ಸ್ವಾಭಿಮಾನ-ಸಮಾನತೆಯ ಬದುಕಿಗೆ ತಾತ್ವಿಕ ನೆಲೆಯಲ್ಲಿ ಸಂಘಟನೆ-ಹೋರಾಟ ಅಗತ್ಯ:ಪ್ರೋ.ಕೆ.ದೋರೈರಾಜು

ತುಮಕೂರು: ಸಮಾಜದಲ್ಲಿ ಸ್ವಾಭಿಮಾನದಿಂದ ಎಲ್ಲರಿಗೆ ಸರಿಸಮನಾಗಿ ಬದುಕುವ ಹಕ್ಕು  ಇದೆ, ಇದಕ್ಕೆ ಕುಂದು ಬರದಂತೆ ತಾತ್ವಿಕ ನೆಲೆಯಲ್ಲಿ ಇರುವ ಸಂಘಟನೆಗಳ ಜೊತೆಗೊಡಿ ನಿರಂತರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಹಿರಿಯ ಚಿಂತಕ , ಪ್ರೋ; ಕೆ ದೋರೈರಾಜು ಅವರು ಅಭಿಪ್ರಾಯುಪಟ್ಟರು. ಮುಂದುವರಿದು ಮಾತನಾಡಿದ ಅವರು, ಇಂದು ಜಾತಿ ಹಾವಳಿ ಹೆಚ್ಚಾಗಿದೆ. ಇದು ಸಮಾಜವನ್ನುಛಿದ್ರ ಛಿದ್ರವಾಗಿಮಾಡುವ ಶಕ್ತಿಗಳ ಬೆಂಬಲಿಸದೆ ಸಮಾನತೆಯ ಆಶಯಗಳ ಜೊತೆಗೆ ಹೋರಾಟವನ್ನು ಎಂದು ಮರೆಯಬಾರದು ಎಂದು ಕರೆ ನೀಡಿದರು. ನೆಲೆಯಲ್ಲಿ

ಸೆ-16 ರಂದು ತುಮಕೂರಿನ ಡಾ; ಬಿ. ಆರ್. ಆಂಬೆಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಮುನಿಸಿಪಲ್‌ಕಾರ್ಮಿಕರ ಸಂಘ.(ರಿ), ತುಮಕೂರು ಪೌರ ಕಾರ್ಮಿಕರ ಸಂಘ. (ರಿ), ತುಮಕೂರು ಮಹಾ ನಗರ ಪಾಲಿಕೆ ಕಸದ ಅಟೋ ಚಾಲಕರುಮತ್ತು ಸಹಾಯಕರಸಂಘ.ರಿ ಸಿಐಟಿಯು ವತಿಯಿಂದ ಮುನಿಸಿಪಲ್ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷರಾದ ಕಾಂ; ಹರೀಶ್ ನಾಯಕ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಿರಂತರ ಬದ್ದತೆಯಿಂದ ಕಾರ್ಮಿಕ ಹಿತಕ್ಕೆ ದುಡಿದ ಹರೀಶ ನಾಯಕ್ ಅವರು ಬದುಕು ಅದರ್ಶಮಯ ಎಂದರು.

ಇದನ್ನೂ ಓದಿ:ತುಮಕೂರು ವಿ.ವಿ:ಕಾಡುಗೊಲ್ಲ ಸಮುದಾಯದ ಮಹಿಳೆ ಎಂಎಸ್ಸಿ ಗಣಿತ ವಿಭಾಗದಲ್ಲಿ ಮೊದಲ ಶ್ರೇಣಿ

ಸ್ಲಂ ಜನಾಂದೋಲನದ ರಾಜ್ಯ ಅಧ್ಯಕ್ಷರಾದ ಎ.ನರಸಿಂಹಮೂರ್ತಿ ಅವರು ಮಾತನಾಡಿ ಮುನಿಸಿಪಲ್ ಕಾರ್ಮಿಕರನ್ನು ಯು.ಜಿ.ಡಿ . ಲೋಡರ್. ಕಸದ ವಾಹನ
ಚಾಲಕ, ಸಹಾಯಕ ಹೀಗೆ ಒಡೆದು ಆಳುವ ನೀತಿಯನ್ನು ಸರ್ಕಾರ ಅನುಸರಿಸಿದೆ. ಇದರಿಂದ ಮುನಿಸಿಪಲ್ ಕಾರ್ಮಿಕರು ಸಮಸ್ಯೆಗೆ ಸಿಕ್ಕ ಬಿದ್ದಿದ್ದಾರೆ. ಜನರಿಗೆ ಹಲವು ಗ್ಯಾರಂಟಿ ಭಾಗ್ಯಗಳನ್ನು ನೀಡಿರುವ ರಾಜ್ಯ ಸರ್ಕಾರ ಎಲ್ಲಾ ಮುನಿಸಿಪಲ್ ಕಾರ್ಮಿಕರಿಗೆ ಗ್ಯಾರೆಂಟಿ ಭಾಗ್ಯ ತಕ್ಷಣ ನೀಡಲಿ ಎಂದು ಒತ್ತಾಯಿಸಿದರು.

ಈ ಅಶಯಕ್ಕೆ ಕಾಂ; ಹರೀಶ್ ನಾಯಕ್ ಅವರು ರಾಜ್ಯ ಮಟ್ಟದಲ್ಲಿ ದುಡಿದರು ಎಂದು ಸ್ಮರಿಸಿದರು. ಕಸದ ವಾಹನ ಚಾಲಕರು , ಸಹಾಯಕರು , ಲೋಡರ್, ಮತ್ತು ಕ್ಲೀನರ್ ಗಳ ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ, ಖಜಾಂಚಿ , ಮಂಜುನಾಥ, ಪೌರ ಕಾರ್ಮಿಕರ ಸಂಘದ ಮಂಜುನಾಥ್, ವಾಹನ ಚಾಲಕರ ಸಂಘದ
ಅಧ್ಯಕ್ಷ ಪ್ರಕಾಶ್ ಮಾತನಾಡಿದರು, ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಅವರು ಮಾತನಾಡಿ ಶತಮಾನಗಳಿಂದ ದುಡಿವ/ ಶೋಷಿತರ ಜನರ ಪರ ಧ್ವನಿ ಅಡಗಿಸುವ ಪ್ರಯತ್ನಗಳು ನಡೆಯುತ್ತಲೆ ಬಂದಿವೆ , ನಾವು ನಮಗೆ ಅಗುವ ಆನ್ಯಾಯವನ್ನು ಜೋರಾಗಿ ಕೂಗಿ ಹೇಳಬೇಕಾಗಿದೆ ಎಂದರು.

ಆರಂಭದಲ್ಲಿ ಎನ್ .ಕೆ. ಸುಬ್ರಮಣ್ಯ ಅವರು ಪ್ರಸ್ತಾವಿಕ ಮಾತನಾಡಿ ಕೊನೆಯಲ್ಲಿ ಪೌರ ಕಾರ್ಮಿಕ ಸಂಘದ ವೆಂಕಟೇಶ್ ಅವರು ವಂದಿಸಿದರು. ಸಭೆಯ ಅರಂಭದಲ್ಲಿ ಸಂಗಾತಿ ಹರೀಶ್ ನಾಯಕ್ ಮತ್ತು ಇತ್ತಿಚೆಗೆ ಮರಣ ಹೊಂದಿರುವ ನರಸಿಂಹಯ್ಯ ಅವರು ಸಾವಿಗೆ ಎರಡು ನಿಮಿಷಗಳ ಮೌನ ಅಚರಿಸಿದರು.

 

ವಿಡಿಯೋ ನೋಡಿ:ಮಾತು ಮತ್ತು ಹಾಡಿನ ಮೂಲಕ ಸೌಜನ್ಯ ಹೋರಾಟಕ್ಕೆ ಧ್ವನಿಯಾದ ಜನಪರ ಗಾಯಕ ಜನ್ನಿ Janashakthi Media

Donate Janashakthi Media

Leave a Reply

Your email address will not be published. Required fields are marked *