ಕುಸಿದು ಬಿದ್ದ ಬಿಬಿಎಂಪಿ ಶಾಲೆ: ಹೊಸ ಕಟ್ಟಣ ನಿರ್ಮಾಣಕ್ಕೆ 10 ಲಕ್ಷ ಮಂಜೂರು

ಬೆಂಗಳೂರು: ಶಿವಾಜಿನಗರದ ಕುಕ್ಸ್ ರೋಡ್’ನ ಬಿ ಕ್ರಾಸ್‌ನಲ್ಲಿರುವ ಬಿಬಿಎಂಪಿಯ ನರ್ಸರಿ ಶಾಲೆ ಭಾನುವಾರ ತಡರಾತ್ರಿ ಹಠಾತ್ ಕುಸಿದು ಬಿದ್ದಿದ್ದು,ಹೊಸ ಕಟ್ಟಣ ನಿರ್ಮಾಣಕ್ಕೆ ರೂ.10 ಲಕ್ಷ ಮಂಜೂರು ಮಾಡಲಾಗಿದ್ದೆ ಎಂದು ವರದಿಯಾಗಿದೆ. ಘಟನೆ ಮಧ್ಯರಾತ್ರಿ ಸಂಭವಿಸಿರುವುದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ನನ್ನ ಇಬ್ಬರು ಹೆಣ್ಣುಮಕ್ಕಳನ್ನು ಬೆಳಿಗ್ಗೆ ಶಾಲೆಗೆ ಬಿಡಲು ಹೋಗಿದ್ದೆ. ಶಾಲಾ ಕಟ್ಟಡ ಕುಸಿದು ಬಿದ್ದಿರುವುದನ್ನು ನೋಡಿ ಆಘಾತವಾಯಿತು ಎಂದು ಪೋಷಕರಾದ ರಿಹಾನಾ ಮೊಹಮ್ಮದ್ ಅವರು ಹೇಳಿದ್ದಾರೆ. ಶಾಲೆಯ ಹತ್ತಿರವೇ ವಾಸವಿದ್ದೇವೆ. ಕಟ್ಟಡ ಕುಸಿದುಬಿದ್ದ ಕೂಡಲೇ ಶಿಕ್ಷಕರಿಗೆ ಮಾಹಿತಿ ನೀಡಲಾಯಿತು. ಬಳಿಕ ಪೊಲೀಸರು ಹಾಗೂ ಬಿಬಿಎಂಪಿ ಎಂಜಿನಿಯರ್‌ಗಳಿಗೂ ಮಾಹಿತಿ ನೀಡಲಾಯಿತು ಎಂದು ಸ್ಥಳೀಯ ನಿವಾಸಿ ಪ್ರೇಮಾ ಎಂಬುವವರು ಹೇಳಿದ್ದಾರೆ.

ಇದನ್ನೂ ಓದಿ: ಖಾಸಗಿ ಮೆಡಿಕಲ್‌ ಲಾಬಿ ಆಟಕ್ಕೆ ವಿದ್ಯಾರ್ಥಿ ಬಲಿ

ಹೊಸ ಕಟ್ಟಡ ನಿರ್ಮಾಣಕ್ಕೆ ಟೆಂಟರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಶಾಲೆಯ ಶಿಕ್ಷಕರೊಬ್ಬರು ಹೇಳಿದ್ದಾರೆ.ಮಕ್ಕಳನ್ನು ಇದೀಗ ಹತ್ತಿರದ ಬಿಬಿಎಂಪಿ ಶಾಲೆಗೆ ಸ್ಥಳಾಂತರಿಸಲಾಗಿದೆ ಎಂದು ಶಾಲೆಯ ಭದ್ರತಾ ಸಿಬ್ಬಂದಿ ಹೇಳಿದ್ದಾರೆ.

ಹೊಸ ಕಟ್ಟಡ ನಿರ್ಮಾಣಕ್ಕೆ ರೂ.10 ಲಕ್ಷ ಮಂಜೂರಾಗಿದೆ. ಆದರೆ, ಕಟ್ಟಣ ಕಾಮಗಾರಿ ಪೂರ್ಣಗೊಳಿಸಲು ಮತ್ತಷ್ಟು ಹಣದ ಅಗತ್ಯವಿದೆಯ ಆದರೆ, ಕ್ರಮಗಳ ಕೈಗೊಳ್ಳುವುದಕ್ಕೂ ಮುನ್ನವೇ ಕಟ್ಟಡ ಕುಸಿದು ಬಿದ್ದಿದೆ. ಎಂದು ಸ್ಥಳೀಯ ಶಾಸಕರು ಹೇಳಿದ್ದಾರೆ.

ಕ್ಷೇತ್ರದ ಬಹುತೇಕ ಸಾರ್ವಜನಿಕ ಕಟ್ಟಡಗಳು 50 ವರ್ಷಕ್ಕಿಂತ ಹಳೆಯದ್ದಾಗಿದೆ. ಅವುಗಳ ಪುನರ್ ನಿರ್ಮಾಣಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಇಂತಹ 20 ಸಾರ್ವಜನಿಕ ಕಟ್ಟಡಗಳನ್ನು ಕೆಡವಬೇಕಿದೆ. ಏಳು ಶಾಲಾ ಕಟ್ಟಡಗಳು, ಮೂರು ಸಮುದಾಯ ಭವನಗಳು ಮತ್ತು ಮೂರು ಗ್ರಂಥಾಲಯಗಳ ಕಾಮಗಾರಿ ನಡೆಯುತ್ತಿದೆ. ಕುಸಿದು ಬಿದ್ದ ನರ್ಸರಿ ಶಾಲೆಯೂ ಈ ಪಟ್ಟಿಯಲ್ಲಿದೆ ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.

ವಿಡಿಯೋ ನೋಡಿ: ಪೋಕ್ಸೋ ಪ್ರಕರಣದ ಆರೋಪಿ ಸ್ವಾಮಿಗೆ ಪಾದಪೂಜೆ ! ಜನರ ಪ್ರಜ್ಞೆಗೆ ಏನಾಗಿದೆ? – ಮೂಡ್ನಾಕೂಡು ಚಿನ್ನಸ್ವಾಮಿ

Donate Janashakthi Media

Leave a Reply

Your email address will not be published. Required fields are marked *