ಪೆನ್‌ಡ್ರೈವ್‌ ಪ್ರಕರಣ : ತನಿಖೆ ವಿಳಂಬವಾದಷ್ಟು ಸಾಕ್ಷ್ಯನಾಶವಾಗುವ ಸಾಧ್ಯತೆಯಿದೆ – ಎಚ್. ಹನುಮಂತರಾಯ ಕಳವಳ

ಬೆಂಗಳೂರು :  ಪೆನ್‌ಡ್ರೈವ್ ಪ್ರಕರಣ ದಿಕ್ಕು ತಪ್ಪುತ್ತಿದ್ದು, ಆರೋಪಿಗಳು ಅತ್ಯಂತ ಪ್ರಭಾವಿಗಳಾಗಿರುವುದರಿಂದ ಸಾಕ್ಷಿ ನಾಶ ಸಾಧ್ಯತೆ ಇದೆ ಎಂದು ವಕೀಲ ಸಿ ಎಚ್. ಹನುಮಂತರಾಯ ಕಳವಳ ವ್ಯಕ್ತಪಡಿಸಿದರು.

ಅಖಿಲ‌ ಭಾರತ ಜನವಾದಿ ಮಹಿಳಾ ಸಂಘಟನೆಯು ನಗರದಲ್ಲಿ ಗುರುವಾರ ಹಮ್ಮಿಕೊಂಡ ‘ಹಾಸನದ ಲೈಂಗಿಕ ದೌರ್ಜನ್ಯ ಪೆನ್‌ಡ್ರೈವ್‌ ಹಂಚಿಕೆ: ಮಾಯವಾಗುತ್ತಿದೆ ಲಿಂಗ ಸಂವೇದನೆ, ನಮ್ಮ ಜವಾಬ್ದಾರಿಗಳೇನು?’ ಸಮಾಲೋಚನಾ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಪ್ರಕರಣವನ್ನು  ಉತ್ಪೆಕ್ಷೆ ಮಾಡಬಾರದು ಧಾವಂತದಲ್ಲಿ.ಏನು ನಡೆದಿದೆ ಅದನ್ನು ನೈಜವಾಗಿ ತನ್ನದೇ ಆದ ರೀತಿಯಲ್ಲಿ ಹೇಳಬೇಕು.ಷರತ್ತುಬದ್ಧ ಜಾಮೀನಿನಲ್ಲಿ ಆ ಪ್ರದೇಶಕ್ಕೆ ಆರೋಪಿ ಹೋಗಬಾರದು. ದೇಶ ಬಿಡಬಾರದು ಎಂದು ಇದೆ. ಆದರೆ ಪ್ರಶ್ನೆ ಏನೂ ಅಂದರೆ ಅವರು ಮಾಡುವುದಿಲ್ಲ, ಬದಲಾಗಿ ಮಾಡಿಸುತ್ತಾರೆ. ಆರೋಪಿಗಳು ಆ ಪ್ರದೇಶದ ಪ್ರಭಾವಿಯಾಗಿರುವುದರಿಂದ ಅವರು ಹೋಗದೇ ಅವರ ಜೇಬಿನಲ್ಲೇ ಇರುವವರನ್ನು ಮುಂದೆ ಬಿಟ್ಟು ಸಾಕ್ಷಿ ನಾಶ ಮಾಡುತ್ತಾರೆ..ಇವರು ಹೋಗದೇ ಇದ್ದರೂ ಇವರ ಕಡೆಯವರನ್ನು ಬಿಟ್ಟು ಮಾಡಿಸಬಲ್ಲರು. ಸಾಕ್ಷಿದಾರರ ಮನೆಗಳನ್ನು ಕಾಯಬೇಕು. ಸಂತ್ರಸ್ತರಿಗೆ ರಕ್ಷಣೆ ಕೊಡಬೇಕು. ಯಾವ ಸಾಕ್ಷ್ಯವನ್ನು ಇವರು ಉಳಿಯಲು ಬಿಡುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಈ ಪ್ರಕರಣದ ತನಿಖೆ ನಡೆಸುವವರು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಾಗಬೇಕು. ಬಿ.ಕೆ.ಸಿಂಗ್ ಹೊರತುಪಡಿಸಿದರೆ ವಿಶೇಷ ತನಿಖಾ ತಂಡದಲ್ಲಿರುವವರು ತನಿಖೆಯಲ್ಲಿ ಅಷ್ಟಾಗಿ ಹೆಸರು ಮಾಡಿಲ್ಲ. ಇದರಿಂದ ಪ್ರಕರಣ ಆರಂಭದಿಂದಲೂ ದಿಕ್ಕು ತಪ್ಪುತ್ತಾ ಇದೆ.  ಇಂತಹ ಪ್ರಕರಣಗಳು ಬಂದಾಗ ರಾಜ್ಯದ ಅಧಿಕಾರಿಗಳೇ ತನಿಖೆ ನಡೆಸಬೇಕೆಂದಿಲ್ಲ, ಹೊರಗಿನ ಅಧಿಕಾರಿಗಳನ್ನೂ ನೇಮಿಸಬಹುದಾಗಿದೆ ಎಂದರು.

