ಕೊಳೆತ ತರಕಾರಿ ಬಳಕೆ, ಊಟದಲ್ಲಿ ಜಿರಳೆ: ಎಸ್‌ಸಿ ವಸತಿ ನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ

ಕೊಪ್ಪಳ: ವಿದ್ಯಾರ್ಥಿಗಳು ಮಾರ್ಚ್‌ 9ರ ತಡರಾತ್ರಿ ನಗರದ ಹಮಾಲರ ಕಾಲೊನಿಯಲ್ಲಿರುವ ಎಸ್‌ಸಿ-3 ವಸತಿ ನಿಲಯದಲ್ಲಿ ಸಮಸ್ಯೆಗಳು ತಾಂಡವಾಡುತ್ತಿದ್ದು, ಕೊಳೆತ ತರಕಾರಿ ಬಳಸಿ ವಿದ್ಯಾರ್ಥಿಗಳಿಗೆ ಅಡುಗೆ ಮಾಡಲಾಗುತ್ತಿದೆ. ಊಟ ಅವ್ಯವಸ್ಥೆಯಿಂದ ಕೂಡಿರುತ್ತದೆ ಎಂದು ಆರೋಪಿಸಿ  ಜಿಲ್ಲಾಡಳಿತ ಭವನದ ಎದುರು ದಿಢೀರ್ ಪ್ರತಿಭಟನೆ ನಡೆಸಿದರು. ತರಕಾರಿ

ವಿದ್ಯಾರ್ಥಿಗಳಿಗೆ ಸರಿಯಾಗಿ ಬಾಳೆಹಣ್ಣು ಕೊಟ್ಟಿಲ್ಲ. ಶೌಚಾಲಯಗಳು ಸ್ವಚ್ಛವಾಗಿಲ್ಲ, ಊಟ ರುಚಿ ಇರಲ್ಲ, ವ್ಯವಸ್ಥೆ ಸರಿಯಾಗಿ ನಿರ್ವಹಣೆ ಮಾಡದ ವಾರ್ಡನ್ ಬಸವರಾಜ ಕಟ್ಟಿ ಅವರನ್ನು ಬದಲಾವಣೆ ತಕ್ಷಣವೇ ಬದಲಾವಣೆ ‌ಮಾಡಬೇಕು ಎಂದು ದೂರಿದರು. ತಕ್ಷಣವೇ ವಾರ್ಡನ್ ಬದಲಾವಣೆ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ ಜೊತೆ ಮಾತಿನ ಚಕಮಕಿ ನಡೆಸಿದರು.

ಇದನ್ನೂ ಓದಿ: ಕರ್ನಾಟಕ ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ ಡಿಜಿಟಲ್ ವ್ಯವಸ್ಥೆ ಹೊಂದಿದೆ: ಜಿ. ಪರಮೇಶ್ವರ್

ವಾರ್ಡನ್ ಬದಲಾವಣೆ ಮಾಡಲು ಒಂದು ವಾರ ಸಮಯ ಕೊಡುವಂತೆ ಅಜ್ಜಪ್ಪ ಅವರು ಮಾಡಿದ ಮನವಿಗೂ ಕಿವಿಗೊಡದ ವಿದ್ಯಾರ್ಥಿಗಳು ತಕ್ಷಣವೇ ವಾರ್ಡನ್ ಬದಲಾವಣೆ ಆಗಬೇಕು ಎಂದು ಪಟ್ಟು ಹಿಡಿದರು.

ಇದಕ್ಕೆ ‌ಒಪ್ಪದ ಕಾರಣ ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ವಾರ್ಡನ್ ಬದಲಾವಣೆ ಮಾಡುವ ತನಕ ಸ್ಥಳಬಿಟ್ಟು ಹೋಗುವುದಿಲ್ಲ. ಊಟದಲ್ಲಿ ಕೂದಲು, ಜಿರಳೆ ಬೀಳುವುದು ಸಾಮಾನ್ಯವಾಗಿದೆ. ಸರಿಯಾಗಿ ಮೊಟ್ಟೆ ನೀಡುವುದಿಲ್ಲ ಎಂದು ದೂರಿದರು.

ಕೆಲ ವಿದ್ಯಾರ್ಥಿಗಳ ತಟ್ಟೆ ಸಮೇತ ಬಂದು ಪ್ರತಿಭಟಿಸಿದರು. ಕೆಲ ಹೊತ್ತಿನ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರು.

ಇದನ್ನೂ ನೋಡಿ: ಪಿಚ್ಚರ್‌ ಪಯಣ -169 | ಸಿನೆಮಾ : ಕೈರೋ ಸ್ಟೇಷನ್ : ವಿಶ್ಲೇಷಣೆ : ಬಿ. ಶ್ರೀಪಾದ ಭಟ್ Janashakthi Media

Donate Janashakthi Media

Leave a Reply

Your email address will not be published. Required fields are marked *