ರಾಣೇಬೆನ್ನೂರು: ನಗರದ ಹೊರವಲಯದಲ್ಲಿರುವ ಹಲಗೇರಿ ರಸ್ತೆಯ ಎಸ್.ಆರ್.ಕೆ ಬಡಾವಣೆ ಹತ್ತಿರದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಕಡ್ಡಾಯವಾಗಿ ಬಸ್ ನಿಲ್ಲಿಸಲು ಹಾಗೂ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ನಡೆದುಕೊಂಡ ಕಂಡಕ್ಟರ್, ಡ್ರೈವರ್ ಮೇಲೆ ಶಿಸ್ತು ಕ್ರಮ ಜರುಗಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಣೇಬೆನ್ನೂರ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಬಸ್ ನಿಲ್ದಾಣದಲ್ಲಿ ಕಂಟ್ರೋಲರ್ ಮೂಲಕ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಾಣೇಬೆನ್ನೂರ ನಗರದ ಹೊರವಲಯದಲ್ಲಿರುವ ಹಲಗೇರಿ ರಸ್ತೆಯ ಎಸ್.ಆರ್.ಕೆ ನಗರದ ಪರಿಶಿಷ್ಟ ಪಂಗಡ ವರ್ಗಗಳ ಕಲ್ಯಾಣ ಇಲಾಖೆಯ ನೂತನ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವಿದ್ದು 50-60 ವಿದ್ಯಾರ್ಥಿನಿಯರು ನಗರದ ವಿವಿಧ ಕಾಲೇಜುಗಳಿಗೆ ಪ್ರತಿನಿತ್ಯ ತೆರಳುತ್ತಾರೆ.
ಅಧಿಕೃತವಾಗಿ ಕೋರಿಕೆ ನಿಲುಗಡೆಗೆ ಅವಕಾಶವಿದ್ದು ವಿದ್ಯಾರ್ಥಿನಿಯರನ್ನು ನಗರದ ಕೇಂದ್ರ ಬಸ್ ನಿಲ್ದಾಣದಿಂದ ಹತ್ತಿಸಿಕೊಂಡು ವಸತಿ ನಿಲಯಕ್ಕೆ ನಿಲ್ಲಿಸದೆ 8 ಕಿ ಮೀ ದೂರದ ಹಲಗೇರಿ ಗ್ರಾಮಕ್ಕೆ ಬಿಡುತ್ತಾರೆ ಇಲ್ಲವೇ ನಡು ರಸ್ತೆಯಲ್ಲಿ ಇಳಿಸಿ ಹೋಗುತ್ತಾರೆ. ಈ ರೀತಿಯ ಅಮಾನವೀಯವಾಗಿ ವಿದ್ಯಾರ್ಥಿನಿಯರನ್ನು ಕೆಲ ಕಂಡಕ್ಟರ್ ಹಾಗೂ ಡ್ರೈವರ್ ಗಳು ನಡೆಸಿಕೊಳ್ಳುವ ರೀತಿಯನ್ನು ಎಸ್ಎಫ್ಐ ತೀವ್ರವಾಗಿ ಖಂಡಿಸಿದೆ.
ಇದನ್ನೂ ಓದಿ:ಲೋಕಸಭಾ ಚುನಾವಣೆ : ರಾಜ್ಯಕ್ಕೆ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಆಗಮನ
ಕೆಲ ವಿದ್ಯಾರ್ಥಿನಿಯರು ಈ ರೀತಿ ಮಾಡುವುದು ಸರಿಯಲ್ಲ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುತ್ತೇವೆ ಎಂದು ತಮ್ಮ ಮೊಬೈಲ್ ಸೆರೆ ಹಿಡಿದ ಪೋಟೋ ವಿಡಿಯೋ ಗಳನ್ನು ಬಲವಂತದಿಂದ ಡಿಲೇಟ್ ಮಾಡಿಸಿ ಮದ್ಯೆ ರಸ್ತೆಯಲ್ಲಿ ಇಳಿಸಿಹೋಗುತ್ತಾರೆ ಎಂದು ಹೇಳುತ್ತಿದ್ದಾರೆ. ಆದರಿಂದ ಬೀರು ಬಿಸಿಲಿನ ತಾಪ ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ರೀತಿಯ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವ ಕಂಡಕ್ಟರ್ ಮತ್ತು ಡ್ರೈವರ್ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಹಲಗೇರಿ ಮಾರ್ಗವಾಗಿ ತೆರಳುವ ಶಿಕಾರಿಪುರ, ರಟ್ಟಿಹಳ್ಳಿ, ಮಾಸೂರ ಹಿರೆಕೇರೂರ, ಅಂತರವಳ್ಳಿ ಸೇರಿದಂತೆ ಎಲ್ಲಾ ಬಸ್ ಗಳು ಕಡ್ಡಾಯವಾಗಿ ನಿಲ್ಲಿಸಲು ಆದೇಶ ಹೊರಡಿಸಬೇಕೆಂದು ಎಸ್ಎಫ್ಐ ಮುಖಂಡರಾದ ಐಶ್ವರ್ಯ ಹರನಗೇರಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸುಮಾ ಅಗಸಿಬಾಗಿಲ , ಅಂಬಿಕಾ ಎನ್, ಸಂಗೀತಾ ಲಮಾಣಿ, ಪ್ರತಿಭಾ ಗೊಣೆಪ್ಪನವರ, ಅಶ್ವಿನಿ ಆರ್, ದ್ಯಾಮಾಕ್ಕ ಚವ್ಹಣ್ಣನವರ, ಪ್ರೀಯಾ ಯು ಟಿ ಸೇರಿದಂತೆ ಅನೇಕ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಠೇವಣಿದಾರರ ಪ್ರಶ್ನೆಗೆ ಉತ್ತರಿಸದ ಎಸ್ಕೇಪ್ ಆದ ಸಂಸದ ತೇಜಸ್ವಿಸೂರ್ಯ Janashakthi Media