮಾಡಲು ಸಾಧ್ಯವಾಗಿಲ್ಲವೆಂದರು.

ಪ್ರಗತಿಪರ ಚಿಂತಕಿ ಕವಿತಾ ರೆಡ್ಡಿ ಮಾತನಾಡಿ ಬ್ರಿಟೀಷ್ ಆಡಳಿತ ವ್ಯವಸ್ಥೆ ಭಗತ್ ಸಿಂಗ್ ಎಂಬ ಒಬ್ಬ ವ್ಯಕ್ತಿಯನ್ನು ಗಲ್ಲಿಗೇರಿಸಿತ್ತು. ವ್ಯಕ್ತಿಗಳನ್ನು ಕೊಂದು ಹಾಕಬಹುದು ಆದರೆ ಅವರ ವಿಚಾರಗಳು ಅಲ್ಲ.. ಭಗತ್ ಸಿಂಗ್ ಹುತಾತ್ಮನಾದ ನಂತರವೂ ಆತನ ವಿಚಾರ, ತತ್ವ ಸಿದ್ಧಾಂತಗಳು ಜೀವಂತವಾಗಿವೆ. ಇನ್ನೂ ಶತಮಾನಗಳ ಕಾಲ ಜೀವಂತವಾಗಿರುತ್ತವೆ. ಇಂದು ನಾವು ಈ ಯುವ ಕ್ರಾಂತಿಕಾರಿಯನ್ನು ನೆನೆಯುವುದೇ ಆದರೆ ಬೇರೊಂದು ನೆಲೆಗಟ್ಟಿನಲ್ಲೇ ಸ್ಮರಿಸಬೇಕಾಗುತ್ತದೆ ಎಂದರು.

ಕಾರ್ಯಕ್ರಮವನ್ನುದ್ಧೇಶಿಸಿ ಈಶ್ವರ್ ನಾಯ್ಕ್ ಮಾತನಾಡಿದ ಭಗತ್ ಸಿಂಗ್ ಇಂದಿಗೂ ಭಾರತದ ಭವಿಷ್ಯ ಕಟ್ಟಲು ಚಿಂತಿಸುವವರೆಲ್ಲರೊಳಗೆ ಅದಮ್ಯ ಚೇತನವಾಗಿದ್ದಾನೆ. ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳು ಬಿದ್ದ ಮರಗಳು ಅಲ್ಲ ಬಿತ್ತಿದ ಬೀಜಗಳು. ನಮ್ಮೆಲ್ಲರಲ್ಲೂ ಭಗತ್ ಸಿಂಗ್ ವಿಚಾರಗಳನ್ನು ವಿಚಾರಧಾರೆ ಕ್ರಾಂತಿಯನ್ನುಂಟು ಮಾಡಲಿ ಎಂದರು.

ಕಾರ್ಯಕ್ರಮದಲ್ಲಿ ಎಸ್ಎಫ್ಐ ಜಿಲ್ಲಾ ಸಂಚಾಲಕ ಲಕ್ಷ್ಮಣ್ ರಾಮಾವತ್, ತಾಲ್ಲೂಕು ಕಾರ್ಯದರ್ಶಿ ವೆಂಕಟೇಶ್ ನಾಯ್ಕ್, ಪ್ರಸನ್ನ , ಸಂಜು, ಸೌಮ್ಯಾ, ದೀಪ, ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಬೃಹತ್ ವಿದ್ಯಾರ್ಥಿಗಳ ಮೆರವಣಿಗೆ ನಡೆಸಿ ಭಗತ್ ಸಿಂಗ್ ಜಿಂದಾಬಾದ್, ಇನ್ ಕ್ವಿಲಾಬ್ ಜಿಂದಾಬಾದ್ ಘೋಷಣೆಗಳು ಕೂಗಿದರು.

ಹಾವೇರಿ: ಹಾವೇರಿಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ವಾಲ್ಮೀಕಿ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ “ಕ್ರಾಂತಿ ಜ್ಯೋತಿ” ಮೆರವಣಿಗೆಯಲ್ಲಿ ಭಗತ್‌‌ ಸಿಂಗ್‌‌ ಪರ ಕ್ರಾಂತಿಕಾರಿ ಘೋಷಣೆಗಳನ್ನು ಕೂಗುತ್ತಾ ನೂರಾರು ವಿದ್ಯಾರ್ಥಿಗಳು ಹೆಜ್ಜೆ ಹಾಕಿದ್ದರು.

