ದಾವಣಗೆರೆ: ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ, ಹಾಸ್ಟೆಲ್ ಬಲವರ್ಧನೆಗಾಗಿ ಎಸ್‌ಎಫ್‌ಐ ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ರಾಜ್ಯವ್ಯಾಪ್ತಿ ಶೈಕ್ಷಣಿಕ ಜಾಥಾವನ್ನು ದಾವಣಗೆರೆ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ಸಂವಿಧಾನ ಶಿಲ್ಪ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಹಿರಂಗ ಸಭೆ ನಡೆಸಲಾಯಿತು.
ಜಾಥಾವನ್ನು ಎಸ್‌ಎಫ್‌ಐ ಅಖಿಲ ಭಾರತ ಅಧ್ಯಕ್ಷರಾದ ಆದರ್ಶ ಎಮ್ ಸಾಜಿ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ
ನಿವೃತ್ತ ಪ್ರಾಂಶುಪಾಲರು, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕರಾದ ಎ.ಬಿ.ರಾಮಚಂದ್ರಪ್ಪ, ಸಿಐಟಿಯು ಜಿಲ್ಲಾ ಸಂಚಾಲಕ ಆನಂದರಾಜು ಕೆ ಹೆಚ್, ಕೆಪಿಆರ್.ಎಸ್ ಮುಖಂಡರಾದ ಶ್ರೀನಿವಾಸ ಈ, ರಾಜ್ಯಾಧ್ಯಕ್ಷರಾದ ಶಿವಪ್ಪ ಅಬ್ಲಿಕಲ್, ಕಾರ್ಯದರ್ಶಿ ವಿಜಯಕುಮಾರ್ ಟಿ.ಎಸ್, ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್, ಗಣೇಶ ರಾಠೋಡ್, ಮಾತನಾಡಿದರು. ಜಿಲ್ಲಾ ಸಂಚಾಲಕ ಅನಂತರಾಜ್ ಬಿ.ಎಮ್ ಸ್ವಾಗತಿಸಿ, ನಿರೂಪಿಸಿದರು.

ಈ ಸಂದರ್ಭದಲ್ಲಿ CITU ಜಿಲ್ಲಾ ಮುಖಂಡರಾದ ಶ್ರೀನಿವಾಸ್ ಮೂರ್ತಿ, ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಗ್ಯಾನೇಶ್ ಕಡಗದ, ಪದಾಧಿಕಾರಿ ಚಂದ್ರ ರಾಠೋಡ್, ರಾಜ್ಯ ಸಮಿತಿ ಸದಸ್ಯ ಅಭಿ ಮೈಸೂರು, ಮುಖಂಡರಾದ ಸಂಜುನಾಯ್ಕ ಎಲ್ ಜಿ, ಪವನ್, ಕಿರಣ, ಉಷಾ, ಭಾರತಿ, ಲಕ್ಷ್ಮೀ ಕೆ ಹೆಚ್, ಪ್ರಜ್ವಾಲ್ ಕೆ, ಗಣೇಶ್ ಪೂಜಾರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ರೈತ ಕಾರ್ಮಿಕರ ಐಕ್ಯ ಹೋರಾಟ ಇಂದಿನ ಅಗತ್ಯ – ಮೀನಾಕ್ಷಿಸುಂದರಂ Janashakthi Media
