ʼಜೀವಮಾನ ಸಾಧನೆ ಪ್ರಶಸ್ತಿʼಗೆ ಹಿರಿಯ ಪತ್ರಕರ್ತ ಸನತ್‌ ಕುಮಾರ ಬೆಳಗಲಿ ಆಯ್ಕೆ

ಹುಬ್ಬಳ್ಳಿ : ಧಾರವಾಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ವರ್ಷದ ʼಜೀವಮಾನ ಸಾಧನೆ ಪ್ರಶಸ್ತಿʼಗೆ ಹಿರಿಯ ಪತ್ರಕರ್ತ,  ಅಂಕಣಕಾರ ಸನತ್ ಕುಮರ ಬೆಳಗಲಿ ಭಜನರಾಗಿದ್ದಾರೆ.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದ ಅವ್ವ ಟ್ರಸ್ಟ್‌ನಿಂದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ʼಅವ್ವ ಪತ್ರಕರ್ತೆ ಪ್ರಶಸ್ತಿʼ ಈ ಬಾರಿ ಹುಬ್ಬಳ್ಳಿಯ ಸುನಿತಾ ಕುಲಕರ್ಣೀ ಅವರಿಗೆ ಹಾಗೂ ನಿರ್ಮಲಾ ಕುದರಿ ಅವರಿಗೆ ಪ್ರಶಸ್ತಿ ಸಂದಿದೆ.

ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಂದ 3 ವರ್ಷದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸಿದ್ದರಾಮಯ್ಯ

ಜೀವಮಾನ ಸಾಧನೆ ಪ್ರಶಸ್ತಿʼ 11 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹಾಗೂ ಗೌರವ ಸನ್ಮಾನ ಒಳಗೊಂಡಿದೆ ʼಅವ್ವ ಪತ್ರಕರ್ತೆ ಪ್ರಶಸ್ತಿʼ ತಲಾ ಐದು ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಗೌರವ ಸನ್ಮಾನಗಳನ್ನು ಒಳಗೊಂಡಿದೆ. ದಿ 27 ರಂದು ನಡೆಯುವ ಕಾರ್ಯಕ್ರಮದಂದು ಈ ಮೇಲಿನ ಪ್ರಶಸ್ತಿಗಳನ್ನೂ ನೀಡಲಾಗುವುದು.

ಸನತ್‌ ಕುಮಾರ ಬೆಳಗಲಿಯವರು ಈ ಭಾರಿ ಜೀವ ಮಾನವ ಸಾಧನೆ  ಪ್ರಶಸ್ತಿಗೆ ಆಯ್ಕೆಯಾಗಿದ್ದು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದವರು ಸನತ್‌ ಕುಮಾರ ಬೆಳಗಲಿಯವರು ಕಿರಿಯ ವಯಸ್ಸಿನಿಂದಲೂ ಜ್ಯಾತ್ಯಾತಿತ , ಪ್ರಗತಿಪರ ಚಿಂತನೆಗಳ ಒಲವು ಇಟ್ಟುಕೊಂಡಿದ್ದರು.  ಹಲವು ವರ್ಷಗಳಕಾಲ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ.

ಇದನ್ನೂ ನೋಡಿ: ವಿಶ್ವ ಹಾವುಗಳ ದಿನ | ಆತಂಕ ಬಿಡಿ ಜೀವವೈವಿಧ್ಯತೆ ಕಾಪಾಡಿ Janashakthi Media #WorldSnakeDay

Donate Janashakthi Media

Leave a Reply

Your email address will not be published. Required fields are marked *