ರಾಯಚೂರು :ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಗೆ ನಿರ್ವಾಹಕ (ಕಂಡಕ್ಟರ್) ಲೈಂಗಿಕ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದೂರು ನೀಡಿದ ಮಹಿಳೆಗೆ ಬೆದರಿಕೆಯೊಡ್ಡಲಾಗಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳು ನಿರ್ವಾಹಕನ ರಕ್ಷಣೆಗೆ ನಿಂತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕೆಎಸ್‌ಆರ್‌ಟಿಸಿ
ಪ್ರಕರಣ ನಡೆದು ಒಂದು ವರ್ಷವಾಗಿದೆ. ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸರು ಒಂದು ವರ್ಷದಿಂದ ಯಾವುದೇ ಕ್ರಮವನ್ನು ಜರುಗಿಸದಿರುವುದು ಕಾನೂನಿನ ಕ್ರಮವನ್ನು ಪ್ರಶ್ನಿಸುವಂತಿದೆ. ಆರೋಪಿ ಪ್ರಬಲ ಜಾತಿಯವನಾಗಿದ್ದು, ದೂರು ನೀಡಿದ ಮಹಿಳೆ
ದಲಿತ ಸಮುದಾಯಕ್ಕೆ ಸೇರಿದ್ದಾರೆ. ಆರೋಪಿಯ ತನ್ನ ಜಾತಿಯ ಪ್ರಭಾವ ಹಾಗೂ ಲಂಚದ ಆಮೀಷೆಯ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರಾಯಚೂರು ಜಿಲ್ಲೆಯ ಹೇಮನಾಳ ಗ್ರಾಮದ ನಿವಾಸಿಯಾಗಿರುವ ದೂರುದಾರರು ಗಾರೆ ಕೆಲಸವನ್ನು ಮಾಡಿಕೊಂಡಿದ್ದಾರೆ. ದೂರು ನೀಡಿ 11 ತಿಂಗಳು ಕಳೆದ ನಂತರ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಜನವರಿ 06, 2025 ರಂದು ವಿಚಾರಣೆ ನಡೆಸಲಾಗಿದೆ. ಕೆಎಸ್‌ಆರ್‌ಟಿಸಿ
ಇದನ್ನೂ ಓದಿ : ಮುಂಬೈ| ಕಾಡು ಹಂದಿ ಎಂದು ಭಾವಿಸಿ ತಮ್ಮವನೊಬ್ಬನನ್ನೇ ಕೊಂದ ಬೇಟೆಗಾರರು ಕೆಎಸ್‌ಆರ್‌ಟಿಸಿ
ಘಟನೆಯ ಹಿನ್ನೆಲೆ
18-02-2024 ರಂದು KSRTC ಬಸ್ ಸಂಖ್ಯೆ ಕೆ.