ಏಕಾಏಕಿ ಹೊತ್ತಿ ಉರಿದ ಶಾಲಾ ಬಸ್, ತಪ್ಪಿದ ಅನಾಹುತ

ಮೈಸೂರು: ಶಾಲಾ ಬಸ್ ಒಂದು ಏಕಾಏಕಿ ಹೊತ್ತಿ ಉರಿದ ದುರ್ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಡಿಟಿಎಮ್‌ಎನ್‌ ಖಾಸಗಿ ಶಾಲಾ ಆವರಣದಲ್ಲಿ ನಡೆದಿದೆ. ಘಟನೆಯಲ್ಲಿ ಒಂದು ಬಸ್ ಬೆಂಕಿಗಾಹುತಿ ಆಗಿದ್ದು, ಕೆಲ ಬಸ್‌ಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಮಕ್ಕಳನ್ನು ‌ಕೆಳಗಿಳಿಸಿ ಶಾಲಾ ಆವರಣದಲ್ಲಿ ಬಸ್ ನಿಲ್ಲಿಸಲಾಗಿತ್ತು. ಈ ಕಾರಣದಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

ಬಸ್‌ನಲ್ಲಿ ಶಾಲಾ ಮಕ್ಕಳು ಇಲ್ಲದಿದ್ದರಿಂದ ಅನಾಹುತ ತಪ್ಪಿದೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಬೆಂಕಿ ತಗಲುತ್ತಿದ್ದಂತೆ ಅಕ್ಕ ಪಕ್ಕ ನಿಲ್ಲಿಸಿದ್ದ ಬಸ್ ಗಳ ತೆರವು ಮಾಡಲಾಗಿದೆ. ಸದ್ಯ ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಪಿರಿಯಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ : ಶಾಲಾ ಶುಲ್ಕ ಕಟ್ಟಿಲ್ಲ ಎಂದು ಮಕ್ಕಳನ್ನು ಬಿಸಿಲನಲ್ಲಿ ನಿಲ್ಲಿಸಿದ ಖಾಸಗಿ ಶಾಲೆ

ಬಸ್‌ಗೆ ಯಾರಾದರೂ ಬೆಂಕಿ ಹಚ್ಚಿದರಾ, ಇಲ್ಲವೇ ಆಕಸ್ಮಿಕವಾಗಿ ಹೊತ್ತಿಕೊಂಡಿತಾ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.  ಬಸ್‌ ನಲ್ಲಿ ಪ್ರಯಾಣಿಸುವಾಗ ಈ ರೀತಿ ಬೆಂಕಿ ಹತ್ತಿಕೊಂಡಿದ್ದರೆ ಎಂತಹ ಅನಾಹುತ ಆಗುತ್ತಿತ್ತು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಬಸ್‌ಗಳು ಹಳೆಯದ್ದಾಗಿರಬಹುದಾ? ಅಥವಾ ಕಳಪೆ ಬಸ್‌ಗಳಾ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Donate Janashakthi Media

Leave a Reply

Your email address will not be published. Required fields are marked *