ಹಾಸನ: ಕ್ರಿಟಿಕಲ್ ಆಲೋಚನೆಯನ್ನು ಬೆಳೆಸಬೇಕಾದುದು ವೈಜ್ಞಾನಿಕ ಮನೋಭಾವದ ಬೆಳವಣಿಗೆಯ ಮೊದಲಹಂತ ಇದು ಪ್ರಜಾತಂತ್ರದ ಬಲವರ್ಧನೆಯ ಮೊದಲ ಹಂತವೂ ಹೌದು ಎಂದು ಅಖಿಲಭಾರತ ವಿಚಾರವಾದಿಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಪ್ರೊ. ನರೇಂದ್ರನಾಯಕ್ ಅಭಿಪ್ರಾಯಪಟ್ಟರು. ಪ್ರಜಾತಂತ್ರ
ಅವರು ಇತ್ತೀಚೆಗೆ ನಗರದಲ್ಲಿ ಬಿಜಿವಿಎಸ್ ಹಾಸನ ತಾಲ್ಲೂಕು ಸಮಸಮೇಳನದ ಅಂಗವಾಗಿ ಏರ್ಪಡಿಸಿದ್ದ ವೈಜ್ಞಾನಿಕ ಮನೋಭಾವ ಹಾಗೂ ಪ್ರಜಾಪ್ರಭುತ್ವ ವಿಚಾರ ಸಂಕಿರಣದಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡುತ್ತಿದ್ದರು.
ಕ್ರಿಟಿಕಲ್ ಆಲೋಚನಾ ಕ್ರಮವನ್ನು ಜನತೆಯಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಹುಟ್ಟದಂತೆ ವ್ಯವಸ್ಥಿತವಾಗಿ ತಡೆಯನ್ನು ಒಡ್ಡುವ ಒಂದು ವ್ಯವಸ್ಥೆಯೇ ಹುಟ್ಪಿಕೊಡಿದೆ ಎಂದು ಬಾಬಾರಾಮದೇವನ ಗೋಮೂತ್ರದಲ್ಲಿ ಔಷದೀಯಗುಣ ಇದೆೆ ಎಂದು ಮೋಸ ಮಾಡುವ, ಮೊಬೈಲ್ ರೇಡಿಯೇಷನ್ ಕಾರಣಕ್ಕೆ ಕೈಗಳು ಸೆಟೆದು ನಿಲ್ಲುತ್ತದೆ ಹಗೂ ನೆಗೆಟಿವ್ ಎನರಜಿ ಉಂಟಾಗುತ್ತದೆ, ತುಳಸಿ ದಳ ಇಟ್ಟುಕೊಂಡರೆ ಪರಿಹಾರ ಆಗುತ್ತದೆ, ಕೋವಿಡ್ ಔಷದ ಕುರಿತು ಘನ ನ್ಯಾಯಾಲಯ ಛೀಮಾರಿ ಹಾಕಿದ್ದನ್ನು ಉದಾಹರಿಸಿ ವಿವರಿಸಿದ ನರೇಂದ್ರನಾಯಕರು ನಮ್ಮ ದೇಶದ ಮಾದ್ಯಮಗಳು ಕೂಡ ಈ ವಿಷಯದಲ್ಲಿ ಅಗ್ರಪಂಕ್ತಿಯಲ್ಲಿ ಇವೆ ಎಂದರು.
ಇದನ್ನೂ ಓದಿ: ಮೆಟ್ರೋ ದರ ಹೆಚ್ಚಳ ವಿರುದ್ಧ ಆಪ್ ತೀವ್ರ ವಿರೋಧ
ಕ್ರಿಟಿಕಲ್ ಚಿಂತನೆಯನ್ನು ಸಂವಿಧಾನಬದ್ಧವಾಗಿ ಕಲಿಸಬೇಕಾದ ಶೈಕ್ಷಣಿಕ ಸಂಸ್ಥೆಗಳು ಮತ್ತು ಶಿಕ್ಷಕರು ಶಾಲೆಗಳಲ್ಲಿ ಭಜನೆ ಮಾಡಿಸುತ್ತಾರೆ, ಶುಕ್ರವಾರ, ಪರೀಕ್ಷಾ ಸಮಯದಲ್ಲಿ ಸರಸ್ವತಿ ಪೂಜೆ ಮಾಡಿಸುತ್ತಾರೆ, ಊಟಕ್ಕೆ ಮೊದಲು ಮಂತ್ರ ಹೇಳಿಸುವುದನ್ನು ವೈಜ್ಞಾನಿಕ ನೆಲೆಯಲ್ಲಿ ಹೇಗೆ ಗುರುತಿಸುವುದು… ಎಂದು ಪ್ರಶ್ನಿಸಿದ ಅವರು ಶಿಕ್ಷಕರಲ್ಲಿ ಹೆಚ್ಚಿನ ಜನ ಪ್ರತಿಗಾಮಿ ಚಿಂತನೆ ಹೊಂದಿರುವವರು ಇರುವರು ಆತಂಕದ ವಿಷಯ? ಇವರುಗಳ ಮೂಲಕ ಹೇಗೆ ವೈಜ್ಞಾನಿಕ ಚಿಂತನೆ ಹರಡಲು ಸಾದ್ಯ ಎಂದು ಪ್ರಶ್ನಿಸಿದರು.