ಎ-36 ಎಫ್ 1532 , ಬಸ್ ನಲ್ಲಿ ರಾಯಚೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವ ಮಾರ್ಗದಲ್ಲಿ ಲಕ್ಷ್ಮೀಕಾಂತ್ ರೆಡ್ಡಿ ಕಂಡಕ್ಟರ್ ಜಿಲ್ಲೆ ನಂ-410 ರಾಯಚೂರು ಮೂರನೇ ಘಟಕ ಈತನು ರಾತ್ರಿ ಬಸ್ಸಿನಲ್ಲಿ ಲೈಟ್ ಆಫ್ ಅಗುತ್ತಿದ್ದಂತೆ ನನ್ನ ಮೈ-ಕೈಮುಟ್ಟಿ (ಖಾಸಗಿ ಅಂಗಕ್ಕೆ ಕೈಹಾಕಿ) ಲೈಂಗಿಕ ಕಿರುಕುಳ ನೀಡಿದ್ದು, ಸದರಿ ವಿಷಯಕ್ಕೆ ಸಂಬಂದಿಸಿದಂತೆ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನಾನು ನೇರವಾಗಿ ಭೇಟಿಯಾಗಿ ತಪ್ಪಿತಸ್ಥನ ವಿರುದ್ಧ ಸೂಕ್ತ ಕಾನೂನೂ ಕ್ರಮ ಕೈಗೊಳ್ಳುವಂತೆ ಅರ್ಜಿಯನ್ನು ಸಲ್ಲಿಸಿದ್ದರೂ, ಯಾವುದೇ ರೀತಿ ಸ್ಪಂದಿಸದೆ ಬೇಜವಬ್ದಾರಿತನ ತೋರಿಸಿದ್ದಾರೆ. ತಪ್ಪಿತಸ್ಥನ ವಿರುದ್ಧ ಜನಪರ ಸಂಘಟನೆಗಳು ಪ್ರತಿಭಟಿಸಿದಾಗ ಬೇಕು ಬೇಡ ಎಂಬಂತೆ ಶಿಸ್ತು ಕ್ರಮ ಕೈಗೊಂಡಿದ್ದಾರೆ ಎಂದು ದೂರುದಾರ ಮಹಿಳೆ ಜನಶಕ್ತಿ ಮೀಡಿಯಾಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಸದರಿ ಕಂಡಕ್ಟರ್ ಪ್ರಸ್ತುತ ದಿನಗಳಲ್ಲಿ ಪುನಃ ನನ್ನ ಸಂಬಂದಿಗಳಿಗೆ ಫೋನ್ ಮಾಡಿ ಹೆದರಿಸುವುದು, ಬೆದರಿಸುವುದು ಮಾಡುತ್ತಿದ್ದಾರೆ. ದೂರು ಅರ್ಜಿಯನ್ನು ವಾಪಸ್ ಪಡೆಯಲು ಒತ್ತಾಯಿಸಿ ಗುಂಡಾಗಿರಿ ಮಾಡುತ್ತಿದ್ದಾರೆ. ತಪ್ಪಿತಸ್ಥನಾದ ಲಕ್ಷ್ಮೀಕಾಂತರೆಡ್ಡಿಗೆ ಕೊಪ್ಪಳ ವಿಭಾಗದ ಭದ್ರತಾ ಜಾಗೃತ ಅಧಿಕಾರಿ ಶ್ರೀದೇವಿ, ಕಲಬುರಗಿ ಭದ್ರತಾ ಜಾಗೃತ ಅಧಿಕಾರಿ ಆನಂದ ಭದ್ರಕಾಳಿ, ರಾಯಚೂರು ವಿಭಾಗ ನಿಯಂತ್ರಣ ಅಧಿಕಾರಿ ಎಮ್.ಎಸ್. ಚಂದ್ರಶೇಖರ ಅವರು ನಿರ್ವಾಕನನ್ನು ರಕ್ಷಿಸುತ್ತಿದ್ದಾರೆ ಎಂದು ದೂರುದಾರ ಮಹಿಳೆ ಆರೋಪಿಸಿದ್ದಾರೆ.
ಕಾನೂನಿನ ಪ್ರಕಾರ ಲಕ್ಷ್ಮೀಕಾಂತರೆಡ್ಡಿಗೆ ಶಿಕ್ಷೆ ನೀಡಿ ನನಗೆ ನ್ಯಾಯ ಒದಗಿಸಬೇಕು ಎಂದು ದೂರುದಾರ ಮಹಿಳೆ ಮನವಿ ಮಾಡಿದ್ದಾರೆ.
ವಿಡಿಯೋ ನೋಡಿ : ಕೇಂದ್ರ ಬಜೆಟ್ 2025 : ಬಡವರಿಗೆ ಏನೂ ಇಲ್ಲ! ಶ್ರೀಮಂತರಿಗಾಗಿ ಮಂಡಿಸಿದ ಬಜೆಟ್ Janashakthi Media ಕೆಎಸ್‌ಆರ್‌ಟಿಸಿ