ಶಾಲಾ ಪ್ರವಾಸಕ್ಕೆ ಬಂದಿದ್ದ ಬಸ್ ಪಲ್ಟಿ: 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಕಾರವಾರ: ಚಿತ್ರದುರ್ಗದಿಂದ ಶಾಲಾ ಪ್ರವಾಸಕೆಂದು ಬಂದಿದ್ದ ಬಸ್ ಪಲ್ಟಿಯಾಗಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ದಾಂಡೇಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಶಾಲಾ ಪ್ರವಾಸದ ಬಸ್ ಪಲ್ಟಿಯಾಗಿ 50 ವಿದ್ಯಾರ್ಥಿಗಳ ಪೈಕಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗಳಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶ ಗುಡಿ ಬಳಿ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಸೇಂಟ್ ಅಂತೋನಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

3 ಖಾಸಗಿ ಬಸ್‌ನಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದರು. ಮೌಲಂಗಿ ಬಳಿಯ ಹೋಮ್ ಸ್ಟೇನಲ್ಲಿ ವಿದ್ಯಾರ್ಥಿಗಳು ತಂಗಿದ್ದರು. ಬೆಳಗ್ಗೆ, ಜಲಸಾಹಸ ಕ್ರೀಡೆ ಆಡಿ ಮರಳಿ ಬರುವಾಗ ದುರ್ಘಟನೆ ಸಂಭವಿಸಿದೆ. ತಕ್ಷಣವೇ ಸ್ಥಳೀಯ ಗ್ರಾಮಸ್ಥರು ಸೇರಿ, ಬಸ್ಸಿನಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳನ್ನು ಹೊರತೆಗೆದಿದ್ದಾರೆ.

ಬಳಿಕ ಗಾಯಗೊಂಡವರನ್ನು ಎರಡು ಆಂಬುಲೆನ್ಸ್ ಹಾಗೂ ಇನ್ನಿತರ ಖಾಸಗಿ ವಾಹನಗಳಲ್ಲಿ ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ : ಉಡುಪಿ| ಸಮುದ್ರದಲ್ಲಿ ಈಜಾಡಲು ಹೋಗಿ ಮೂವರು ಯುವಕರು ಸಮುದ್ರ ಪಾಲು

ಹುಬ್ಬಳ್ಳಿಯಲ್ಲಿ ಬಾರ್‌ಗೆ ಡಿಕ್ಕಿ ಹೊಡೆದ ಚಿಗರಿ ಬಸ್

ಮತ್ತೊಂದು ಪ್ರಕರಣದಲ್ಲಿ ಹುಬ್ಬಳ್ಳಿಯ ಭೈರಿದೇವರಕೊಪ್ಪ ಬಳಿ ಬಾರ್‌ಗೆ ಚಿಗರಿ ಬಸ್‌ ಡಿಕ್ಕಿ ಹೊಡೆದಿರುವಂತಹ ಘಟನೆ ನಡೆದಿದೆ. ಹುಬ್ಬಳ್ಳಿಯಿಂದ ಧಾರವಾಡ ಕಡೆ ಹೊರಟಿದ್ದ ಬಸ್‌, ಏಕಾಏಕಿ ಬಾರ್‌ಗೆ ಡಿಕ್ಕಿ ಹೊಡೆದಿದೆ. ಪದೇ ಪದೇ ಚಿಗರಿ ಬಸ್‌ಗಳು ಅಪಘಾತಕ್ಕೆ ಕಾರಣವಾಗತ್ತಿದ್ದು, ಬಸ್ ಚಾಲಕನ ವಿರುದ್ಧ ಪ್ರಯಾಣಿಕರು ಆಕ್ರೋಶಹೊರಹಾಕಿದ್ದಾರೆ.

 

ಇದನ್ನೂ ನೋಡಿ : ಪಿಚ್ಚರ್ ಪಯಣ :153, ಚಿತ್ರ : ಆಲ್ ವಿ ಇಮ್ಯಾಜಿನ್ ಆಸ್ ಲೈಟ್ , ALL WE IMAGINE AS LIGHT

Donate Janashakthi Media

Leave a Reply

Your email address will not be published. Required fields are marked *