ಈ ಸಂದರ್ಭದಲ್ಲಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ ದೇಶದ ಸ್ವತಂತ್ರ್ಯಕ್ಕಾಗಿ ನಗುತ್ತಲೇ ಪ್ರಾಣಾರ್ಪಣೆಗೈದು ಹುತಾತ್ಮರಾದ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರ ಕನಸುಗಳನ್ನು ನನಸು ಮಾಡಲು ಯುವಜನತೆ ಮುಂದಾಗಬೇಕೆಂದು ಕರೆ ನೀಡಿದರು. ಭಗತ್ ಸಿಂಗ್ ಒಬ್ಬ ಉತ್ತಮ ಅಧ್ಯಯನ ಶೀಲರಾಗಿದ್ದರು ಎಷ್ಟರ ಮಟ್ಟಿಗೆ ಎಂದರೆ ನೇಣು ಕಂಬಕ್ಕೆ ಹೇರುವ ಕೊನೆ ಕ್ಷಣದವರೆಗೂ ಅಧ್ಯಯನ ಮಾಡಿದರು.

ಕ್ರಾಂತಿ ಎಂದರೆ ಬಂದೂಕು ಬಾಬ್ ಗಳಿಂದ ಹತ್ಯೆ ಮಾಡುವದಲ್ಲ ಎಂದು ನಂಬಿದ್ದರು. ಭಗತ್ ಅವರು ತಾಯಿಯೊಂದಿಗೆ ಸಂಭಾಷಣೆ ಮಾಡುವ ಸಂದರ್ಭದಲ್ಲಿ ಬಿಳಿಯ ಸಾಹೇಬರ ಬದಲಾಗಿ ಕರಿಯ ಸಾಹೇಬರು ಬರಬಹುದು ಭಗತ್ ಸಿಂಗ್ ಅವರ ಆತಂಕ ಇಂದು ಪ್ರಸ್ತುತವಾಗಿದೆ ಎಂದರು.

ಡಿವೈಎಫ್ಐ ಮುಖಂಡರಾದ ನಾರಾಯಣ ಕಾಳೆ ಮಾತನಾಡಿ ಭಗತ್ ಸಿಂಗ್ ಅವರನ್ನು ಸರಿಯಾಗಿ ಅಧ್ಯಯನ ಮಾಡಿ ಆದರ್ಶವಾಗಿ ತೆಗೆದುಕೊಂಡು ವಿದ್ಯಾರ್ಥಿ ಯುವಜನರು ಶಿಕ್ಷಣಕ್ಕಾಗಿ, ಉದ್ಯೋಗಕ್ಕಾಗಿ, ದೇಶದ ಸೌಹಾರ್ದ ಐಕ್ಯತೆಗಾಗಿ ಹೋರಾಡಬೇಕು ಎಂದರು.

ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಮಾತಾನಾಡಿ, ಭಗತ್ ಸಿಂಗ್ ಅವರ ಜೀವನ ಚರಿತ್ರೆಯನ್ನು ಪಠ್ಯಕ್ರಮ ದಿಂದ ಯಾವುದೇ ಕಾರಣಕ್ಕೂ ಕೈ ಬಿಡಬಾರದು ಒಂದು ವೇಳೆ ಕಡೆಗಣಿಸಿದರೆ ರಾಜ್ಯಾದ್ಯಂತ ಬೃಹತ್ ಹೋರಾಟ ಮಾಡಲಾಗುವುದು. ಹಾವೇರಿ ನಗರ ಯಾವುದಾದರೂ ಒಂದು ವೃತ್ತದಲ್ಲಿ ಭಗತ್ ಸಿಂಗ್ ಅವರ ಪ್ರತಿಮೆ ಸ್ಥಾಪಿಸಿಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅರುಣ್ ಕಡಕೋಳ, ಕಾವ್ಯ ಹನಗೋಡಿಮಠ, ನಿವೇದಿತಾ ಹಿರೇಮಠ,  ಸುಜಾತ ಕಮ್ಮಾರ, ಸಂಜೀವ್ ತಳವಾರ, ಯುವರಾಜ ಹಂಚಿನಮನಿ, ದೇವರಾಜ್‌ ಲಮಾಣಿ, ಗಿರೀಶ್, ಕೃಷ್ಣ ಬಸಾಪುರ, ರಾಜು, ವಿನಾಯಕ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.

