ಅತ್ಯಾಚಾರ ಪ್ರಕರಣದಲ್ಲಿಬಂಧಿತರಾಗಿದ್ದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದ ಕೆಲವೇ ದಿನಗಳಲ್ಲಿ 19 ವರ್ಷದ ಯುವತಿಯನ್ನ ಹಾಡ ಹಗಲೇ ಕೊಡಲಿಯಿಂದ ಕಡಿದು ಕೊಲೆ ಮಾಡಿದ್ದಾರೆ. ಉತ್ತರ ಪ್ರದೇಶದ ಕೌಸಂಬಿ ಜಿಲ್ಲೆಯ ಮಹೇವಾಗಟ್ ಎಂಬಲ್ಲಿ ಸೋಮವಾರ ಯುವತಿಯನ್ನ ಹತ್ಯೆ ಮಾಡಲಾಗಿತ್ತು. ಈ ಕೊಲೆ ಮಾಡಿದ ಆರೋಪಿಗಳು ಸಹೋದರರು ಎಂದು ತಿಳಿದುಬಂದಿದ್ದು, ಅದರಲ್ಲೊಬ್ಬ 3 ವರ್ಷಗಳ ಹಿಂದೆ ಇದೇ ಯುವತಿಯನ್ನ ಅತ್ಯಾಚಾರ ಎಸಗಿದ್ದ ಎಂದು ತಿಳಿದುಬಂದಿದೆ.
ಆರೋಪಿಗಳನ್ನ ಅಶೋಕ್ ಮತ್ತು ಪವನ್ ನಿಶಾದ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಕೆಲವು ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಗ್ರಾಮಸ್ಥರು ನೋಡನೋಡುತ್ತಿದ್ದಂತೆಯೇ ನಡುರಸ್ತೆಯಲ್ಲೇ ಕೊಡಲಿಯಿಂದ ಯುವತಿಯನ್ನ ಕೊಚ್ಚಿ ಕೊಲೆ ಮಾಡಿದ್ದಾರೆ. ಇಬ್ಬರನ್ನು ಕತ್ತರಿಸುತ್ತಿದ್ದರು ಜನರು ಭಯಗೊಂಡು ಅಸಹಾಯಕರಾಗಿ ನೋಡುತ್ತಾ ನಿಂತಿದ್ದರು. 3 ವರ್ಷಗಳ ಹಿಂದೆ ಸಂತ್ರಸ್ತೆಯನ್ನ ಪವನ್ ನಿಶಾದ್ ಅತ್ಯಾಚಾರ ಎಸಗಿದ್ದ, ಆ ಸಮಯದಲ್ಲಿ ಯುವತಿ ಅಪ್ರಾಪ್ತೆಯಾಗಿದ್ದಳು ಎಂದು ತಿಳಿದುಬಂದಿದೆ. ಜಾಮೀನಿನ
ಇದನ್ನೂ ಓದಿ : ಮಧ್ಯ ಪ್ರದೇಶ|ಹಾಡಹಗಲೇ ಬೈಕ್‌ನಲ್ಲಿ ಯುವತಿಯ ಅಪಹರಣ
ಅಶೋಕ್ ಬೇರೆ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ, ಎರಡು ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ. ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಹಿಂಪಡೆಯುವಂತೆ ಇಬ್ಬರೂ 19 ವರ್ಷದ ಯುವತಿಗೆಕುಟುಂಬಕ್ಕೆ ಒತ್ತಡ ಹೇರಿದ್ದರು. ಆಕೆ ಒಪ್ಪದ್ದಕ್ಕೆ ದನಗಳೊಂದಿಗೆ ಮನೆಗೆ ಹಿಂತಿರುಗುತ್ತಿದ್ದ ವೇಳೆ ಆಕೆಯನ್ನ ಹಿಂಬಾಲಿಸಿ ಗ್ರಾಮಸ್ಥರ ಎದುರೇ ಆಕೆಯನ್ನು ಕೊಂದು ಹಾಕಲಾಗಿದೆ.
ಈ ವಿಡಿಯೋ ನೋಡಿ : ಪೋಕ್ಸೋ ಪ್ರಕರಣದ ಆರೋಪಿ ಸ್ವಾಮಿಗೆ ಪಾದಪೂಜೆ ! ಜನರ ಪ್ರಜ್ಞೆಗೆ ಏನಾಗಿದೆ? – ಮೂಡ್ನಾಕೂಡು ಚಿನ್ನಸ್ವಾಮಿ