ವಿಚಾರ ಸಂಕಿರಣದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷೆ ಮಮತಶಿವು ಮಾತನಾಡಿ ಭಾರತ ಸಂವಿಧಾನದ ಆಶಯ ಅಸಮಾನತೆಗಳಿಲ್ಲದ ಸಮಸಮಾಜ ನಿರ್ಮಾಣ ಮಾಡುವುದು ಅದಕ್ಕಾಗಿ ಆಯ್ದುಕೊಂಡ ಮಾರ್ಗ ಪ್ರಜಪ್ರಭುತ್ವ ಆದರೆ ಆ ಪ್ರಜಾಪ್ರಭುತ್ವವನ್ನು ಭಾರತದ ಬಂಡವಾಳಶಾಹಿಗಳು ಮತ್ತು ಪಾಳೆಗಾರಿಗಳು ಧರ್ಮಾಂಧತೆಯ ಉರುಳಲ್ಲಿ ಸಿಕ್ಕಿಸಿ ತಂತ್ರಗೊಳಿಸಿದ್ದಾರೆ.
ಭಾರತದ ಪ್ರಜಾತಂತ್ರವನ್ನು ಸಮಾಜವಾದಿಕರಣದ ಹಾದಿಯಲ್ಲಿ ಕೊಂಡೊಯ್ಯಲು ವೈಜ್ಞಾನಿಕ ಬುದ್ದಿ ಹಾಗೂ ವೈಚಾರಿಕ ದೃಷ್ಠಿಯನ್ನು ಜನತೆಯ ಎದೆಯಲ್ಲಿ ಅಂಕುರಿಸುವಂತೆ ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ಬಿಜಿವಿಎಸ್ ವೈಜ್ಞಾನಿಕ ಚಟುವಟಿಕೆಯನ್ನು ನಿರಂತವಾಗಿ ಹಮ್ಮಿಕೊಳ್ಳುತ್ತಿದೆ ಈ ನಿಟ್ಟಿನಲ್ಲಿ ಹಾಸನ ಜಿಲ್ಲೆಯ ವಿವಿಧ ಶಾಲಾಕಾಲೇಜುಗಳಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ವಿಚಾರವಾದಿಗಳಾದ ಪ್ರೊ. ನರೇಂದ್ರನಾಯಕರ ಸಂಚಾಲನೆಯಲ್ಲಿ ಇಡಿ ತಿಂಗಳು ವೈಜ್ಞಾನಿಕ ಮನೋಭಾವಕ್ಕಾಗಿ ವಿಜ್ಞಾನದ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಲಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ಸಿ.ಬಿ.ವೆಂಕಟೇಗೌಡ ಮಾತನಾಡಿ ಸಾಮರಸ್ಯ, ಬಹುತ್ವ ಭಾರತದ ಉಸಿರು ಅದನ್ನು ಗಟ್ಟಿಗೊಳಿಸಲು ಪ್ರಜಾತಂತ್ರದಿಂದ ಮಾತ್ರ ಸಾಧ್ಯ ಅದಕ್ಕಾಗಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಅಗತ್ಯ ಎಂದರು.
ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಬಿಜಿವಿಎಸ್ ತಾಲ್ಲೂಕು ಅಧ್ಯಕ್ಷೆ ಮಾತನಾಡಿ ಭಾರತ ಸಂವಿಧಾನದ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳು ವೈಜ್ಞಾನಿಕ ಪ್ರಜಾತಂತ್ರದ ಮೂಲಬೀಜಗಳು ಅದನ್ನು ಜನಮಾನಸದಲ್ಲಿ ಬಿತ್ತಲು ಶಿಕ್ಷಣ ವ್ಯವಸ್ಥೆ ಹಾಗೂ ಮಾದ್ಯಮಗಳು ಭೇಷರತ್ತಾಗಿ ಕಾರ್ಯನಿರ್ವಹಿಸಬೇಕಾಗಿದೆ ಆದರೆ ಅವುಗಳು ನಿರೀಕ್ಷಿಸಿದಷ್ಟು ಈ ಕೆಲಸದಲ್ಲಿ ನಿರತವಾಗಿಲ್ಲ ಎನ್ನುವುದು ಖೇದಕರ ಎಂದರು.
ಕಾರ್ಯಕ್ರಮದಲ್ಲಿ ಬಿಜಿವಿಎಸ್ ಜಿಲ್ಲಾಧ್ಯಕ್ಷ ಗುರುರಾಜು, ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಉಪಸ್ಥಿತರಿದ್ದರು. ಪ್ರಾರಂಬದಲ್ಲಿ ಬಿಜಿವಿಎಸ್ ತಾಲ್ಲೂಕು ಕಾರ್ಯದರ್ಶಿ ಬಿ.ಎಸ್.ವನಜಾಕ್ಷಿ ಸ್ವಾಗತಿಸಿದರು, ಕಡೆಯಲ್ಲಿ ಉಪಾದ್ಯಕ್ಷ ಚಿನ್ನೇನಹಲ್ಳಿ ಸ್ವಾಮಿ ವಂದಿಸಿದರು. ಸಹಕಾರ್ಯದರ್ಶಿ ಬಿ.ಕೆ.ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಪ್ರಮೀಳಾ ಮತ್ತು ಮೋನಿಕಾ ಬಿಜಿವಿಎಸ್ ಗೀತೆ ಹಾಡಿದರು.
ನಂತರ ನಡೆದ ಪ್ರತಿನಿಧಿ ಅಧಿವೇಶನದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ತಾಲೂಕಿನ ನೂತನ ಸಮಿತಿ ರಚಿಸಲಾಯಿತು ಅಧ್ಯಕ್ಷರಾಗಿ ನಿಟ್ಟೂರು ವೈದ್ಯಾಧಿಕಾರಿ ಡಾ.ಮಂಜುನಾಥ್, ಕಾರ್ಯದರ್ಶಿ ಯಾಗಿ ವಿಜ್ಞಾನ ಶಿಕ್ಷಕಿ ಬಿ.ಕೆ.ಲೋಲಾಕ್ಷಿ, ಖಜಾಂಚಿ ಯಾಗಿ ಅಟ್ಟಾವರ ಶಾಲೆಯ ಗಣಿತ. ಶಿಕ್ಷಕಿ ಆಶ ಉಪಾಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತ ಸಿ.ಪಿ.ನಾಗೇಶ್, ಹಾಗೂ ಶಿಕ್ಷಕ ಶೇಖರ್ ಸಹಕಾರ್ಯದರ್ಶಿಗಳಾಗಿ ಶಿಕ್ಷಕಿ ಪುಷ್ಪ ಹಾಗೂ ಚಿತ್ರ ಕಲಾವಿದ ಸುರೇಶ್ ಅತ್ನಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಗಳಾಗಿ ವಕೀಲ ಲಕ್ಷ್ಮೀಶ್, ಸಾಮಾಜಿಕ ಕಾರ್ಯಕರ್ತೆಯರಾದ ಪ್ರೀತಿ ತ್ಯಾಗಿ, ಶಾರದಾ, ಹರೀಶ್ ಆಯ್ಕೆಯಾದರು.
ನಂತರದ ಅವಧಿಯಲ್ಲಿ ಆಯ್ದ ಸಂಪನ್ಮೂಲವ್ಯಕ್ತಿಗಳಿಗೆ ವೈಜ್ಞಾನಿಕ ಮನೋಭಾವ ಮೂಡಿಸುವ ಕಾರ್ಯಾಗಾರದಲ್ಲಿ ಬಾಬಗಳೆನಿಸಿಕೋಂಡವರು ಶೂನ್ಯದಿಂದ ಬೂದಿಕೊಡುವ, ಉಂಗುರ-ವಾಚ್-ಸರ ಕೊಡುವ ತಂತ್ರಗಳನ್ನು, ಮಿಡಬ್ರೆöÊನ್ ಆಕ್ಟಿವಿಟಿ ಸುಳ್ಳು ಎಂದು ಸಾಬೀತು ಮಾಡುವ, ಗೋಮೂತ್ರದಲ್ಲಿ ಯವ ಔಷದೀಯ ಗುಣಗಳು ಇಲ್ಲ ಎನ್ನುವ, ಬೆಂಕಿಮೇಲೆ ನಡೆದಾಡುವ, ಬೆಂಕಿಯಲ್ಲಿ ಆಟವಾಡುವ ತಂತ್ರಗಳ ಹಿಂದಿರುವ ವೈಜ್ಞಾನಿಕ ಸತ್ಯಗಳನ್ನು ಬಯಲು ಮಾಡುವ ವಿಧಾನಗಳನ್ನು ನರೇಂದ್ರನಾಯಕ್ ತಿಳಿಸಿದರು.
ಇದನ್ನೂ ನೋಡಿ: ಮಹಿಳೆಯರಿಗಾಗಿ ಕಾನೂನು ಸರಣಿ ಕಾರ್ಯಕ್ರಮ -01 | POSH ಕಾಯ್ದೆ- ಬಂದಿದ್ದು ಹೇಗೆ- ಬಳಕೆಯ ವ್ಯಾಪ್ತಿ