ಗಂಗಾವತಿ: ಹರ್ ಘರ್ ಉದ್ಯೋಗದ ಘೋಷಣೆಯಾಗಲಿ… ಸರ್ಕಾರಗಳು ಕಟ್ಟಕಡೆಯ ಮಾನವನ ಅಭಿವೃದ್ಧಿಗೆ ಹರ್ ಘರ್ ತಿರಂಗಾ,ಜಲ ಯೋಜನೆಯಂತೆ ಹರ್ ಘರ್ ಉದ್ಯೋಗದ ಘೋಷಿಸಿ ನಿರುದ್ಯೋಗ ಸಮಾಜ ನಿರ್ಮಿಸಿ ನಿಜವಾದ ದೇಶಭಕ್ತಿಯನ್ನು ಮೆರೆಯಲಿ ಎಂದು ಚಿಂತಕ ಶೇಖರ್ ನಾಯ್ಕ ಹೇಳಿದರು. ಗಂಗಾವತಿ ಸಮೀಪದ ಟಿಎಮ್ಎ ಈ ಸಂಸ್ಥೆಯಲ್ಲಿ ಎಸ್ ಎಫ್ ಐನಿಂದ ನಡೆದ ನೂರಾಹದಿನೈದನೆಯ ಭಗತ್ ಸಿಂಗ್ ಜನ್ಮದಿನಾಚರಣೆ ಕಾರ್ಯಕ್ರಮದ ಉಪನ್ಯಾಸ ನೀಡುತ್ತಾ ಮಾತನಾಡಿ ಭಗತ್ ಸಿಂಗ್ ಕಂಡ ಸಮ ಸಮಾಜದ ನಿರ್ಮಾಣಕ್ಕಾಗಿ ಸರ್ಕಾರಗಳು ಕಟಿಬದ್ಧರಾಗಿ ನಿಲ್ಲಬೇಕು. ಕೆಳಸ್ತರದ ವ್ಯಕ್ತಿಯ ಸಾಮಾಜಿಕ ಆರ್ಥಿಕ ರಾಜಕೀಯವಾಗಿ ಸಮತೆಯನ್ನು ಸ್ಥಾಪಿಸಲು ದೂರಗಾಮಿ ಯೋಜನೆಯನ್ನು ರೂಪಿಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು.ಧರ್ಮಾತೀತ ಜಾತ್ಯತೀತ ಸಮಾಜ ನಿರ್ಮಾಣ ಮಾಡಲು ಯುವಕರ ಪಾತ್ರ ಮುಂದಾಗಿದ್ದು ಯಾವುದೇ ಧರ್ಮದ ಆಮಿಷಕ್ಕೆ ಒಳಗಾಗದೆ ದೇಶಭಕ್ತಿ ಮತ್ತು ಸಮಾಜದ ಅಭಿವೃದ್ಧಿಗಾಗಿ ಟೊಂಕಕಟ್ಟಿನಿಲ್ಲಬೇಕು ಎಂದರು.

