ಕಲಬುರ್ಗಿ| ನಕಲಿ ಅಂಕಪಟ್ಟಿ ನೀಡಿ ಅರಣ್ಯ ವೀಕ್ಷಕ ಹುದ್ದೆಗೆ ಆಯ್ಕೆ; ಎಫ್‌ಐಆರ್‌ ದಾಖಲು

ಕಲಬುರ್ಗಿ: ‌ತಾಲೂಕಿನ ಕಡಣಿ ಗ್ರಾಮದ ನಿವಾಸಿ ಬೀರಪ್ಪ ಎಂಬುವವರ ವಿರುದ್ಧ  ನಕಲಿ ಅಂಕಪಟ್ಟಿ ನೀಡಿ ಅರಣ್ಯ ವೀಕ್ಷಕ ಹುದ್ದೆಗೆ ಆಯ್ಕೆಯಾಗಿದ್ದವನ ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ.

ಬೀರಪ್ಪ ನಕಲಿ ಅಂಕಪಟ್ಟಿ ನೀಡಿ ಅರಣ್ಯ ವೀಕ್ಷಕ ಹುದ್ದೆಗೆ ಆಯ್ಕೆಯಾಗಿದ್ದನು. ಬಳಿಕ ಆತನ ಅಸಲಿ ಮುಖ ಬಯಲಾಗುತ್ತಿದ್ದಂತೆ ಇದೀಗ ಆತನ ವಿರುದ್ಧ ಕಲಬುರ್ಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: ತೆಲಂಗಾಣ| ಶಾಲೆಯಿಂದ ತಡವಾಗಿ ಬಂದಿದ್ದಕ್ಕೆ 14 ವರ್ಷದ ಮಗನನ್ನು ಕೊಂದ ತಂದೆ

ನಕಲಿ ಅಂಕಪಟ್ಟಿ ನೀಡಿ ಅರಣ್ಯ ವೀಕ್ಷಕ ಹುದ್ದೆಗೆ ಬೀರಪ್ಪ ಆಯ್ಕೆಯಾಗಿದ್ದ. 2023 ಡಿಸೆಂಬರ್ 21ರಂದು ಆನ್ಲೈನ್ ಮೂಲಕ ಅರ್ಜಿ ಹಾಕಿದ ಬಿರಪ್ಪ, 2014 ಏಪ್ರಿಲ್ ನಲ್ಲಿ ಎಸ್‌ಎಸ್ಎಲ್‌ಸಿ ಅಂಕಪಟ್ಟಿಯನ್ನು ಸಲ್ಲಿಸಿದ್ದ. ಎಸ್‌ಎಸ್ಎಲ್‌ಸಿಯಲ್ಲಿ 605 ಅಂಕಗಳಿಸಿ ಉತ್ತೀರ್ಣನಾಗಿದ್ದಾಗಿ ಬೀರಪ್ಪ ಅಂಕಪಟ್ಟಿ ಸಲ್ಲಿಸಿದ್ದಾನೆ.

ಶಿಕ್ಷಣ ಇಲಾಖೆಯಿಂದ ದಾಖಲೆಯ ಪರಿಶೀಲನೆ ವೇಳೆ ಈ ಒಂದು ಕೃತ್ಯ ಬಯಲಾಗಿದೆ. ಬೀರಪ್ಪ ಎಸ್ ಎಲ್ ಸಿ ಯಲ್ಲಿ ಪಡೆದಿದ್ದು ಕೇವಲ 316 ಅಂಕಗಳು ಮಾತ್ರ ಅಂಕಪಟ್ಟಿ ತಿದ್ದುಪಡಿ ಮಾಡಿ 316 ಬದಲು 605 ಅಂಕ ಪಡೆದಿದ್ದಾಗಿ ಅಂಕಪಟ್ಟಿ ಸಲ್ಲಿಸಿದ್ದಾನೆ. ಈ ಸಂಬಂಧ ಕಲ್ಬುರ್ಗಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೀರಪ್ಪನ ವಿರುದ್ಧ ಇದೀಗ ಎಫ್ ಐ ಆರ್ ದಾಖಲಾಗಿದೆ.

ಇದನ್ನೂ ನೋಡಿ: ಸಾಮಾಜಿಕ ನ್ಯಾಯವನ್ನು ಜಾರಿ ಮಾಡಬೇಕಿರುವ ಸಂಸತ್ತು ಮಾಡುತ್ತಿರುವುದೇನು? ದಿನೇಶ್‌ ಅಮಿನ್‌ ಮಟ್ಟು Janashakthi Media

Donate Janashakthi Media

Leave a Reply

Your email address will not be published. Required fields are marked *