ಶಾಲೆಯ ಕಟ್ಟಡದ ಮೇಲ್ಛಾವಣಿ ಕುಸಿತ; 5 ಮಕ್ಕಳು ಸಾವು

ರಾಜಸ್ಥಾನ: ಸರ್ಕಾರಿ ಶಾಲೆಯ ಕಟ್ಟಡದ ಮೇಲ್ಛಾವಣಿ ಕುಸಿದ ಪರಿಣಾಮ ಐವರು ಮಕ್ಕಳು ಸಾವನ್ನಪ್ಪಿರುವ ಘಟನೆ ಜುಲೈ 25ರಂದು ರಾಜಸ್ಥಾನದ ಜಾಲಾವರ್‌ ನಲ್ಲಿ ಸಂಭವಿಸಿದೆ. ಮೂವತ್ತಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ.

ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚು ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಮನೋಹರ್ ಥಾಣೆಯ ಪಿಪ್ಲೋಡಿ ಸರ್ಕಾರಿ ಶಾಲೆಯಲ್ಲಿ ಬೆಳಿಗ್ಗೆ 8.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬೆಳಗ್ಗೆ ಎಂದಿನಂತೆ ಪ್ರಾರ್ಥನೆಯ ಸಮಯದಲ್ಲಿ ಕಟ್ಟಡದ ಮೇಲ್ಛಾವಣಿ ಕುಸಿದ ಪರಿಣಾಮ ಶಿಕ್ಷಕರು ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ.

ಮೂಲಗಳ ಪ್ರಕಾರ, ಈ ಶಾಲೆಯಲ್ಲಿ ಒಂದರಿಂದ – ಎಂಟನೇ ತರಗತಿಯ ವರೆಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿತ್ತು. ಅಲ್ಲದೇ ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು, ಈ ಸಂಬಂಧ ಈ ಹಿಂದೆ ಹಲವಾರು ದೂರುಗಳನ್ನು ನೀಡಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ.

ಇದನ್ನೂ ಓದಿ: ವರ್ಗಾ ಅಟ್ಯಾಚ್ಮೆಂಟ್ ಕಾರ್ಖಾನೆ ಮುಚ್ಚಬಾರದು: ಕಾರ್ಮಿಕರು ಪ್ರತಿಭಟನೆ

ಇದೀಗ ಮಳೆಯಿಂದಾಗಿ ಕಟ್ಟಡದ ಛಾವಣಿ ದಿಢೀರ್ ಕುಸಿದಿದ್ದು, ಘಟನೆಯಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ, ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಝಾಲಾವರ್ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ನಾಲ್ಕು ಜೆಸಿಬಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನು ಈ ಘಟನೆಯ ಬಗ್ಗೆ ರಾಜಸ್ಥಾನ ಶಿಕ್ಷಣ ಸಚಿವ ಮದನ್ ದಿಲಾವರ್ ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಝಲಾವರ್‌ನ ಶಾಲೆಯಲ್ಲಿ ನಡೆದ ದುರಂತ ನನಗೆ ತುಂಬಾ ದುಃಖವಾಗಿದೆ. ಗಾಯಗೊಂಡ ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಚಿಕಿತ್ಸೆಯನ್ನು ಸರ್ಕಾರ ಭರಿಸಲಿದೆ. ಛಾವಣಿ ಹೇಗೆ ಕುಸಿದಿದೆ ಎಂಬುದನ್ನು ಕಂಡುಹಿಡಿಯಲು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಪ್ರತ್ಯೇಕ ಘಟನೆಯಲ್ಲಿ ಕೆಲವು ಖದೀಮರು ಡೆಲಿವರಿ ಬಾಯ್ಸ್‌ ಸೋಗು ಧರಿಸಿ ಚಿನ್ನದಂಗಡೆ ದರೋಡೆ (Robbery) ನಡೆಸಿರುವ ಘಟನೆ ಉತ್ತರಪ್ರದೇಶಧ (Uttar pradesh) ಘಜಿಯಾಬಾದ್‌ (Ghaziabad) ನಲ್ಲಿ ನಡೆದಿದೆ. ಇಡೀ ಘಟನೆಯ ದೃಶ್ಯಗಳು ಅಂಗಡಿಯ ಸಿಸಿಟಿವಿ ಕೆಮೆರಾದಲ್ಲಿ (CCTV Visuals) ದಾಖಲಾಗಿದೆ.

ಬೃಜವಿಹಾರದಲ್ಲಿರುವ ಈ ಅಂಗಡಿಯಲ್ಲಿ ಅಂಗಡಿಯ ಮಾಲಿಕ ಕೃಷ್ಣ ಕುಮಾರ್‌ ವರ್ಮ ತನ್ನ ಸಹಾಯಕ ಶುಭಮ್‌ ಕುಮಾರ್‌ ನನ್ನು ಬಿಟ್ಟು ವಿ‍ಶ್ರಾಂತಿಗೆ ತೆರಳಲು ಸಿದ್ದವಾಗುತ್ತಿದ್ದರು. ಈ ವೇಳೆ ಸಮಯ ನೋಡಿ ಬಂದ ಖದೀಮರು ಈ ಕುಕೃತ್ಯ ನಡೆಸಿದ್ದಾರೆ.

ಕೈಯಲ್ಲಿ ಆಯುಧಗಳನ್ನು ಹಿಡಿದು ಬಂದ ಇಬ್ಬರು ದರೋಡೆಕೋರರು ಚಿನ್ನ, ಬೆಳ್ಳಿ ಹಾಗೂ ಗಲ್ಲಾಪೆಟ್ಟಿಗೆಯಲ್ಲಿದ್ದ ನಗದು ಹಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಮೊದಲು ಕಳ್ಳರು ಹೊರಗಿನಿಂದ ಬಂದು ಬಾಗಿಲು ತಟ್ಟಿದರು. ಆದರೆ ನಾನು ಬಾಗಿಲು ತೆರೆಯಲು ನಿರಾಕರಿಸಿದೆ. ಆದರೆ ಬಲವಂತವಾಗಿ ಒಳನುಗ್ಗಿದ ಖದೀಮರು ಬಂದೊಡನೆ ತಮ್ಮ ಕೈಲಿದ್ದ ಕಂಟ್ರಿ ಪಿಸ್ತೂಲು ತೋರಿಸಿ ಬೆದರಿಸಿದರು. ಹಲವು ಬಾರಿ ಕೆನ್ನೆಗೆ ಬಾರಿಸಿದ ದರೋಡೆಕೋರರು ಬಳಿಕ ತಮ್ಮ ಕೆಲಸ ಮುಂದುವರೆಸಿದರು ಎಂದು ಮಾಲಿಕರು ಹೇಳಿದ್ದಾರೆ.

ಒಟ್ಟಾರೆ 35-38 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದೆ ಎಂದು ಮಳಿಗೆ ಮಾಲಿಕರು ಹೇಳಿದ್ದಾರೆ.

ಇದನ್ನೂ ನೋಡಿ: ಪರಿಸರ ಜಾಗೃತಿ | ‘ಪ್ಲಾಸ್ಟಿಕ್ ಬಳಕೆಯಿಂದ ಜೀವರಾಶಿಗೆ ಅಪಾಯ‘ Janashakthi Media

Donate Janashakthi Media

Leave a Reply

Your email address will not be published. Required fields are marked *