ಪ್ರತಿಯೊಬ್ಬ ನಾಗರಿಕರು ಸಮಾಜ ಘಾತುಕ ಶಕ್ತಿಗಳನ್ನು ಹೊಡೆದೋಡಿಸಿ ಧರ್ಮ ಮತ್ತು ಜಾತಿ ಹೆಸರಿನಲ್ಲಿ ಗಲಭೆ ಉಂಟು ಮಾಡುವ ಛಿದ್ರಕಾರಿ ಶಕ್ತಿಗಳನ್ನು ಹೊಡೆದೋಡಿಸಿ ಲಿಂಗ ಸಮಾನತೆಯನ್ನು ಸ್ಥಾಪಿಸಿ ಅಭಿವೃದ್ಧಿ ಸುಸ್ಥಿರ ಸಮಾಜ ನಿರ್ಮಾಣ ಮಾಡಲು ಯುವಕರಾದಿಯಾಗಿ ಸಮಾಜದ ಎಲ್ಲರೂ ನಿಲ್ಲಬೇಕಿದೆ ಮಹಿಳೆಯರು ದಾಸ್ಯ ಮತ್ತು ಮೌಢ್ಯತೆಯಿಂದ ಹೊರಬಂದು ಸ್ವಾವಲಂಬಿ ಬದುಕು ಕಟ್ಟಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ತಮ್ಮ ಪಾಲನ್ನು ನೀಡಬೇಕಿದೆ. ಆಳುವ ಸರ್ಕಾರಗಳಿಗೆ ಉದ್ಯೋಗ ಶಿಕ್ಷಣ ಆರೋಗ್ಯ ಮತ್ತು ಮೂಲಭೂತ ಸೌಲಭ್ಯಕ್ಕಾಗಿ ಪ್ರತಿಯೊಬ್ಬರೂ ಪ್ರಶ್ನಿಸುವ ಮೂಲಕ ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಸಾಗಬೇಕಿದೆ. ಯುವಕರು ಧರ್ಮದ ಅಫೀಮಿನಿಂದ ಹೊರಬಂದು ರಾಜಕೀಯ ಪ್ರಜ್ಞೆಯೊಂದಿಗೆ ಸುಸ್ಥಿರ ಸಮಾಜಕ್ಕಾಗಿ ರಾಷ್ಟ್ರಭಕ್ತಿಯನ್ನು ಮೆರೆಯಬೇಕು ಅಸಂಖ್ಯವಾಗಿ ದೇಶದ ಸ್ವಾಭಿಮಾನ ಮತ್ತು ಸ್ವಾತಂತ್ರ್ಯಕ್ಕಾಗಿ ಮಡಿದ ವೀರರ ತ್ಯಾಗ ಮತ್ತು ಬಲಿದಾನವನ್ನು ನೆನೆಯಬೇಕು ಆ ಮೂಲಕ ಅವರ ಕನಸುಗಳನ್ನು ಈಡೇರಿಸಲು  ಇಂದು ಹೊಸ ಕ್ರಾಂತಿಯೇ ಮಾಡಬೇಕಿದೆ.ಈಗಿನ ವಸಾಹತುಶಾಹಿ ಸಾಮ್ರಾಜ್ಯಶಾಹಿ ಬಂಡವಾಳಶಾಹಿ ವ್ಯವಸ್ಥೆಯನ್ನು ಧಿಕ್ಕರಿಸಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಕಲ್ಪನೆಯೊಳಗೆ ಸಾಗಬೇಕಿದೆ ಎಂದರು. ಕಾಂ.ನಿರುಪಾದಿ ಬೆಣಕಲ್ ಉದ್ಘಾಟಿಸಿದರು ಪ್ರಾಸ್ತಾವಿಕವಾಗಿ ಗ್ಯಾನೇಶ ಕಡಗದ ಮಾತನಾಡಿ ಸರಕಾರ ದೇಶಪ್ರೇಮಿ ಭಗತ್ ಸಿಂಗ್ ರವರ ಜಯಂತಿ ಆಚರಣೆಗೆ ಮುಂದಾಗಬೇಕು ಸರಕಾರಗಳು ಭಗತ್ ಸಿಂಗ್ ಜಯಂತಿ ಮಾಡಲು ಯಾಕೆ ಮುಂದಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ವೇದಿಕೆಯ ಅಧ್ಯಕ್ಷತೆಯನ್ನು ಡಾ.ಕೆ ಸಿ ಕುಲಕರ್ಣಿ ಪ್ರಾಚಾರ್ಯರು ವಹಿಸಿದ್ದರು.ವೇದಿಕೆಯ ಮೇಲೆ ಕಾರ್ಯದರ್ಶಿ ಶಿವುಕುಮಾರ.ಹುಸೇನಪ್ಪ.ಕೆ ವಿಜಯಲಕ್ಷ್ಮೀ ಮೇಡಂ.ರಮೇಶ.ಸರ್ .ಅರುಣಕುಮಾರ. ಶಿವಪ್ರಕಾಶ ಮಂಜುನಾಥ. ಇತರರು ಇದ್ದರು.

 

ರಾಣೇಬೆನ್ನೂರು: ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ನೇತೃತ್ವದಲ್ಲಿ ನಗರದ ಅನೇಕ ಕಡೆಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರ,  ಯುವಜನರ ಸ್ಪೂರ್ತಿ ಕಾಮ್ರೇಡ್ ಭಗತ್‌‌ ಸಿಂಗ್‌‌ ಅವರ  115ನೇ ಜನ್ಮ ದಿನಾಚರಣೆ ಆಚರಿಸಿ ವಿದ್ಯಾರ್ಥಿಗಳು ಭಗತ್ ಸಿಂಗ್ ರ ಜೀವನ ಚರಿತ್ರೆಯನ್ನು ಮೆಲುಕು ಹಾಕಿದ್ದರು.

