ಹಿರಿಯ ಸಿಪಿಐ(ಎಂ) ನಾಯಕ ಸಾಮಿನೇನಿ ರಾಮರಾವ್ ಹತ್ಯೆ

ಖಮ್ಮಂ: ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ನಂಟು ಹೊಂದಿರುವ ಗ್ಯಾಂಗ್ ನಿಂದ ಹಿರಿಯ ಸಿಪಿಐ(ಎಂ) ನಾಯಕ ಸಾಮಿನೇನಿ ರಾಮರಾವ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಖಮ್ಮಂ ಜಿಲ್ಲೆಯ ಮಧಿರಾ ಕ್ಷೇತ್ರದ ಪತ್ತಾರ್ಲಪಾಡು ಗ್ರಾಮದ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ.

70 ವರ್ಷದ ರಾಮರಾವ್ ಅವರು ತೆಲಂಗಾಣ ರೈತ ಸಂಗಮ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು ಮತ್ತು 30 ವರ್ಷಗಳಿಗೂ ಹೆಚ್ಚು ಕಾಲ ಪತ್ತಾರ್ಲಪಾಡು ಗ್ರಾಮದ ಸರಪಂಚರಾಗಿ ಸೇವೆ ಸಲ್ಲಿಸಿದ್ದಾರೆ.

ಸ್ಥಳೀಯ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಕಾಂಗ್ರೆಸ್‌ಗೆ ಸೇರಿದ ಗುಂಪು ಈ ಕೊಲೆ ನಡೆಸಿದೆ ಎಂದು ಸಿಪಿಐ(ಎಂ) ನಾಯಕತ್ವ ಆರೋಪಿಸಿದೆ. ದಾಳಿಯಲ್ಲಿ ಭಾಗಿಯಾಗಿರುವ ಶಂಕಿತ ಮೂವರ ವಿರುದ್ಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಕಲಾ ಪ್ರದರ್ಶನಗಳೊಂದಿಗೆ ವಿಜೃಂಭಿಸಿದ ಹಳೆವೂರು ಜಾನಪದ ಸಮ್ಮೇಳನ

ಅಕ್ಟೋಬರ್‌ 31ರ ಮುಂಜಾನೆ, ದುಷ್ಕರ್ಮಿಗಳು ಚಿಂತಕಣಿ ಮಂಡಲದಲ್ಲಿರುವ ರಾಮರಾವ್ ಅವರ ಮನೆಗೆ ನುಗ್ಗಿ, ಅನೇಕ ಬಾರಿ ಚೂರಿಯಿಂದ ಇರಿದು, ಕತ್ತು ಸೀಳಿ ಸ್ಥಳದಲ್ಲೇ ಕೊಂದರು.

ಕೊಲೆಯ ಸುದ್ದಿಯು ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯ ಸಿಪಿಐ(ಎಂ) ಕಾರ್ಯಕರ್ತರು ಗ್ರಾಮದಲ್ಲಿ ಸೇರಲು ಪ್ರೇರೇಪಿಸಿತು, ಇದರ ಪರಿಣಾಮವಾಗಿ ಹಿಂಸಾತ್ಮಕ ಘರ್ಷಣೆಗಳು ಸಂಭವಿಸಿದವು. ಕಮಿಷನರ್ ಸುನೀಲ್ ದತ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಾಕ್ಷ್ಯ ಸಂಗ್ರಹಿಸಿದ್ದಾರೆ.

ಹತ್ಯೆಯನ್ನು ಸಿಪಿಐ(ಎಂ) ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯ ಕಾರ್ಯದರ್ಶಿ ಜಾನ್ ವೆಸ್ಲಿ, ಕೇಂದ್ರ ಸಮಿತಿ ಸದಸ್ಯರಾದ ತಮಿನೇನಿ ವೀರಭದ್ರ ರಾವ್, ಕಾರ್ಯದರ್ಶಿ ಪೊತಿನೇನಿ ಸುದರ್ಶನ ರಾವ್ ಅವರು ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ರಾಮರಾವ್ ಹತ್ಯೆಯ ಹಿಂದಿನ ರಾಜಕೀಯ ಪಿತೂರಿಯನ್ನು ಬಯಲಿಗೆಳೆಯಬೇಕು ಎಂದು ಒತ್ತಾಯಿಸಿದರು.

ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ | ಎಸ್ಐಟಿ ಪೊಲೀಸರು ದೌರ್ಜನ್ಯ ಮಾಡುವಂತಿಲ್ಲ- ಹೈಕೋರ್ಟ್ ಆದೇಶ Janashakthi Media

Donate Janashakthi Media

Leave a Reply

Your email address will not be published. Required fields are marked *