ರುದ್ರಣ್ಣ ಆತ್ಮಹತ್ಯೆ ಪ್ರಕರಣ : ಸುಳ್ಳು ಹರಡುವುದನ್ನು ನಿಲ್ಲಿಸಿ – ಸತೀಶ್‌ ಜಾರಕಿಹೊಳಿ

ಬೆಳಗಾವಿ: ಪ್ರಕರಣದಲ್ಲಿ ಏನಾಗಿದೆ..? ಯಾಕೆ ಆಗಿದೆ..? ಎಂದು ಪೊಲೀಸರು ತನಿಖೆ ನಡೆಸಬೇಕು. ಯಾರಿಂದ ಆತ್ಮಹತ್ಯೆ ಆಗಿದೆ ಎಂದು ಈಗಲೇ ಹೇಳಲು ಬರುವುದಿಲ್ಲ. ಹಾಗಾಗಿ, ಪೊಲೀಸ್ ತನಿಖೆಯ ಬಳಿಕ ಸತ್ಯಾಂಶ ಹೊರ ಬರಲಿದೆ ಎಂದು  ಸಚಿವ ಸತೀಶ್‌ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ಬೆಳಗಾವಿ ತಹಶೀಲ್​​ ಕಚೇರಿಯಲ್ಲಿ ದ್ವಿತೀಯ ದರ್ಜೆ ನೌಕರ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸಹಾಯಕನ ಕಿರುಕುಳ ಕಾರಣ ಎಂದು ಹೇಳಲಾಗುತ್ತಿದೆ ಎಂಬುದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಪ್ತ ಸಹಾಯಕ ಮಾಡಿರಬಹುದು. ಅದಕ್ಕೂ ಸಚಿವರಿಗೂ ಏನು ಸಂಬಂಧ. ನೇರವಾಗಿ ಸಚಿವರ ಹೆಸರು ಹೇಳಿಲ್ಲ. ಸಚಿವರ ಪಿಎ ಹೆಸರನ್ನು ಮೃತ ನೌಕರ ಹೇಳಿದ್ದಾನೆ. ಹಾಗಾಗಿ, ಪಿಎ ವಿರುದ್ಧ ಪೊಲೀಸರು ವಿಚಾರಣೆ ನಡೆಸಬೇಕು ಎಂದು ಸತೀಶ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ: ಯುಎಸ್ ಚುನಾವಣೆ: ಡೊನಾಲ್ಡ್ ಟ್ರಂಪ್ ಗೆಲುವು

ಕಚೇರಿಯಲ್ಲಿ ನಡೆಯುತ್ತಿದ್ದ ಅನ್ಯಾಯದ ವಿರುದ್ಧ ಹೋರಾಡಿ ಎಂದು ವಾಟ್ಸ್​​ಆ್ಯಪ್​​ ಗ್ರೂಪ್​​ನಲ್ಲಿ ಮೃತನು ಮೆಸೇಜ್ ಮಾಡಿರುವ ಬಗ್ಗೆ ಪೊಲೀಸರು ತನಿಖೆ ಮಾಡಬೇಕು. ಅಲ್ಲಿಯವರೆಗೂ ಏನೂ ಹೇಳಲು ಬರುವುದಿಲ್ಲ. ನಾನು ತನಿಖಾ ಅಧಿಕಾರಿ ಅಲ್ಲ. ತನಿಖೆಯ ವರದಿ ಬರುವವರೆಗೂ ಕಾಯ್ದು ನೋಡೋಣ ಎಂದು ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಇದನ್ನೂ ನೋಡಿ: ರೈತರ ಬಗ್ಗೆ ನಿರ್ದೇಶಕ ಗುರುಪ್ರಸಾದ ಮಾತುಗಳು Janashakthi Media

Donate Janashakthi Media

Leave a Reply

Your email address will not be published. Required fields are marked *