ವಿದ್ಯಾರ್ಥಿಗಳು ಕ್ರಾಂತಿಕಾರಿ ಭಗತ್ ಸಿಂಗ್ ಅವರ ಬಗ್ಗೆ ಹೆಚ್ಚು ಹೆಚ್ಚು ಅದ್ಯಯನ ಮಾಡಿ ಅವರ ತತ್ವಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಹೀದ್ ಭಗತ್ ಸಿಂಗ್ ರು ತಮ್ಮನ್ನು ತಾವೇ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ 23ನೇ ಎಳೆಯ ವಯಸ್ಸಿನಲ್ಲಿಯೇ ನೇಣುಗಂಬಕ್ಕೆರಿದ್ದು ನಮ್ಮನ್ನು ಕೂಡಾ ಹೋರಾಟದ ಮನೋಭಾವನೆಗೆ ತಳಿದ ಅಷ್ಟೇ ಅಲ್ಲದೆ ಯುವಕರ ಸ್ಪೂರ್ತಿ, ಆಶಾಕಿರಣ,ಹುಟ್ಟು ಹೋರಾಟಗಾರ ಆದ್ದರಿಂದ ವಿದ್ಯಾರ್ಥಿಗಳು ಭಗತ್ ಸಿಂಗ್ ಅವರನ್ನು ಆದರ್ಶ ವ್ಯಕ್ತಿಯಾಗಿ ಇಟ್ಟುಕೊಳ್ಳಬೇಕು. ಪ್ರಸ್ತುತ ಪಠ್ಯ ಕ್ರಮಗಳಲ್ಲಿ ಭಗತ್ ಸಿಂಗ್ ಅವರ ಜೀವನ, ನಡೆದು ಬಂದ ದಾರಿ ಸೇರಿದಂತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿ ಯುವಜನರ ಭಾಗವಹಿಸಿದ್ದ ಇತಿಹಾಸ ಕಡೆಗಣಿಸಲಾಗಿದ್ದು ಇದು ನಮ್ಮೆಲ್ಲರ ಬೇಸರದ ಸಂಗತಿಯಾಗಿದೆ ಆದರಿಂದ ವಿದ್ಯಾರ್ಥಿ – ಯುವಜನರ ಒಂದಾಗಬೇಕು ಪಠ್ಯ ಕ್ರಮದಲ್ಲಿ ಭಗತ್ ಸಿಂಗ್ ರಂತಹ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹೆಚ್ಚು ಒತ್ತು ನೀಡಲು ಒತ್ತಾಯಿಸೋಣ ಎಂದು ಬಿಸಿಎಮ್ ಹಾಸ್ಟೆಲ್ ನಲ್ಲಿ ಆಯೋಜಿಸಿದ ಕಾರ್ಯಕ್ರಮ ಉದ್ದೇಶಿಸಿ ವಸತಿ ನಿಲಯದ ಮೇಲ್ವಿಚಾರಕರಾದ ಶಾಂತಪ್ಪ ಸಾವುಕಾರ ಮಾತನಾಡಿದರು.

12 ವರ್ಷದ ವಯಸ್ಸಿನಲ್ಲೇ ಮಹಾತ್ಮ ಗಾಂಧಿಜೀಯವರ ಅಸಹಕಾರ ಚಳವಳಿ ಹಾಗೂ ಸ್ವದೇಶಿ ಚಳುವಳಿಯಲ್ಲಿ ತೊಡಗಿಕೊಂಡು ಯುವಕರಿಗೆ ಸ್ಪೂರ್ತಿ ಆಗಿದ್ದಾರೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಪ್ರಾಚಾರ್ಯರಾದ ಜಿ.ಬಿ.ಬೆಳವಿಗಿ, ಹಾಗೂ ಉಪನ್ಯಾಸಕರಾದ ಚಂದು ನಾಯಕ ಮಾತನಾಡಿದರು.

ಈ ಸಂದರ್ಭದಲ್ಲಿ ವಸತಿ ನಿಲಯದ ಮೇಲ್ವಿಚಾರಕಾದ ಲಕ್ಷ್ಮಣ ಚವ್ಹಣ, ಎಸ್ಎಫ್ಐ ತಾಲ್ಲೂಕು ಉಪಾಧ್ಯಕ್ಷರಾದ  ಹೊನ್ನಪ್ಪ ಕುದಿರಿಹಾಳ ಮುಖಂಡರಾದ ರವಿ ಹಲವಾಗಲ, ನೇಹಲ್ ಖಾನ್, ಆಕಾಶ್, ಹರ್ಷ, ಬಸವರಾಜ ಬಿ, ದೀಲಿಪ್ ಎಚ್, ವೆಂಕಟೇಶ ಎಸ್, ಸಿದ್ದಪ್ಪ , ಗಣೇಶ ಎಲ್, ಚಂದ್ರಪ್ಪ ಆರ್ ಎಲ್, ಬೀರೆಶ ಎ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *