ಹಿರಿಯ ಪತ್ರಕರ್ತ ಸಿ.ಆರ್. ಕೃಷ್ಣರಾವ್ ನಿಧನ

ಹಿರಿಯ ಪತ್ರಕರ್ತ, ಕಮ್ಯುನಿಸ್ಟ್ ನಾಯಕ, ಸಿ.ಆರ್. ಕೃಷ್ಣರಾವ್ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.

ವಯೋ ಸಹಜ ಅನಾರೋಗ್ಯದಿಂದ ಮಂಗಳವಾರ ಮುಂಜಾನೆ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು(ಮಂಗಳವಾರ) ಮಧ್ಯಾಹ್ನ 3.30 ಕ್ಕೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

ಬರಹಗಾರರ ಬಳಗದಲ್ಲಿ ಸಿಆರ್‌ಕೆ ಎಂದೇ ಪರಿಚಿತವಾಗಿದ್ದ ಸಿ.ಆರ್. ಕೃಷ್ಣರಾವ್ ಐದು ದಶಕಗಳ ಕಾಲ ಮಾಧ್ಯಮ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.  ಮೈಸೂರು ರಾಜ್ಯ ಪತ್ರಕರ್ತರ ಸಂಘವನ್ನು ಸಮಗ್ರವಾಗಿ ಸಂಘಟಿಸಿ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವನ್ನಾಗಿ ರೂಪಿಸಲು ಶ್ರಮಿಸಿದ ಮಹನೀಯರಲ್ಲೊಬ್ಬರು. ವಿದ್ಯಾರ್ಥಿಯಾಗಿದ್ದಾಗಲೇ ಎಡಪಂಥೀಯ ಚಳವಳಿಗೆ ಆಕರ್ಷಿತರಾಗಿ ಹಲವು ಜನಪರ ಹೋರಾಟಗಳಲ್ಲಿ ಸಿಆರ್‌ಕೆ ಬಾಗಿಯಾಗಿದ್ದರು. ಖ್ಯಾತ ಸಾಹಿತಿ ನಿರಂಜನ ನಂತರ ‘ಜನಶಕ್ತಿ’ ವಾರಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿಹಸಿರು ಕ್ರಾಂತಿಯ ರೂವಾರಿ, ಕೃಷಿ ತಜ್ಞ ಎಂ.ಎಸ್.ಸ್ವಾಮಿನಾಥನ್‌ ನಿಧನ

ನವಕರ್ನಾಟಕ ಪ್ರಕಾಶನ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ಕೃಷ್ಣರಾವ್, ಮದ್ರಾಸಿನಿಂದ ಬರುತ್ತಿದ್ದ ‘ ಸೋವಿಯತ್ ದೇಶ’ ಪತ್ರಿಕೆಯಲ್ಲೂ ಕೆಲ ಕಾಲ ಸೇವೆ ಸಲ್ಲಿಸಿದರು. ನಂತರ ಬೆಂಗಳೂರಿನಲ್ಲಿ ನೆಲೆಸಿ ನವಕರ್ನಾಟಕ ಪ್ರಕಾಶನ ಸಂಸ್ಥೆಯ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ನವಕರ್ನಾಟಕದ ವಿವಿಧ ಬೃಹತ್ ಯೋಜನೆಗಳಿಗೆ ಸಂಪಾದಕರಾಗಿ ದುಡಿದಿದ್ದಾರೆ.

ಸಿ.ಆರ್. ಕೃಷ್ಣರಾವ್. ಸ್ವಾತಂತ್ಯ್ರ ನಂತರದ ಭಾರತ, ನೊಬೆಲ್ ಪುರಸ್ಕೃತರು (ಸಮಗ್ರ ಮಾಹಿತಿ ಕೋಶ), ಕರ್ನಾಟಕ ಕಲಾದರ್ಶನ ಸಂಪುಟ-1, ಬದುಕಿನ ತಿರುವುಗಳು (ಆತ್ಮಕಥೆ), ನವಕರ್ನಾಟಕದ ವಿಜ್ಞಾನ-ತಂತ್ರಜ್ಞಾನ ನಿಘಂಟು -ಇವರ ಸಂಪಾದಿತ ಕೃತಿ.  ‘ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳವಳಿ – ನಾನು ಕಂಡಂತೆ’.ಇತ್ಯಾದಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.

ಸಿಆರ್‌ಕೆ ನಿಧನಕ್ಕೆ ಜನಪರ ಸಂಘಟನೆಗಳ ನಾಯಕರು, ಪತ್ರಕರ್ತರು, ಸಾಹಿತಿಗಳು, ಪ್ರಗತಿಪರ ಚಿಂತಕರು ಸಂತಾಪವನ್ನು ಸೂಚಿಸಿದ್ದಾರೆ.

ಈ ವಿಡಿಯೋ ನೋಡಿಪೋಸ್ಟರ್ ಪ್ರದರ್ಶನದ ಮೂಲಕ ಗಾಂಧಿ ಜಯಂತಿ ಆಚರಿಸಿದ ಬೆಂಗಳೂರು ಮೆಟ್ರೋ

 

Donate Janashakthi Media

Leave a Reply

Your email address will not be published. Required fields are marked *