ಹಿರಿಯ ಕಾರ್ಮಿಕ ಮುಖಂಡ ಕೆ.ಎಲ್.ಭಟ್ ನಿಧನ

* ಸಿಪಿಐ(ಎಂ) ಶ್ರದ್ಧಾಂಜಲಿ

* ನಾಳೆ JJM ಮೆಡಿಕಲ್ ಕಾಲೇಜಿಗೆ ದೇಹದಾನ

ದಾವಣಗೆರೆ: ಸಿಪಿಐ(ಎಂ) ಪಕ್ಷದ ದಾವಣಗೆರೆ ಜಿಲ್ಲೆಯ ಮಾಜಿ ಜಿಲ್ಲಾ ಕಾರ್ಯದರ್ಶಿ ಹಾಗೂ ಸಿಐಟಿಯು ಮುಖಂಡರು ಹಾಗೂ ವಿಮಾ ನೌಕರರ ಚಳವಳಿ ಹಿರಿಯ ಮುಖಂಡರಾಗಿದ್ದ ಕಾಮ್ರೇಡ್ ಕೆ.ಲಕ್ಷ್ಮೀನಾರಾಯಣ ಭಟ್ (ಕೆ.ಎಲ್.ಭಟ್) ನಿನ್ನೆ ರಾತ್ರಿ 9 ಗಂಟೆಗೆ ದಾವಣಗೆರೆ ಅವರ ಮನೆಯಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ಸಿಪಿಐ(ಎಂ) ಕಾರ್ಯದರ್ಶಿ ಡಾ. ಪ್ರಕಾಶ್‌.ಕೆ ಹೇಳಿದರು.

82 ವರ್ಷಗಳಾಗದ ಅವರಿಗೆ ಮೂರು ಜನ ಗಂಡು‌ಮಕ್ಕಳು ಬಂಧು ಬಳಗ ಹಾಗೂ ಅಸಂಖ್ಯಾತ ಚಳವಳಿಯ ಒಡನಾಡಿಗಳನ್ನು ಆಗಲಿದ್ದಾರೆ. ಕೆ.ಎಲ್ ಭಟ್ ಅವರ ನಿಧನಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಕರ್ನಾಟಕ ರಾಜ್ಯ ಸಮಿತಿಯು ತನ್ನ ಅತೀವ ದುಃಖವನ್ನು ಹಾಗೂ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನು ಓದಿ :-ಪಾಕಿಸ್ತಾನಿ ಸೇನಾ ವಾಹನದ ಮೇಲೆ ಬಲೂಚಿಸ್ತಾನ್ ಆರ್ಮಿ ದಾಳಿ; 12 ಮಂದಿ ಮೃತ

ಅಮೇರಿಕಾದಲ್ಲಿರುವ ಅವರ ಮಗ ನಾಳೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ  ಮೃತ ದೇಹವನ್ನು ದಾವಣಗೆರೆ ಬಾಪೂಜಿ  ಆಸ್ಪತ್ರೆ ಶವಗಾರದಲ್ಲಿರಲಾಗಿದೆ ನಾಳೆ ಬೆಳೆಗ್ಗೆ LIC ಕಾಲೋನಿಯಲ್ಲಿರುವ ಅವರ ಮನೆಯಲ್ಲಿ ಬೆಳೆಗ್ಗೆ 8 ರಿಂದ 1 ಗಂಟೆವರೆಗೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇರಿಸಲಾಗುವುದು

ಬಳಿಕ ಅವರ ಸ್ವ ಇಚ್ಚೆಯಂತೆ  JJM ಮೆಡಿಕಲ್ ಕಾಲೇಜಿಗೆ ವೈದ್ಯಕೀಯ ಸಂಶೋಧನೆಗಾಗಿ ಮೃತ ದೇಹ‌ದಾನ ಮಾಡಲಾಗುವುದು ಎಂದು ಕುಟುಂಬದ‌ ಮೂಲಗಳು ತಿಳಿಸಿವೆ.

ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಸಿಪಿಐಎಂ ಪಕ್ಷದ ಸದಸ್ಯರು, ವಿವಿಧ ಸಂಘಟನೆಗಳ ನಾಯಕರು ಅವರ ಮನೆಗೆ ನಾಳೆ ಬೆಳೆಗ್ಗೆ11 ಗಂಟೆಗೆ ಸೇರಿ ಪಕ್ಷ ಹಾಗೂ ದುಡಿಯುವ ಜನ ಚಳವಳಿ ಪರವಾಗಿ ಕಾಮ್ರೇಡ್ ಕೆ.ಎಲ್ ಭಟ್ ಅವರಿಗೆ ಅಂತಿಮ‌ಗೌರವ ಸಲ್ಲಿಸಲು‌ ನಿರ್ಧರಿಸಲಾಗಿದೆ.

