ಹಾವೇರಿ: ಸರ್ಕಾರಿ ನಿಯಮ ಮೀರಿ ಡೊನೇಷನ್ ವಸೂಲಿ ಮಾಡಿ ವಿದ್ಯಾರ್ಥಿನಿ ಭವಿಷ್ಯ ಹಾಳು ಮಾಡುತ್ತಿರುವ ಶ್ರೀ ಬನಶಂಕರಿ ವಿದ್ಯಾ ಸಂಸ್ಥೆಯ ಹೆಚ್.ಎಸ್.ಬಿ ಪಿಯು ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಮೇಲೆ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್ ಹಾಗೂ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಉಮೇಶಪ್ಪ ಹೆಚ್ ರಿಗೆ ಮನವಿ ಪತ್ರ ಸಲ್ಲಿಸಿದರು. ಡೊನೇಷನ್
ರಾಣೇಬೆನ್ನೂರಿನಲ್ಲಿ ಹೊಸದಾಗಿ ಪ್ರಾರಂಭವಾಗಿರುವ ಡಿವಿಎಸ್ ಮೆಡಿಕಲ್ ಸಂಸ್ಥೆ ದಾವಣಗೆರೆ ಮೂಲದ ಸಂಸ್ಥೆಯು ರಾಣೇಬೆನ್ನೂರಿನಲ್ಲಿ ಎಚ್.ಎಸ್.ಬಿ ಪಿಯು ಕಾಲೇಜ್ ಹೆಸರಿನಲ್ಲಿ ವಿಜ್ಞಾನ ವಿಭಾಗ ನಡೆಸುತ್ತಿದ್ದು 18 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಂಡಿದೆ. ಕಾಕೋಳ ಗ್ರಾಮದ ವಿದ್ಯಾರ್ಥಿನಿ ಸಹನಾ ಮಹಾಂತೇಶ ಅಡಿವೇರ್ ಕಲಾ ವಿಭಾಗಕ್ಕೆ ಸೇರಬೇಕೆಂದಿರುವ ವಿದ್ಯಾರ್ಥಿನಿಯು ವಿಚಾರಿಸಲು ಹೋದಾಗ ಸರಿಯಾಗಿ ಮಾಹಿತಿ ನೀಡದೆ ಆಸೆ ಆಕಾಂಕ್ಷೆಗಳನ್ನು ತೋರಿಸಿ ವಿಜ್ಞಾನ ವಿಭಾಗಕ್ಕೆ 10.000 ಸಾವಿರು ಕಟ್ಟಿಸಿಕೊಂಡು ದಾಖಲಾತಿ ಮಾಡಿಸಿಕೊಂಡಿದ್ದಾರೆ. ಆದರೆ ವಿದ್ಯಾರ್ಥಿನಿ ಕೆಲವು ದಿನಗಳು ಕಾಲ ತರಗತಿಗೆ ಹೋಗಿ ವಿದ್ಯಾಭ್ಯಾಸ ಮಾಡಲು ಆಗುತ್ತಿಲ್ಲ ಕಲಾ ವಿಭಾಗಕ್ಕೆ ಹೋಗುತ್ತೇನೆ ಹಾಗಾಗಿ ವರ್ಗಾವಣೆ ಪತ್ರ (ಟಿ.ಸಿ) ಹಾಗೂ ಕಟ್ಟಿದ ಶುಲ್ಕ ವಾಪಸ್ ಕೊಡಿ ಎಂದು ಪಾಲಕರು ಕಾಲೇಜಿನ ಆಡಳಿತ ಮಂಡಳಿ ಹತ್ತಿರ ವಿನಂತಿಸಿಕೊಂಡಿದ್ದಾರೆ. ಡೊನೇಷನ್
ಆಡಳಿತ ಮಂಡಳಿಯು ವಿದ್ಯಾರ್ಥಿನಿಗೆ ಅನುಕೂಲ ಮಾಡಿಕೊಡುವ ಬದಲಿಗೆ ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿ ಯಾವುದೇ ಕಾರಣಕ್ಕೂ ವರ್ಗಾವಣೆ ಪತ್ರ ಕೊಡಲು ಸಾಧ್ಯವಿಲ್ಲ ಕೂಡಲೇ ಬಾಕಿ ಉಳಿದ 25.000 ಕಾಲೇಜ್ ಶುಲ್ಕ ತುಂಬಬೇಕು ಹಾಗೂ ವರ್ಗಾವಣೆ ಪತ್ರವನ್ನು ಇನ್ನೂ ಒಂದು ತಿಂಗಳ ನಂತರ ಬೆಂಗಳೂರಿನ ಪಿಯು ಬೋರ್ಡ್ ಗೆ ಅರ್ಜಿ ಹಾಕಿ ದಂಡ ತುಂಬಿ ಪಡೆದುಕೊಳ್ಳಬೇಕು ಎಂದು ಇಲ್ಲಸಲ್ಲದ ನಿಯಮಗಳನ್ನು ಹಾಕಿ ಶಿಕ್ಷಣದ ಜ್ಞಾನವಿಲ್ಲದ ಅನಕ್ಷರಸ್ಥ ಬಡತನ ಕುಟುಂಬದ ವಿದ್ಯಾರ್ಥಿನಿ ಪಾಲಕರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಡೊನೇಷನ್
ಇದನ್ನೂ ಓದಿ: ರೈತರಿಗೆ ದ್ರೋಹ ಬಗೆದ ಕೇಂದ್ರ ಬಜೆಟ್ – ಪ್ರಾಂತ ರೈತ ಸಂಘ ತೀವ್ರ ಖಂಡನೆ
ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ವಿದ್ಯಾರ್ಥಿ ಸಂಘಟನೆಗೆ ದೂರವಾಣಿ ಮೂಲಕ ವಿದ್ಯಾರ್ಥಿನಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಎಚ್.ಎಸ್.ಬಿ ಪಿಯು ಕಾಲೇಜ್ ಸಿಬ್ಬಂದಿ ಸುನೀತಾ ಅವರ ವಿಚಾರಿಸಲು ಮುಂದಾದಾಗ ವಿದ್ಯಾರ್ಥಿ ಸಂಘಟನೆದವರು ಇದರಲ್ಲಿ ಭಾಗವಹಿಸಬೇಡಿ ನಮಗೆ ಗೊತ್ತಿದೆ ಯಾವ ರೀತಿ ಶುಲ್ಕ ವಸೂಲಿ ಮಾಡಬೇಕೆಂದು ಏರು ಧ್ವನಿಯಲ್ಲಿ ಮಾತನಾಡಿ ಈ ವಿಚಾರದಲ್ಲಿ ಭಾಗವಹಿಸದರೆ ಸರಿ ಇರುವುದಿಲ್ಲ ಎಂದು ದಮ್ಮಕಿ ಹಾಕಿದಲ್ಲದೆ ಯಾವುದೇ ಪೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ ಆದರಿಂದ ತಾವುಗಳು ಈ ಪ್ರಕರಣವನ್ನು ಸೂಕ್ತ ತನಿಖೆ ನಡೆಸಬೇಕು. ಶಿಕ್ಷಣ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದ ಹೆಚ್.ಎಸ್.ಬಿ ಪಿಯು ಕಾಲೇಜ್ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ವಿದ್ಯಾರ್ಥಿನಿ ಸಹನಾ ಅಡಿವೇರ್ ವಿದ್ಯಾಭ್ಯಾಸ ಭವಿಷ್ಯಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಎಸ್‌ಎಫ್‌ಐ ಆಗ್ರಹಿಸಿದೆ.
ಇದನ್ನೂ ನೋಡಿ: ಖಾಸಗಿ ಶಾಲೆಗಳು ಪಡೆಯುತ್ತಿರುವುದು ಶುಲ್ಕವೋ! ವಸೂಲಿಯೋ!!?