ತಿರುಪತಿ : ಮೊಹನ್ ಬಾಬು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ವಿವಾದ ಮತ್ತಷ್ಟು ತೀವ್ರಗೊಂಡಿದೆ. ವಿಶ್ವವಿದ್ಯಾಲಯವು ಅತಿಯಾದ ಶುಲ್ಕ ವಿಧಿಸಿ ವಿದ್ಯಾರ್ಥಿಗಳನ್ನು ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಗಳ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲು ತೆರಳಿದ್ದ ವಿದ್ಯಾರ್ಥಿ ಸಂಘಟನೆಗಳ ನಾಯಕರು, ಮೊಹನ್ ಬಾಬು ಅವರ ಬೆಂಬಲಿಗರಿಂದ ಅಪಹರಣಕ್ಕೊಳಗಾಗಿದ್ದಾರೆ ಅಪಹರಣಕ್ಕೊಳಗಾದ ಕುರಿತು ತಿರುಚಾನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ಬೆಂಗಳೂರು | ಕರ್ನಾಟಕದ ಶಾಲಾ ಶಿಕ್ಷಣಕ್ಕೆ ಬಿಕ್ಕಟ್ಟು: ಶಿಕ್ಷಕರ ಕೊರತೆ–ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
ಪೊಲೀಸ್ಗಳ ಪ್ರಾಥಮಿಕ ತನಿಖೆಯಲ್ಲಿ ಎಸ್ಎಫ್ಐ (Students Federation of India) ಸಂಘಟನೆಯ ಇಬ್ಬರು ನಾಯಕರು ವಿನೋದ್ ಮತ್ತು ಅಕ್ಬರ್ ಅಪಹರಣಕ್ಕೊಳಗಾಗಿದ್ದು, ಅವರನ್ನು ಒಂದು ಫಾರ್ಮ್ಹೌಸ್ನಲ್ಲಿ ಬಂಧಿಸಿ ಇಡಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ.
ದೂರು ದಾಖಲಾದ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಪಹರಿಸಲ್ಪಟ್ಟ ಇಬ್ಬರು ಎಸ್ಎಫ್ಐ ನಾಯಕರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ಘಟನೆ ತಿರುಪತಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ನಡುವೆ, ವಿದ್ಯಾರ್ಥಿ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಪಹರಣಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿವೆ. ಜೊತೆಗೆ, ಮೊಹನ್ ಬಾಬು ಹಾಗೂ ವಿಷ್ಣು ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕು ಎಂದು ಸಂಘಟನೆಗಳು ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ಆಗ್ರಹಿಸಿವೆ.
ಈ ಘಟನೆ ಹಿನ್ನೆಲೆಯಲ್ಲಿ ತಿರುಪತಿಯಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ನೋಡಿ : “ಮನರೇಗಾ ನಮ್ಮ ಹಕ್ಕು: V B GRAM G ವಿರುದ್ಧ ಜನಪಂಚಾಯತ್” | ಉದ್ಯೋಗ ಖಾತರಿ Janashakthi Media
