ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೋವೆರಹಟ್ಟಿ ಗ್ರಾಮದ ಮೃತ ವಿದ್ಯಾರ್ಥಿನಿ ವರ್ಷಿತಾ ಮನೆಗೆ ಎಸ್ಎಫ್ಐ ನಿಯೋಗ ಭೇಟಿ ನೀಡಿ ಬಡ ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡಿದೆ.
ಚಿತ್ರದುರ್ಗ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವೀತಿಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ವಸತಿ ಸೌಲಭ್ಯ ಪಡೆದ ವಿದ್ಯಾರ್ಥಿನಿ ಮನೆಗೆ ಹೋಗುತ್ತೇನೆಂದು ಆಗಸ್ಟ್ 14 ರಂದು ಸಂಜೆ ಹೋಗಿದ್ದಾಳೆ. ಅವಳ ಪೋನ್ ಸ್ವಿಚ್ ಆಫ್ ಆಗಿ ಎರಡು ದಿನಗಳ ನಂತರ ಅವರ ತಾಯಿ ಜ್ಯೋತಿ ಹಾಸ್ಟೆಲ್, ಕಾಲೇಜ್ ವಿಚಾರಣೆ ಮಾಡಿದಾಗ ಕಾಣೆಯಾಗಿದ್ದ ವಿಷಯ ತಿಳಿದು. ಬೇಸರದಿಂದ ಇದ್ದ ಕುಟುಂಬಕ್ಕೆ ಆಗಸ್ಟ್-19ರ ತಡರಾತ್ರಿಯೇ ಪರಿಚಯಸ್ಥರ ಮೂಲಕ ವಿದ್ಯಾರ್ಥಿನಿ ಅರೆಬೆಂದ ಮೃತ ದೇಹ ಪತ್ತೆಯಾದ ಸುದ್ದಿ ಕೇಳಿ ಸಿಡಿಲು ಬಡಿದಂತೆಯಾಗಿದೆ ಎಂದರು.
ಇದನ್ನೂ ಓದಿ: 11 ಸಾವಿರ ಕನ್ನಡ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ: ಶಿಕ್ಷಣ ಸಚಿವರಿಗೆ ಎಸ್‌ಎಫ್‌ಐ ಎಚ್ಚರಿಕೆ
ವಿದ್ಯಾರ್ಥಿನಿ ವರ್ಷಿತಾ ಕುಟುಂಬದ ಹಿನ್ನೆಲೆ ದಲಿತ ಸಮುದಾಯದ ತುಂಬಾ ಕಡು ಬಡತನದಿಂದ ಕೂಡಿದು ತಂದೆ ತಿಪ್ಪೇಶಪ್ಪ, ತಾಯಿ ಜ್ಯೋತಿ ದಿನಗೂಲಿ ಕೆಲಸ ಮಾಡಿ ಸಣ್ಣ ಮನೆಯಲ್ಲಿ ವಾಸವಾಗಿದ್ದು ಗಂಡು ಮಕ್ಕಳಿಲ್ಲದ ಮನೆಗೆ ಹಿರಿಯ ಮಗಳಾಗಿದ ವರ್ಷಿತಾ ತಂಗಿಯರಾದ ಭಾನುಪ್ರೀಯಾ ಎಸ್ಎಸ್ಎಲ್ಸಿ ಸ್ಪಂದನ ದ್ವೀತಿಯ ಪಿಯುಸಿ ವಿದ್ಯಾಭ್ಯಾಸವನ್ನು ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಮೂವರು ಸರ್ಕಾರಿ ವಸತಿ ನಿಲಯ ಆಸರೆಯಲ್ಲಿ ಉನ್ನತ ಶಿಕ್ಷಣ ಭವಿಷ್ಯದ ಕನಸು ಕಟ್ಟಿಕೊಂಡಿದ್ದರು.
ಶಿಕ್ಷಣದ ಅವಶ್ಯಕತೆಗೆಂದು ತಾಯಿ ಕೂಲಿ ಕೆಲಸ ಮಾಡಿ ಮೊಬೈಲ್ ಕೊಡಿಸಿದ್ದು ವಿದ್ಯಾರ್ಥಿನಿ ಸ್ನೇಹ ಸಲುಗೆ ಪ್ರೀತಿವೆಂಬ ವ್ಯಾಮೋಹಕ್ಕೆ ಬಲಿಯಾಗಿ ಕೊಲೆಗೆಡುಕರ ದಾಳಕ್ಕೆ ಸಿಲುಕಿ ರಾಷ್ಟ್ರೀಯ ಹೆದ್ದಾರಿ ಬಳಿ ಅರೆಬರೆಯಾಗಿ ಬೆಂದು ಸಾವಿಗೆಹಿಡಾಗಿದ ವಿದ್ಯಾರ್ಥಿನಿ ಕುಟುಂಬ ಈಗ ಅನಾಥವಾಗಿದೆ. ತಂದೆ- ತಾಯಿ ಕಂಡ ಕನಸು ನುಚ್ಚು ನೂರಾಗಿದೆ.

