ಕನ್ನಡದ ಭವಿಷ್ಯ ಕರಾಳವಾಗಿದ್ದು, ಕನ್ನಡ ಶಾಲೆಗಳು ನಶಿಸಿ ಹೋಗುವ ಹಂತದಲ್ಲಿದೆ : ಪುರುಷೋತ್ತಮ ಬಿಳಿಮಲೆ ಕಳವಳ

ಬೆಂಗಳೂರು: ಕನ್ನಡದ ಭವಿಷ್ಯ ಕರಾಳವಾಗಿದ್ದು, ಕನ್ನಡ ಶಾಲೆಗಳು ನಶಿಸಿ ಹೋಗುವ ಹಂತದಲ್ಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರಿನ ಕ್ರಿಯಾ ಮಾಧ್ಯಮ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾತೃ ಭಾಷೆ ದಿನ ಹಾಗೂ ಕೆಂಪು ಪುಸ್ತಕ ದಿನ ಹಾಗೂ ‘ಓದುವ ಖುಷಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಇದನ್ನೂ ಓದಿ:ಹೈಕಮಾಂಡ್ ‌ನನ್ನನ್ನ ಪರಿಗಣಿಸಿದರೆ ರಾಜ್ಯಾಧ್ಯಕ್ಷ ಆಗೋಕೆ‌ ಸಿದ್ದ- ಕುಮಾರ್ ಬಂಗಾರಪ್ಪ

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರು, ಕನ್ನಡ ಭಾಷೆ ಹಾಗೂ ಅಸ್ಮಿತೆಯ ಮುಂದೆ ಹಲವು ಸವಾಲುಗಳಿವೆ. ಕನ್ನಡ ಶಾಲೆಗಳ ಉಳಿವಿಗೆ ಈಗಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಕನ್ನಡವೇ ಕ್ರಮೇಣ ಮರೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಬೇಕಿದೆ. ಕನ್ನಡ ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಳ್ಳದೆ ಹೋದಲ್ಲಿ ಭಾಷೆ ಸಂಸ್ಕೃತಿ ನಶಿಸಿಹೋಗುತ್ತದೆ’ ಎಂದರು.

ಇದೇ ವೇಳೆ ಕೃತಿ ಬಿಡುಗಡೆ ಮಾಡಿದ ಪತ್ರಕರ್ತ ಜಿ.ಎನ್. ಮೋಹನ್ ಮಾತನಾಡಿ, ಪುಸ್ತಕ ಎನ್ನುವುದು ಬದಲಾವಣೆಯನ್ನು ತರುವ ಪ್ರಮುಖ ಅಸ್ತ್ರ, ಇದು ಸಮಾಜವನ್ನು ಜಡವಾಗಿ ಇರಲು ಬಿಡದ ಬದಲಾವಣೆಯ ವೇಗವರ್ಧಕ. ಪುಸ್ತಕ ಪ್ರೀತಿಯನ್ನು ಎಲ್ಲೆಡೆ ಬಲಪಡಿಸುವ, ಹಂಚುವ ಕೆಲಸವಾಗಬೇಕು’ ಎಂದು ಹೇಳಿದರು.

ಬಳಿಕ ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಮುಖ್ಯಸ್ಥ ಬಸವರಾಜ ಕಲ್ಲುಡಿ ಮಾತನಾಡಿ, ‘ಓದುವ ಸಂಸ್ಕೃತಿ ನಶಿಸಿ ಹೋಗುವ ಹಂತದಲ್ಲಿದೆ. ಆಧುನಿಕ ಸಾಧನ ಹಾಗೂ ತಂತ್ರಜ್ಞಾನದಿಂದಾಗಿ ಯುವಪೀಳಿಗೆ ಓದಿನಿಂದ ಸಂಪೂರ್ಣ ವಿಮುಖರಾಗಿದ್ದಾರೆ. ಓದಿನತ್ತ ಮತ್ತೆ ಅವರನ್ನು ಸೆಳೆಯುವುದು ಸವಾಲಿನ ಕೆಲಸ’ ಎಂದರು

ಇದನ್ನೂ ಓದಿ:ಭಾರತೀಯ ಸ್ಟೇಟ್ ಬ್ಯಾಂಕ್ ಬಜಾಲ್ ಶಾಖೆಯ ಎಟಿಎಮ್ ಯಂತ್ರ ಕೂಡಲೇ ಮರುಸ್ಥಾಪನೆ: ಡಿವೈಎಫ್ಐ ಒತ್ತಾಯ

ಕಾರ್ಯಕ್ರಮದಲ್ಲಿ ಕ್ರಿಯಾ ಮಾಧ್ಯಮದ ಎನ್.ಕೆ. ವಸಂತರಾಜ್,  ಕೃತಿಯ ಅನುವಾದಕ ತಡಗಳಲೆ ಸುರೇಂದ್ರ ರಾವ್ ಉಪಸ್ಥಿತರಿದ್ದರು. ಜಯಲಕ್ಷ್ಮೀಯವರು  ಚಿರಸ್ಮರಣೆಯ ಒಂದು ಭಾಗವನ್ನು ಹಾಗೂ ದೇವಿಕಾ ಅವರು ರೈತರಿಗಾಗಿ ನಿರಂಜನ್‌ ಕೃತಿಯ ಒಂದು ಭಾಗವನ್ನು ವಾಚನ ಮಾಡುವ ಮೂಲಕ ಓದುವ ಹಿಗ್ಗಿಗೆ ಮೆರಗು ತುಂಬಿದರು.

ಇದನ್ನೂ ನೋಡಿ : ಓದುವ ಹಿಗ್ಗು ಉತ್ಸವ ಉದ್ಘಾಟನಾ ಕಾರ್ಯಕ್ರಮ | ರೆಡ್‌ ಬುಕ್‌ ಡೇ , ಮಾತೃಭಾಷಾ ದಿನದ ನೆನಪಿನಲ್ಲಿ

 

Donate Janashakthi Media

Leave a Reply

Your email address will not be published. Required fields are marked *