ಧರ್ಮಸ್ಥಳ: ಅನಾಮಿಕ ದೂರುದಾರ ಶವ ಹೂಳಿದ್ದಾಗಿ ತಪ್ಪೊಪ್ಪಿಕೊಂಡ ನಂತರ, ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಭಾಗದಲ್ಲಿ ಅಸ್ಥಿಪಂಜರಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಪ್ರಕರಣ
ಈಗಾಗಲೇ 6ನೇ ಪಾಯಿಂಟ್ ನಲ್ಲಿ ಮೂಳೆಗಳು ಪತ್ತೆಯಾಗಿದ್ದವು. ಇದೀಗ ಬಂಗ್ಲಗುಡ್ಡದಲ್ಲಿ ಆಗಸ್ಟ್ 4ರಂದು ಅಸ್ಥಿಪಂಜರಗಳ ಹಲವು ಭಾಗಗಳು ಪತ್ತೆಯಾಗಿರುವುದಾಗಿ SIT ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕಸಾಪ: ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಮಂಡನೆ
ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇದರ ತನಿಖೆಯ ಭಾಗವಾಗಿ ಒಂದು ಮೂಟೆ ಉಪ್ಪ, ಅಳತೆ ಟೇಪನ್ನು ತೆಗೆದುಕೊಂಡು ಅರಣ್ಯದೊಳಗೆ ಕಾರ್ಮಿಕರು ತೆರಳಿರುವಂತ ಮಾಹಿತಿ ಲಭ್ಯವಾಗಿದೆ.
11ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯದ ಬದಲಾಗಿ ದೂರುದಾರನ ಮಾಹಿತಿಯಂತೆ ಬಂಗ್ಲಗುಡ್ಡದಲ್ಲಿ ಶೋಧ ಕಾರ್ಯವನ್ನು ಎಸ್‌ಐಟಿ ತಂಡವು ನಡೆಸುತ್ತಿದೆ. ಶೋಧ ಕಾರ್ಯಾಚ ರಣೆಯ ಸಂದರ್ಭದಲ್ಲಿ ಬಂಗ್ಲಗುಡ್ಡದಲ್ಲಿ ಅಸ್ಥಿಪಂಜರದ ಹಲವು ಭಾಗಗಳು ಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ.
ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಬಗ್ಗೆ ಮಾತನಾಡುವುದು ತಪ್ಪೆ? ಯಾಕೆ ಅಪಪ್ರಚಾರ ಮಾಡ್ತೀರಿ? Janashakthi Media
