ಬಳ್ಳಾರಿ | ಸ್ಥಳೀಯ ಸಂಸ್ಥೆಗಳ ಗ್ರಂಥಾಲಯ ಕರ (ಸೆಸ್‌) ₹703 ಕೋಟಿ ಬಾಕಿ ಇದೆ : ಪುಸ್ತಕ ಖರೀದಿಗೆ ₹20 ಕೋಟಿ ಮೀಸಲಿಡಿ

ಬಳ್ಳಾರಿ: ಸರ್ಕಾರ ಈ ಬಜೆಟ್‌ನಲ್ಲಾದರೂ ಪುಸ್ತಕ ಖರೀದಿಗೆ ₹20 ಕೋಟಿ ಮೀಸಲಿಡಬೇಕು’  ‘ಸರ್ಕಾರ ನಾಲ್ಕೈದು ವರ್ಷಗಳಿಂದ ಪುಸ್ತಕ ಖರೀದಿಸಿಲ್ಲ. ಬಂಡವಾಳ ವಾಪಸ್‌ ಆಗದೇ ಪ್ರಕಾಶಕರು ಕಂಗಾಲು ಆಗಿದ್ದಾರೆ. ಎಂದು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಡಾ. ವಸುಂಧರಾ ಭೂಪತಿ  ಆಗ್ರಹಿಸಿದರು.

ಕರ್ನಾಟಕ ಪ್ರಕಾಶಕರ ಸಂಘ ಮತ್ತು ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಸಹಯೋಗದಲ್ಲಿ ಬುಧವಾರ ಆರಂಭಗೊಂಡ ಎರಡು ದಿನಗಳ ‘ಪ್ರಕಾಶಕರ ಕಮ್ಮಟ’ದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ : SIR | 58 ಲಕ್ಷ ಮತದಾರರ ರದ್ದು : ಪಶ್ಚಿಮ ಬಂಗಾಳದ ಮತದಾರರ ಕರಡು ಪಟ್ಟಿ ಪ್ರಕಟ

‘ಸಮಸ್ಯೆ ಬಗೆಹರಿಸುವುದಾಗಿ ಸರ್ಕಾರ ಇದೇ ಡಿ. 20ರವರೆಗೆ ಸಮಯ ಕೇಳಿದೆ. ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಒತ್ತಾಯಿಸಿದರು.

ನಮ್ಮ ಹಣವನ್ನು ನಮಗೇ ಕೊಡಲು ಏನು ತೊಂದರೆ. ಕೇರಳದಲ್ಲಿ ಇರುವುಂತೆ ಸರ್ಕಾರವು ಲೇಖಕರ ಕೃತಿಗಳ 2000 ಪ್ರತಿಗಳನ್ನು ಖರೀದಿಸಬೇಕು’  ‘ಸ್ಥಳೀಯ ಸಂಸ್ಥೆಗಳ ಮೂಲಕ ಸಂಗ್ರಹಿಸಿರುವ ಗ್ರಂಥಾಲಯ ಕರ (ಸೆಸ್‌) ₹703 ಕೋಟಿ ಬಾಕಿ ಇದೆ. ಇದರ ಸದ್ವಿನಿಯೋಗ ಆಗಬೇಕು ಎಂದು ಒತ್ತಾಯಿಸಿದರು.

ಇದನ್ನೂ ನೋಡಿ : ಧರ್ಮಸ್ಥಳ ಪ್ರಕರಣ | ಎಲ್ಲಾ ಹತ್ಯೆಗಳ ಬಗ್ಗೆ ಸಮಗ್ರ ತನಿಖೆಗೆ ಆಗ್ರಹ Janashakthi Media

 

Donate Janashakthi Media

Leave a Reply

Your email address will not be published. Required fields are marked *