ರಾಜಸ್ಥಾನ: ರಾಜಸ್ಥಾನದ ಭರತ್‌ಪುರ ಜಿಲ್ಲೆಯ ವೀರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಹದ್ದೂರ್ ಸಿಂಗ್ ಕೋಲಿ, ಎಸ್ಸಿ-ಎಸ್ಟಿ ಕಾಯ್ದೆ ಎಂದರೆ ʼಗೂಂಡಾಗಿರಿʼ ಎಂದು ಹೇಳುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ.
ಖೇಡ್ಲಿ ಮಾಡ್ ಪೊಲೀಸ್ ಠಾಣೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕ ಬಹದ್ದೂರ್ ಸಿಂಗ್ ಕೋಲಿ ಭರತ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಚವಾ ಅವರ ಸಮ್ಮುಖದಲ್ಲೇ ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ಇದನ್ನು ಓದಿ : ನಾಥೂರಾಂ ಗೋಡ್ಸೆ ಭಾರತದ ಮೊದಲ ಭಯೋತ್ಪಾದಕ: ಸಚಿವ ಸಂಪುಟ ಸಭೆಯಲ್ಲಿ ಬಿ.ಕೆ ಹರಿಪ್ರಸಾದ್ ಹೇಳಿಕೆ
ಹೆಚ್ಚಿನ ಸುಳ್ಳು ಪ್ರಕರಣಗಳು ಎಸ್ಸಿ-ಎಸ್ಟಿ ಕಾಯ್ದೆಯಡಿ ದಾಖಲಿಸಲಾಗಿದೆ. ಅಂತಹ ಪ್ರಕರಣಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವ ಅಗತ್ಯವಿದೆ. ಜನರು ಸಾಮಾನ್ಯವಾಗಿ ಮದುವೆ ಅಥವಾ ಇತರ ಕಾರ್ಯಕ್ರಮಗಳಿಗೆ ಸಾಲ ಪಡೆಯುತ್ತಾರೆ. ಸಾಲ ಕೊಟ್ಟವರು ವಾಪಾಸ್ಸು ಕೇಳಿದಾಗ ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತದೆ. ಸಾಲ ಕೊಟ್ಟವನಿಗೆ ಕೊಟ್ಟ ಹಣ ಬಿಟ್ಟು ಬಿಡುವುದು ಮಾತ್ರವಲ್ಲ, ಪ್ರಕರಣದ ಇತ್ಯರ್ಥಕ್ಕೆ 5 ಲಕ್ಷದವರೆಗೆ ಕೊಡುವಂತೆ ಆಗ್ರಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ಗೂಂಡಾಗಿರಿ ಏನಾದರು ಇದ್ದರೆ ಅದು ಎಸ್ಸಿ-ಎಸ್ಟಿ ಕಾಯ್ದೆಯಡಿಯಾಗಿದೆ. ಈ ಕಾಯ್ದೆಯ ದುರುಪಯೋಗ ಕೊನೆಗೊಳ್ಳಬೇಕು ಎಂದು ಅವರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶಾಸಕ ಬಹದ್ದೂರ್ ಸಿಂಗ್ ಕೋಲಿ ವಿವಾದಾತ್ಮಕ ಹೇಳಿಕೆ ನೀಡುವುದು ಇದು ಮೊದಲಲ್ಲ. ಈ ಹಿಂದೆ ಪಕ್ಷದ ಸಭೆಯೊಂದರಲ್ಲಿ ಬಿಜೆಪಿ ಮಹಿಳಾ ನಾಯಕಿಯೊಬ್ಬರನ್ನು ‘ಕಳ್ಳಿ’ ಎಂದು ಕರೆದು ತಮ್ಮದೇ ಪಕ್ಷದೊಳಗೆ ಸಂಚಲನ ಮೂಡಿಸಿದ್ದರು.
ಇದನ್ನು ನೋಡಿ : ಪ್ಯಾಲೆಸ್ಟೀನ್ ಪರವಾಗಿ ಧ್ವನಿಯೆತ್ತುವುದು ಅಪರಾಧವೇ? ಪ್ರತಿಭಟನೆಕಾರರ ಪ್ರಶ್ನೆ Janashakthi Media