ತುಮಕೂರು : ತುಮಕೂರು ಜಿಲ್ಲೆ ತಿಪಟೂರು ಪಟ್ಟಣದಲ್ಲಿನ ಮಾಜಿ ಸಚಿವ ಬಿ. ಸಿ ನಾಗೇಶ್ ಮನೆಯಲ್ಲಿ ಮದುವೆಯ ನೆಪದಲ್ಲಿ ಬಿಜೆಪಿಯ ಭಿನ್ನಮತಿಯರ ಗೌಪ್ಯ ಸಭೆ ನಡೆದಿದ್ದು, ಭಾರೀ ಕುತೂಹಲ ಮೂಡಿಸಿದೆ. ಮದುವೆ
ಮಾಜಿ ಸಿಎಂ ಯಡಿಯೂರಪ್ಪರ ಆಪ್ತ ಕಾರ್ಯದರ್ಶಿ ಸಂತೋಷ್ ರ ಸಹೋದರ ಸಂಬಂಧಿಗಳ ಆರತಕ್ಷತೆ ತಿಪಟೂರಿನ ಎಸ್.ಎಲ್.ಎನ್ ಕಲ್ಯಾಣ ಮಂಟಪದಲ್ಲಿ ನಿನ್ನೆ ರಾತ್ರಿ ನಡೆದಿತ್ತು.
ಇದನ್ನೂ ಓದಿ : ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೆರ್ಪಡೆ: ಹಕ್ಕು, ಆಕ್ಷೇಪಣೆ ಸಲ್ಲಿಸಲು ನ.28 ರ ವರೆಗೆ ಅವಕಾಶ
ಈ ಕಾರ್ಯಕ್ರಮದಲ್ಲಿ ಬಿ.ಸಿ ನಾಗೇಶ್ ಅವರನ್ನು ಹೊರತುಪಡಿಸಿ ಬಿಜೆಪಿ ನಾಯಕರು ಮಾತು ಕತೆ ನಡೆಸಿದ್ದಾರೆ.
ಇದಾದ ಬಳಿಕ ಬಿ.ಸಿ ನಾಗೇಶ್ ಅವರ ಮನೆಯಲ್ಲೂ ಕೂಡ ಬಿಜೆಪಿ ನಾಯಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಕುಮಾರ ಬಂಗಾರಪ್ಪ, ಪ್ರತಾಪ್ ಸಿಂಹ, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ಮಾಜಿ ಸಚಿವ ಬಿಸಿ ನಾಗೇಶ್ ಅವರ ಮನೆಯಲ್ಲಿ ಭಿನ್ನಮತಿಯರ ಗೌಪ್ಯ ಸಭೆ ನಡೆಸಿದ್ದು, ಬಿಜೆಪಿ ನಾಯಕರ ಈ ಭೇಟಿ ಬಾರೀ ಕುತೂಹಲಮೂಡಿಸಿದೆ.
ಇದನ್ನೂ ನೋಡಿ : ದೇಶದ ರಾಜ ವ್ಯಾಪಾರಿಯಾದ ಕಾರಣ ದೇಶದ ಜನ ಬಿಕಾರಿಯಾಗುತ್ತಿದ್ದಾರೆ – ಡಾ. ಕೆ.ಪ್ರಕಾಶ್ Janashakthi Media