ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಮಳೆಯಾಗಿದ್ದು, ಪ್ರಮುಖವಾಗಿ ವಿಜಯನಗರದಲ್ಲಿ 13 ಸೆಂಟಿಮೀಟರ್, ಚಿತ್ರದುರ್ಗದ ನಾಯಕಹಟ್ಟಿಯಲ್ಲಿ 9 ಸೆಂಟಿಮೀಟರ್, ಬಳ್ಳಾರಿಯಲ್ಲಿ 7 ಸೆಂಟಿಮೀಟರ್ ಹಾಗೂ ಗದಗದ ನರಗುಂದದಲ್ಲಿ 5 ಸೆಂಟಿ ಮೀಟರ್ ಮಳೆಯಾಗಿದೆ. ವಾಯುಭಾರ
ಪೂರ್ವ ಅರಬ್ಬಿ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತವಾಗಿದ್ದು, ಪರಿಣಾಮ ರಾಜ್ಯದಲ್ಲಿ ಅಕ್ಟೋಬರ್ 11 ರಿಂದ 14ರವರೆಗೆ ಮಳೆ ಸಾಧ್ಯತೆ ಇದೆ. ವಾಯುಭಾರ ಕುಸಿತದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಅಬ್ಬರದ ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರಿನಲ್ಲಿಯೂ ಅಕ್ಟೋಬರ್ 16ರವರೆಗೆ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಹಾವೇರಿಯಲ್ಲಿ ಕಳೆದ 2 ದಿನಳಿಂದ ಭಾರಿ ಮಳೆಯಾಗ್ತಿದೆ. ಮಳೆಗೆ ಮಾರುಕಟ್ಟೆ ಸಂಪೂರ್ಣ ಜಲಾವೃತಗೊಂಡಿದೆ. ಆಯುಧ ಪೂಜೆ ವೇಳೆ ಮಾರಾಟಕ್ಕೆಂದು ತಂದಿದ್ದ ಬೂದುಗುಂಬಳಕಾಯಿ ಹಾಗೂ ಅಪಾರ ಪ್ರಮಾಣದ ಪೂಜಾ ಸಾಮಾಗ್ರಿಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಅಕಾಲಿಕ ಮಳೆಯಿಂದಾಗಿ ವ್ಯಾಪಾರಿಗಳು ಹೈರಾಣಾಗಿದ್ದಾರೆ.
ಇದನ್ನು ಓದಿ : ಪಿಜಿಯಲ್ಲಿ ಮಹಿಳೆಯೊಬ್ಬರ ಬರ್ಬರ ಹತ್ಯೆ ಹಿನ್ನೆಲೆ: ಬಿಬಿಎಂಪಿಯಿಂದ ಕೆಲವು ನಿರ್ದಿಷ್ಟ ಮಾರ್ಗಸೂಚಿ ಪ್ರಕಟ
ಭಾರೀ ಮಳೆಗೆ 40 ಕೋಳಿಗಳು ಸಾವು
ಇನ್ನು ಕೊಪ್ಪಳದಲ್ಲಿ ಭಾರೀ ಮಳೆಯಿಂದಾಗಿ 40 ಕೋಳಿಗಳು ಸಾವನ್ನಪ್ಪಿವೆ. ಗಿಣಗೇರಿಯ ಹುಲಿಗಿ ಚಿಕನ್ ಸೆಂಟರ್ನಲ್ಲಿ ಅವಘಡ ಸಂಭವಿಸಿದ್ದು, ಮಾರಾಟಕ್ಕೆ ತಂದಿದ್ದ ಕೋಳಿ ಶೆಡ್ಡಿಗೆ ಚರಂಡಿ ನೀರು ನುಗ್ಗಿ ಕೋಳಿಗಳು ಸಾವನ್ನಪ್ಪಿದ್ದು, ಮಾಲೀಕನಿಗೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ.
ತುಂಬಿದ ಕೆರೆಗಳು, ರೈತರು ಫುಲ್ ಖುಷ್
ಚಿತ್ರದುರ್ಗ ಜಿಲ್ಲೆಯಲ್ಲಿಯೂ ಮಳೆ ಆರ್ಭಟಕ್ಕೆ ಹಳ್ಳ-ಕೊಳ್ಳಗಳು ಉಕ್ಕಿ ಹರಿದಿವೆ. ಧಾರಾಕಾರ ಮಳೆಯಿಂದ ಚಳ್ಳಕೆರೆ ತಾಲೂಕಿನ ರೇಖಲಗೆರೆ ಕೆರೆ ಕೋಡಿ ಬಿದ್ದಿವೆ. ರಾಮಸಾಗರ ಹಳ್ಳ ಸಂಪೂರ್ಣ ಭರ್ತಿಯಾಗಿ ಹರಿಯುತ್ತಿದೆ. ಇತ್ತ ವರವು ಗ್ರಾಮದ ಕೆರೆಯೂ ಕೋಡಿ ಬಿದ್ದಿದ್ದು, ಬತ್ತಿ ಕೆರೆ ತುಂಬಿದ್ದಕ್ಕೆ ರೈತರು ಸಂತಸಗೊಂಡಿದ್ದಾರೆ.
ಕೋಡಿ ಬಿದ್ದ ಕೆರೆ, 30 ಮನೆಗಳು ಜಲಾವೃತ
ದಾವಣಗೆರೆಯಲ್ಲಿ ಕಳೆದ 3 ದಿನಗಳಿಂದ ಭಾರೀ ಮಳೆಯಾಗ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜಗಳೂರು ತಾಲೂಕಿನ ಹಿರೆಮಲ್ಲನಹೊಳೆ ಗ್ರಾಮದ ಕೆರೆ ಕೋಡಿ ಬಿದ್ದಿದೆ. ಕೋಡಿ ಬಿದ್ದ ಕೆರೆಯಿಂದ ಪಕ್ಕದಲ್ಲಿ ಇದ್ದ 30ಕ್ಕೂ ಹೆಚ್ಚು ಮನೆಗಳು ಜಾಲವೃತವಾಗಿವೆ. 26 ವರ್ಷದ ನಂತರ ಕೆರೆ ಕೋಡಿ ನೋಡಲು ನೂರಾರು ಜನರು ಆಗಮಿಸ್ತಿದ್ದಾರೆ.
ರೈಲ್ವೆ ಅಂಡರ್ಪಾಸ್ನಲ್ಲಿ ಸಿಲುಕಿದ್ದ 10 ಜನರ ರಕ್ಷಣೆ
ದಾವಣಗೆರೆಯ ಕುರ್ಕಿ ಬಳಿ ರೈಲ್ವೆ ಅಂಡರ್ ಪಾಸ್ ನೀರಿನಲ್ಲಿ ಸಿಲುಕಿದ್ದ 10 ಜನರನ್ನ ರಕ್ಷಣೆ ಮಾಡಿದೆ ಅಗ್ನಿಶಾಮಕ ಸಿಬ್ಬಂದಿ..ಚನ್ನಗಿರಿ ತಾಲೂಕಿನ ಚಿಕ್ಕ ಗಂಗೂರು, ಲಕ್ಷ್ಮಿ ಸಾಗರ ಗ್ರಾಮದ 10 ಜನ ರೈಲ್ವೆ ಸೇತುವೆ ಕಾಮಗಾರಿಗೆ ಬಂದು, ಟ್ರಾಕ್ಟರ್‌ನಲ್ಲೇ ಸ್ಟ್ರಕ್ ಆಗಿಬಿಟ್ಟಿದ್ದರು. ಕೂಡಲೇ ಅಗ್ನಿ ಶಾಮನಕ ಸಿಬ್ಬಂದಿ ಲೈಫ್ ಜಾಕೆಟ್ ಬಳಿಸಿ 10 ಜನರ ಪ್ರಾಣ ಉಳಿಸಿದ್ದಾರೆ.
ಇದನ್ನು ನೋಡಿ : ಐಸಿಡಿಎಸ್ 50| ಅಂಗನವಾಡಿ ಮಕ್ಕಳ ಸಮಗ್ರ ಬೆಳವಣಿಗೆಯ ಸವಾಲುಗಳುJanashakthi Media