ಇದನ್ನು ಓದಿ :-ರಫೇಲ್ ಹಾರಿಸಿದ ಮೊದಲ ಭಾರತೀಯ ಹಿಲಾಲ್ ಅಹ್ಮದ್: ಆಪರೇಷನ್ ಸಿಂಧೂರ್‌ನಲ್ಲಿ ಪ್ರಮುಖ ಪಾತ್ರ

ಬದ್ದತೆಗೆ ಒಂದು ಮಾದರಿ .ಎಲ್ ಭಟ್ ;

ಉಡುಪಿ ಜಿಲ್ಲೆಯ ಕೊಲ್ಲೂರು ಲಕ್ಷ್ಮೀನಾರಾಯಣ ಭಟ್ 60 ದಶಕದ ಕೊನೆಯಲ್ಲಿ ಭಾರತೀಯ ‌ಜೀವ ವಿಮಾ‌ನಿಗಮದಲ್ಲಿ ದಾವಣಗೆರೆ ಶಾಖೆಯಲ್ಲಿ ಓರ್ವ ಗುಮಾಸ್ತನಾಗಿ‌ ಕೆಲಸ ಆರಂಭಿಸಿ ಬಳಿಕ ವಿಮಾ‌ ನೌಕರರ‌ ಸಂಘದಸಂಘದ  ನಾಯಕರಾಗಿ ನೌಕರರ ಮೇಲೆ ನಡೆಯುತ್ತಿದ್ದ ಶೋಷಣೆ ವಿರುದ್ದ ಹೋರಾಡುತ್ತಾ ಸಂಘಟನೆ ವಿವಿಧ ಹಂತಗಳಲ್ಲಿ ಕೆಲಸ‌ಮಾಡಿದರು. ಅದರ ಜತೆಗೆ ದಾವಣಗೆರೆಯಲ್ಲಿ ಸಮುದಾಯ‌ ಸಾಂಸ್ಕೃತಿಕ ಸಂಘಟನೆ ಕಾರ್ಯದರ್ಶಿ ಯಾಗಿ ಯುದ್ದ ವಿರೋಧಿ,ಶಾಂತಿಗಾಗಿ, ಕಲಾವಿದರು, ಬರಹಗಾರರು,ಕವಿಗಳನ್ನು ಒಂದುಗೂಡಿಸಲು ,ದಲಿತರು,ಮಹಿಳೆಯರು, ಕಾರ್ಮಿಕರು,ರೈತರನ್ನು ಬೆಂಬಲಿಸಿ ಅವರ ಹಕ್ಕುಗಳಿಗಾಗಿ ಬೀದಿ‌ನಾಟಕಗಳನ್ನು ಜಾತಾಗಳನ್ಪ್ರು ಸಂಘಟಿಸುವಲ್ಲಿ ಅಪಾರವಾಗಿ ಕೆಲಸ‌ಮಾಡಿದರು.

ನಿವೃತ್ತಿ ಬಳಿಕಾವೂ ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮಪಂಚಾಯತ್ ನೌಕರರು ಸೇರಿ ವಿವಿಧ ಅಸಂಘಟಿತ ವಲಯದ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಲೇ ಸಿಐಟಿಯು ಜಿಲ್ಲಾ‌ಸಂಚಾಲಕರಾಗಿ ಬಳಿಕ ಸಿಪಿಎಂ ಜಿಲ್ಲಾ ಕಾರ್ಯದರ್ಶಿಯಾಗಿ ಕೆಲಸ‌ ಮಾಡುತ್ತಾ ದುಡಿಯುವ ಜನರ‌ ಮೇಲೆ ನಡೆಯುತ್ತಿರುವ ನಿರಂತರವಾದ ದಾಳಿಗಳ ವಿರುದ್ದ ಚಳವಳಿಗಳನ್ನು ಮುನ್ನಡೆಸಿದರು. ವಿಶೇಷವಾಗಿ ದಾವಣಗೆರೆಯಲ್ಲಿ 90 ದಶಕದಲ್ಲಿ ನಡೆದ ಕೋಮು‌ಸಂಘರ್ಘ ಮತ್ತು‌ಕೋಮು ಗಲಭೆಗಳಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳ ಪರವಾಗಿ ಹಾಗೂ ಶಾಂತಿ ಸ್ಥಾಪನೆಯಾಗಿ ಮತ್ತು ಜನರನ್ನು ವಿಭಜಿಸುವ ಹಿಂದುತ್ವವಾದಿಗಳ ವಿರುದ್ದ ಮತ್ತು ಸಮಾಜದಲ್ಲಿ ‌ಶಾಂತಿ‌ಸಾಮರಸ್ಯಕ್ಕಾಗಿ ದಾವಣಗೆರೆ ವಿವಿಧ ಜನಪರ,ಜೀವಪರ ಸಂಘಟನೆಗಳು ಹಾಗೂ ವ್ಯಕ್ತಿಗಳನ್ನು ಒಳಗೊಂಡು ಅವಿತರವಾಗಿ ಶ್ರಮಿಸಿದ್ದರು.

ಕೆ.ಎಲ್ ಭಟ್ ಅವರ ಆಗಲುವಿಕೆಯು ರಾಜ್ಯದ ಕಮ್ಯೂನಿಸ್ಟ್‌ ಚಳವಳಿಗೆ ವಿಶೇಷವಾಗಿ ದುಡಿಯುವ ವರ್ಗದ ಚಳವಳಿಗೆ ಅಪಾರ ನಷ್ಟ ಉಂಟು‌ಮಾಡಿದೆ.‌ ಅವರ ಆಗಲುವಿಕೆಯಿಂದ ನೊಂದಿರುವ ಅವರ‌ ಕುಟುಂಬದ ಎಲ್ಲ ಸದಸ್ಯರಿಗೂ ಸಿಪಿಎಂ ತೀವ್ರ ಸಾಂತ್ವನ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *