ಸಿದ್ದರಾಮಯ್ಯ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ; ಸಿಎಂ ಬಳಿ ನುಗ್ಗಲು ಯತ್ನಿಸಿದ ಯುವಕ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಏಕಾಏಕಿ ಯುವಕನೋರ್ವ ಸಿಎಂ ಬಳಿ ನುಗ್ಗಲು ಯತ್ನಿಸಿ, ಭದ್ರತಾ ವೈಫಲ್ಯ ನಡೆದಿರುವ ಘಟನೆ ಇಂದು ವಿಧಾನಸೌಧ ಮುಂದೆಯೇ ನಡೆದಿದೆ.

ಸಚಿವ ಮಹದೇವಪ್ಪ ಮಾತನಾಡುತ್ತಿದ್ದ ವೇಳೆ ಯುವನೋರ್ವ ಏಕಾಏಕಿ ವೇದಿಕೆ ಮುಂಭಾಗದಿಂದ ಹಾರಿ ವೇದಿಕೆ ಮೇಲೆ ಬರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೂಡಲೇ ಸ್ಥಳದಲ್ಲಿದ್ದ ರಕ್ಷಣಾ ಸಿಬ್ಬಂದಿ ಯುವಕನನ್ನು ವಶಕ್ಕೆ ಪಡೆದುಕೊಂಡು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ.

ವಿಧಾನಸೌಧದ ಎದುರು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಇವತ್ತು ಏರ್ಪಡಿಸಲಾಗಿತ್ತು. ಈ ವೇಳೆ ಏಕಾಏಕಿ ಯುವ ಜಂಪ್‌ ಮಾಡಿ ವೇದಿಕೆಗೆ ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಸೇರಿ ವೇದಿಕೆ ಮೇಲಿದ್ದ ಗಣ್ಯರು ತಬ್ಬಿಬ್ಬಾಗಿದ್ದರು. ಕೂಡಲೇ ಸಿಎಂ ಅಂಗರಕ್ಷಕರು ಯುವಕನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಯುವಕನನ್ನು ವಶಕ್ಕೆ ಪಡೆದರೂ ಆತನ ಸಿಎಂ ಕಡೆಗೆ ಶಾಲು ಎಸೆದು ಅಲ್ಲಿಂದ ಹೋಗಿದ್ದಾನೆ. ವಿಧಾನಸೌಧದ ಆವರಣದಲ್ಲೇ ಘಟನೆ ನಡೆದಿದ್ದು, ಸಿಎಂ ಕಾರ್ಯಕ್ರಮದಲ್ಲೇ ಭದ್ರತಾ ಲೋಪ ಘಟನೆ ನಡೆದಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಆಂಧ್ರಕ್ಕೆ ಎಸ್ಕೇಪ್‌ ಆಗುತ್ತಿದ್ದ ಶಾಸಕ ಮುನಿರತ್ನ ಕೋಲಾರದಲ್ಲಿ ಅರೆಸ್ಟ್‌

ವೇದಿಕೆ ಆಗಮಿಸಿದ ಯುವಕ ಯಾರು? ಯಾಕೆ ವೇದಿಕೆ ಬಂದ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವಕ ಕರ್ನಾಟಕದ ಭಾವುಟದ ಬಣ್ಣ ಇರುವ ಟಾವೆಲ್​ ಹೆಗಲ ಮೇಲೆ ಹಾಕಿಕೊಂಡಿರುವುದು ದೃಶ್ಯಗಳಲ್ಲಿ ಕಂಡು ಬರುತ್ತದೆ.

ಇದೇ ಮೊದಲೇನು ಅಲ್ಲ? ಸಿಎಂ ಅವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಭದ್ರತಾ ಲೋಪ ಆಗಿಲ್ಲ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ಬೆಂಗಳೂರಿನಲ್ಲಿ ರೋಡ್​ ಶೋ ಮಾಡುವ ವೇಳೆ ತೆರೆದ ವಾಹನದ ಮೇಲೆ ಹತ್ತಿ ಸಿಎಂ ಅವರಿಗೆ ಹೂವಿನ ಹಾರ ಯತ್ನಿಸಿದ್ದರು. ಆದರೆ ಈ ವೇಳೆ ಆತನ ಸೊಂಟದಲ್ಲಿ ಗನ್ ಕಂಡು ಬಂದಿತ್ತು. ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು.

ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು..

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್ ಅವರು, ಕರ್ನಾಟಕದಲ್ಲಿ ಪೊಲೀಸ್ ಇಲಾಖೆಗೆ ಜೀವ ಇದೆಯೋ ಇಲ್ಲವೋ ಎಂಬ ಸಂದೇಹ ಇರ್ತಿದೆ. ವಿಧಾನಸೌಧದಲ್ಲಿ ಓರ್ವ ವೇದಿಕೆಗೆ ನುಗ್ಗಿ ಬರ್ತಾನೆ ಎಂದರೆ ಹಲವು ಪ್ರಶ್ನೆಗಳು ಎದುರಾಗುತ್ತಿದೆ. ಸಿಎಂ ಅಂಗರಕ್ಷಕರು ಏನು ಮಾಡುತ್ತಿದ್ದಾರೆ, ಪೊಲೀಸರು ಏನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕೆಲವೇ ದಿನಗಳ ಹಿಂದೆ ಬಾಂಬ್ ಬ್ಲಾಸ್ಟ್ ಆಗಿತ್ತು, ಬಿಜೆಪಿ ಕಚೇರಿ ಬ್ಲಾಸ್ಟ್​ ಮಾಡಲು ಸಂಚು ಮಾಡಿದ್ದರು.

ಇದನ್ನೂ ನೋಡಿ: ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ಸೀಮಿತಗೊಳಿಸಿರುವ ಆದೇಶ ಹಿಂಪಡೆಯಿರಿJanashakthi Media

Donate Janashakthi Media

Leave a Reply

Your email address will not be published. Required fields are marked *