ಹೈಕೋರ್ಟ್ ವಕೀಲ ಬಿ‌.ಟಿ.ವೆಂಕಟೇಶ್ ಮಾತನಾಡಿ, ವೈಯಕ್ತಿಕ ಸ್ವಾತಂತ್ರ ಸಾಮಾಜಿಕ ಸ್ವಾತಂತ್ರ್ಯ ನೋಡಿಕೊಂಡು ನ್ಯಾಯಾಲಯ ತೀರ್ಪು ನೀಡಬೇಕಾಗುತ್ತದೆ. ವಿಷಯಗಳ ಬಗ್ಗೆ ತಿಳುವಳಿಕೆ ತುಂಬಾ ಕಡಿಮೆಯಿದ್ದಾಗ ಇಂತಹವು ನಡೆಯುತ್ತವೆ.ನಮ್ಮ ದೇಶದಲ್ಲಿ ತಪ್ಪುಮಾಡದೇ ಬಹಳಷ್ಟು ಬಡಜನ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಯಾವುದನ್ನು ಗೌಣ ಮಾಡುತ್ತಿದ್ದೇವೆ ಮಾಡಬಾರದು ಎನ್ನೋದನ್ನು ನಾವು ನೋಡಕೊಳ್ಳಬೇಕು. ಸಾಕ್ಷಿಗಳು ದೂರುದಾರರು ಹೇಳಿದಂತಹದ್ದನ್ನು ಬರೆಯೋವುದಕ್ಕಿಂತ ತುರುಕುವುದು ಜಾಸ್ತಿ. ಮಹಿಳೆಯರು ರೇಪ್‌ ಪ್ರಕರಣದಲ್ಲಿ ದೂರು ಕೊಡೋದು ಕಡಿಮೆ. ನಮ್ಮ ದೇಶದಲ್ಲಿ ದೂರು ಕೊಡೋದು ಬಹಳ ಕಡಿಮೆ ಎಂದರು.

ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಡಿಯೊಗಳು ಹೊರ ಬಂದಿದ್ದರಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು. ಇಲ್ಲವಾದಲ್ಲಿ ಈ ಪ್ರಕರಣವೂ ಬಹಿರಂಗವಾಗದೆ ಮುಚ್ಚಿಹೋಗಿ, ಇನ್ನಷ್ಟು ಮಂದಿ ದೌರ್ಜನ್ಯಕ್ಕೆ ಒಳಗಾಗುವ ಸಾಧ್ಯತೆಗಳಿದ್ದವು. ಈ ರೀತಿಯ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗಲು ಕನಿಷ್ಠ ಮೂರು ವರ್ಷಗಳು ಬೇಕಾಗುತ್ತವೆ. ಕೆಲ ಪ್ರಕರಣಗಳು 10–15 ವರ್ಷಗಳು ನಡೆದ ಉದಾಹರಣೆ ಇದೆ. ಆದ್ದರಿಂದ ಸಂತ್ರಸ್ತೆಯರಿಗೆ ಮಾನಸಿಕ ಸ್ಥೈರ್ಯ ತುಂಬುವ ಹಾಗೂ ಅವರಿಗೆ ರಕ್ಷಣೆ ಒದಗಿಸುವ ಕೆಲಸವೂ ಆಗಬೇಕು’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ‘ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ವೀಕ್ಷಿಸಿದಾಗ ಅಸಹಾಯಕ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ದೌರ್ಜನ್ಯ ಸೇರಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಿಳೆಯರು ದೂರು ನೀಡಲು ಬಂದಾಗ ಸ್ಥಳೀಯ ಪೊಲೀಸರು ಸೌಜನ್ಯದಿಂದ ನಡೆದುಕೊಳ್ಳಬೇಕು’ ಎಂದು ಹೇಳಿದರು.

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಮಾತನಾಡಿ, ‘ಪ್ರಕರಣದ ತನಿಖೆ ಕುಂಟುತ್ತಾ ಸಾಗುತ್ತಿದೆ’ ಜಾಮೀನಿನ ಮೂಲಕ ಹೊರ ಬಂದವರು ಸಾಕ್ಷಿ ನಾಶ ಮಾಡುತ್ತಾರೆ, ಪ್ರಭಾವ ಬೀರುತ್ತಾರೆ. ಹಾಗಾಗಿ ಪೆನ್‌ಡ್ರೈವ್‌ ಪ್ರಕರಣ ದಾರಿ ತಪ್ಪಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸಮಾಲೋಚನಾ ಗೋಷ್ಠಿಯಲ್ಲಿ  ಅದ್ಯಕ್ಷತೆಯನ್ನು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾದ್ಯಕ್ಷೆ ಡಾ. ಮೀನಾಕ್ಷಿ ಬಾಳಿ ವಹಿಸಿದ್ದರು, ರಾಜ್ಯ ಕಾರ್ಯದರ್ಶಿ ದೇವಿ ಕಾರ್ಯಕ್ರಮ ನಿರ್ವಹಿಸಿದರು, ಕೆ.ಎಸ್‌ ವಿಮಲಾ ಪ್ರಸ್ಥಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ  ಹಿರಿಯ ಸಾಹಿತಿ ಪ್ರೊ.ಎಸ್. ಜಿ.ಸಿದ್ದರಾಮಯ್ಯ, ಲಿಂಗತ್ವ ಅಲ್ಪಸಂಖ್ಯಾತರ ಸಾಮಾಜಿಕ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ,  ಡಾ.ವಿಜಯಾ, ಲೇಖಕಿ ಡಾ.ವಸುಂಧರಾ ಭೂಪತಿ, ಇಂದಿರಾ ಕೃಷ್ಣಪ್ಪ,  ವಿನಯ್ ಶ್ರೀನಿವಾಸ, ಮಧು ಭೂಷಣ್, ಜ್ಯೋತಿ ಏ, ನೇಮಿಚಂದ್ರ,ಸಿ.ಜಿ.ಮಂಜುಳಾ, ಡಾ.ಎಚ್.ಜಿ.ಜಯಲಕ್ಷ್ಮಿ, ನಿರ್ಮಲಾ, ಎಚ್‌ಎಸ್‌ ಸುನಂದಾ, ‌ ಕೆ.ಮಹಾಂತೇಶ್‌, ಅಮರೇಶ್‌ ಕಡಗದ್‌, ಭೀಮನಗೌಡ, ದಿನೇಶ್‌ ಅಮ್ಮಿನಮಟ್ಟು ಸೇರಿದಂತೆ   ಮತ್ತಿತರರು ಹಾಗೂ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *