ಸೇತುವೆ ಕುಸಿತ; ಹಲವು ವಾಹನಗಳು ನದಿಗೆ ಬಿದ್ದು 9 ಜನ ಸಾವು

ಅಹಮದಾಬಾದ್:‌ ಗುಜರಾತ್ ವಡೋದರಾದ ಪದ್ರಾ ತಾಲೂಕಿನ ಮುಜ್ಪುರ ಬಳಿ ಸೇತುವೆಯ ಒಂದು ಭಾಗ ಕುಸಿತಗೊಂಡು ಐದು ವಾಹನಗಳು ಮಹಿಸಾಗರ್ ನದಿಗೆ ಬಿದ್ದ ಪರಿಣಾಮ ಮೂವರನ್ನು ರಕ್ಷಿಸಲಾಗಿದ್ದು, 9 ಮಂದಿ ಮೃತಪಟ್ಟಿರುವ ಘಟನೆ ಜುಲೈ 9 ಬುಧವಾರದಂದು ನಡೆದಿದೆ.

ಬೆಳಗ್ಗೆ 7:45 ರ ಸುಮಾರಿಗೆ ಸೇತುವೆ ಕುಸಿದಿದೆ. ಈ ಸೇತುವೆ ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ನಡುವೆ ನಿರ್ಮಿಸಲಾಗಿತ್ತು. 45 ವರ್ಷದ ಹಳೆಯ ಸೇತುವೆ ಇದಾಗಿದೆ.

ಇದನ್ನೂ ಓದಿ: ಜುಲೈ 9ರಂದು ಭಾರತ್ ಬಂದ್: 25 ಕೋಟಿ ಕಾರ್ಮಿಕರು ಭಾಗಿ

ಮಾಹಿತಿ ತಿಳಿದ ಕೂಡಲೇ ಸ್ಥಳೀಯ ಆಡಳಿತ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ವಡೋದರಾ ಜಿಲ್ಲೆಯ ಪದ್ರಾದಲ್ಲಿ ಬೆಳಿಗ್ಗೆ 7.30 ರ ಸುಮಾರಿಗೆ ಸೇತುವೆ ಕುಸಿದಿದೆ. ರಾಜ್ಯ ಹೆದ್ದಾರಿಯ ಉದ್ದಕ್ಕೂ ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಸೇತುವೆ ವಡೋದರಾ ಮತ್ತು ಆನಂದ್ ಅನ್ನು ಸಂಪರ್ಕಿಸುತ್ತದೆ.

ಮುಜ್ಪುರ್ ಗ್ರಾಮದ ಬಳಿ ಈ ಘಟನೆ ಸಂಭವಿಸಿದ್ದು, ಎರಡು ಟ್ರಕ್ಗಳು, ಒಂದು ಬೊಲೆರೊ ಜೀಪ್ ಮತ್ತು ಇನ್ನೊಂದು ಜೀಪ್ ದಾಟುತ್ತಿದ್ದಾಗ ಸೇತುವೆ ಇದ್ದಕ್ಕಿದ್ದಂತೆ ಕುಸಿದು ಬಿತ್ತು. ನಾಲ್ಕು ವಾಹನಗಳು ಕುಸಿತದ ಎರಡೂ ಬದಿಗಳಲ್ಲಿ ಹರಿಯುವ ಮಹಿಸಾಗರ್ ನದಿಗೆ ಉರುಳಿದವು. ಸ್ಥಳೀಯರು ಕೂಡಲೇ ಬೇಗನೆ ಜಮಾಯಿಸಿದರು ಮತ್ತು ರಕ್ಷಣಾ ಕಾರ್ಯಗಳು ತಕ್ಷಣವೇ ಪ್ರಾರಂಭವಾದವು.

ಇದನ್ನೂ ನೋಡಿ: ಸಾರ್ವತ್ರಿಕ ಮುಷ್ಕರ | ರೈತ ಕಾರ್ಮಿಕ ಸಂಘಟಿತ ಹೋರಾಟವೇ ಎಲ್ಲದಕ್ಕೂ ಪರಿಹಾರ | ಜುಲೈ 09Janashakthi Media

Donate Janashakthi Media

Leave a Reply

Your email address will not be published. Required fields are marked *