ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿ ಆತ್ಮಹತ್ಯೆ ಮಾಡಿಕೊಂಡ ಹಿರಿಯ ಪರಿಸರವಾದಿ ಭೂಹಳ್ಳಿ ಪುಟ್ಟಸ್ವಾಮಿ

ರಾಮನಗರ: ಚನ್ನಪಟ್ಟಣ ತಾಲೂಕಿನ ಭೂಹಳ್ಳಿ ಗ್ರಾಮದ ನಿವಾಸಿ, ಹಿರಿಯ ಪರಿಸರವಾದಿ, ಸಾಹಿತಿ ಭೂಹಳ್ಳಿ ಪುಟ್ಟಸ್ವಾಮಿ (76) ಭಾನುವಾರ ತಡರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿ ಸಾವಿಗೆ ಶರಣಾಗಿದ್ದಾರೆ.

‘ನನ್ನ ಸಾವಿಗೆ ನಾನೇ ಕಾರಣ. ಅನಾರೋಗ್ಯದಿಂದ ಬೇಸರಗೊಂಡು ಜೀವನಯಾತ್ರೆ ಮುಗಿಸುತ್ತಿದ್ದೇನೆ’ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಚನ್ನಪಟ್ಟಣ ಪಾರ್ವತಿ ಚಿತ್ರಮಂದಿರದ ರಸ್ತೆಯಲ್ಲಿ ರೂಮ್ ಮಾಡಿಕೊಂಡಿದ್ದ ಪುಟ್ಟಸ್ವಾಮಿ, ತನ್ನ ರೂಮ್ ನಲ್ಲೆ ನೇಣಿಗೆ ಶರಣಾಗಿದ್ದಾರೆ.

ತನ್ನ ಸ್ವಂತ ಹಣದಲ್ಲಿ ಹಲವಾರು ವನ ನಿರ್ಮಾಣ ಮಾಡಿದ್ದರು ಪುಟ್ಟಸ್ವಾಮಿ. ಸಾವಿರಾರು ಗಿಡಗಳನ್ನ ಬೆಳೆಸಿದ ಕೀರ್ತಿ ಅವರದ್ದು. ಅವರ ಪತ್ನಿ ಹಾಗೂ ಇಬ್ಬರು ಪುತ್ರರು ಮೈಸೂರಿನಲ್ಲಿ ನೆಲೆಸಿದ್ದರು. ಇವರು ಆಗಾಗ ಮೈಸೂರಿಗೆ ಹೋಗಿ ಬರುತ್ತಿದ್ದರು. ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅದರಿಂದ ಬೇಸತು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: ಕೆಲಸದ ಅವಧಿ ಹೆಚ್ಚಳ ವಿರೋಧಿಸಿ ಆಗಸ್ಟ್ 3ಕ್ಕೆ ಐಟಿ ನೌಕರರ ಪ್ರತಿಭಟನೆ

ವೃತ್ತಿಯಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರವೃತ್ತಿಯಾಗಿ ಸಾಹಿತಿ, ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ನಿವೃತ್ತಿಯ ನಂತರ ಸ್ವಂತ ಹಣದಲ್ಲಿ ಗಿಡಗಳನ್ನು ಬೆಳೆಸಿ ಬೋಳು ಜಾಗ, ಸರಕಾರಿ ಜಾಗಗಳಲ್ಲಿ ವನಗಳ ನಿರ್ಮಾಣ ಮಾಡಿದ್ದರು. ಇವರ ಕಾಳಜಿಯಿಂದ ಸುಮಾರು 40 ಎಕರೆ ಜಾಗ ಹಸಿರು ಹೊದ್ದು ನಿಂತಿದೆ. ಸಾವಿರಾರು ಮರಗಳು ನೆರಳು ನೀಡುತ್ತಿದೆ.

ಸಾಹಿತಿಯಾಗಿ 25 ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಎಲ್ಲರ ಹೆಜ್ಜೆ, ನೂಲು ಸ್ವರ, ನೆಲದ ಕಂಬನಿ, ಬೆಳದಿಂಗಳ ಕುಡಿ, ಗೋಜಲು, ಅಕ್ಷರ ಗುಡಿ ನಾಟಕ ಲಾವಣಿ ಹಾಡು ಸೇರಿದಂತೆ ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಸೇವೆಗೆ ಗೋರೂರು ಸಾಹಿತ್ಯ ಪ್ರಶ್ಸತಿ, ಚುಟುಕು ಸಾಹಿತ್ಯ ಪ್ರಶಸ್ತಿ, ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿಯಿಂದ ಸಾಹಿತ್ಯ ಕೌಸ್ತುಭ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

https://www.youtube.com/watch?v=p1P46rludYc
Donate Janashakthi Media

Leave a Reply

Your email address will not be published. Required fields are marked *