ಬೆಂಗಳೂರು: ಖಾಸಗಿ ಶಾಲಾ ಕಟ್ಟಡವೊಂದನ್ನು ಬೆಂಗಳೂರು ನಗರದ ಗಾರ್ವೆಬಾವಿಪಾಳ್ಯ ಕೆರೆಯ ಬಫರ್ ವಲಯದಲ್ಲಿ ನಿರ್ಮಿಸಲಾಗುತ್ತಿದ್ದು, ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದರೂ, ಕಾನೂನು ಕ್ರಮ ಕೈಗೊಳ್ಳದ ಕಾರಣ ಪ್ರಕರಣದ ಬಗ್ಗೆ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ದೂರು ನೀಡಿದ್ದಾರೆ. ಶಾಲಾ
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಗಾರ್ವೆಬಾವಿಪಾಳ್ಯ ಕರೆ ಬಿಬಿಎಂಪಿ ಒಡೆತನಕ್ಕೆ ಸೇರಿದ ಈ ಕೆರೆಯು ಹಿಂದೊಮ್ಮೆ ಅಭಿವೃದ್ಧಿಗೊಂಡಿದ್ದರೂ, ನಿರ್ವಹಣೆ ಇಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಇದನ್ನೂ ಓದಿ : ಸಾಲಕ್ಕಾಗಿ ನಾಟಿ ಕೋಳಿ ಲಂಚ: ಬರೋಬ್ಬರಿ 39,000 ರೂಪಾಯಿ ಮೌಲ್ಯದ ನಾಟಿ ಕೋಳಿ ತಿಂದು ತೇಗಿದ ಬ್ಯಾಂಕ್ ಮಾನೇಜರ್
ಹೀಗಾಗಿ ಪಾಲಿಕೆ ಅಧಿಕಾರಿಗಳು ಕರೆ ಕಡೆ ಮುಖ ಮಾಡಿಲ್ಲ. ಈ ಸನ್ನಿವೇಶದಲ್ಲಿ ಲಿಟಲ್ ರೋಸ್ ಶಾಲೆಯು ಹೊಸದಾಗಿ ಬೃಹತ್ ಕಟ್ಟಡವನ್ನು ಕೆರೆಗೆ ಹೊಂದಿಕೊಂಡಂತೆ ನಿರ್ಮಿಸುತ್ತಿದೆ. ಕೆರೆಯ ಬಫರ್ ವಲಯದಲ್ಲಿ ಯಾವುದೇ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇಲ್ಲವೆಂದು ಎನ್‌ಜಿಟಿ ಸ್ಪಷ್ಟಪಡಿಸಿದೆ.
ಆದರೂ ಖಾಸಗಿ ಶಿಕ್ಷಣ ಸಂಸ್ಥೆಯು ಸಾರ್ವಜನಿಕರ ಉಪಯೋಗದ ಜಾಗವಾದ ಕೆರೆಯ ಬಫರ್ ವಲಯವನ್ನು ಸ್ವಂತ ಬಳಸಿಕೊಳ್ಳುತ್ತಿದೆ. ಹೀಗಾಗಿ ಕಾನೂನು ಬಾಹಿರವಾಗಿ ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿರುವವರ ಕ್ರಮ ಕೈಗೊಳ್ಳಬೇಕೆಂದು ಕೋರಿ ದೂರು ನೀಡಿರುವುದಾಗಿ ಎನ್.ಆರ್.ರಮೇಶ್ ತಿಳಿಸಿದ್ದಾರೆ.
ಇದನ್ನೂ ನೋಡಿ : ಕೋವಿಡ್ ಹಣ ತಿಂದವರನ್ನು ಬಿಡಲ್ಲ: ಡಿಸಿಎಂ ಡಿಕೆ ಶಿವಕುಮಾರ್ Janashakthi Media