ವಿದ್ಯಾಭ್ಯಾಸ ಮುಗಿಸಿ ಕುಟುಂಬದ ಜವಾಬ್ದಾರಿ ಹೊರಬೇಕಾಗಿದ ವಿದ್ಯಾರ್ಥಿನಿಯ ಮೇಲೆ ತಾಯಿ ಇಬ್ಬರು ತಂಗಿಯರು ಅವಲಂಬಿತವಾಗಿದ್ದರು. ಅವಳಿಲ್ಲದೆ ಕುಟುಂಬಕ್ಕೆ ಆಸರೆ ಯಾರು? ವಸತಿ ನಿಲಯದಿಂದ ಹೋದ ಬಳಿಕ ನಿಮ್ಮ ಮಗಳು ಬಂದಿದ್ದಾಳಾ? ಇಲ್ವಾ? ಎಂದು ಒಂದು ಪೋನ್ ಮಾಡಿದ್ದಾರೆ ಸಾಕಾಗಿತ್ತು ನನ್ನ ಮಗಳನ್ನು ಉಳಿಸಿಕೊಳ್ಳುತ್ತಿದೆವು. ಹಾಸ್ಟೆಲ್ ನಿಂದ ಹೋಗಿ 5-6 ದಿನಗಳಾಗಿದೆ ಅಂದರೆ ಸರ್ಕಾರಿ ವಸತಿ ನಿಲಯದ ನಿಲಯ ಪಾಲಕರ ನಿರ್ಲಕ್ಷ್ಯತನವೇ ಮಗಳ ಬಲಿಯಾಗುವುದಕ್ಕೆ ಪ್ರಮುಖ ಕಾರಣವೆಂದು ತಾಯಿ ಜ್ಯೋತಿ ಗಂಭೀರ ಆರೋಪ ಮಾಡಿದ್ದಾರೆ.
ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಸಮಗ್ರ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥ ಆರೋಪಗಳಿಗೆ ಕಠಿಣ ಶಿಕ್ಷೆ ವಿಧಿಸಲು ನ್ಯಾಯಾಲಯಕ್ಕೆ ಸಂಪೂರ್ಣ ವರದಿ ಸಲ್ಲಿಸಬೇಕು. ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಆಯೋಗವು ಖಾಸಗಿ ವಸತಿ ನಿಲಯಗಳು, ಪಿಜಿ ಸೆಂಟರ್ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಹೆಚ್ಚು ನಿಗಾ ವಹಿಸಬೇಕು, ಉಚಿತ ಆರೋಗ್ಯ ತಪಾಸಣೆ ನಡೆಸಬೇಕು. ಪ್ರತಿ ರಾತ್ರಿ ವಸತಿ ನಿಲಯಗಳಲ್ಲಿ ರಾತ್ರಿ ಕಾವಲುಗಾರು ನೇಮಕಾ ಮಾಡಬೇಕು. ನಿರಂತರವಾಗಿ ತಿಂಗಳಿಗೊಮ್ಮೆ ಪಾಲಕರು ಸಭೆ ನಡೆಸಿ ಸುತ್ತೋಲೆ ಹೊರಡಿಸಬೇಕು. ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಕನಿಷ್ಠ 25 ಲಕ್ಷ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್, ರಾಜ್ಯ ಸಮಿತಿ ಸದಸ್ಯರಾದ ಅನಂತರಾಜ್ ಬಿ ಎಮ್, ಶಿವಾರೆಡ್ಡಿ ನೇತೃತ್ವದ ನಿಯೋಗದಲ್ಲಿ ರಕ್ಷಿತಾ ಎಸ್ ಎ, ಮುದ್ದುಶ್ರೀ ಡಿ, ಐಶ್ವರ್ಯ ಕೊಲಮ್, ಸಾಯಿ ವರ್ಷಿಣಿ, ರಕ್ಷಿತಾ ದುರ್ಗದ ಪಾಲಯ, ಸಿಂಧು ಇ, ಪವಿತ್ರ ಎಸ್ ಉಪಸ್ಥಿತರಿದ್ದರು.
ಇದನ್ನೂ ನೋಡಿ: ವಚನಾನುಭವ – 31 | ಅಂಬಿಗರ ಚೌಡಯ್ಯನ ವಚನ – ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ Janashakthi Media
