ಗುಜರಾತ್‌ ಕೋಮು ಹತ್ಯಾಕಾಂಡ ಮುಚ್ಚಿಹಾಕುವ ಯತ್ನ: ಸುಪ್ರೀಂ ತೀರ್ಪಿಗೆ ಎಸ್‌ಯುಸಿಐ(ಸಿ) ಆಕ್ರೋಶ

ಬೆಂಗಳೂರು: ಭಾರತದ ಸರ್ವೋಚ್ಚ ನ್ಯಾಯಾಲಯವು 2022ರ ಆಗಸ್ಟ್ 30ರಂದು ನೀಡಿದ ತೀರ್ಪಿನಲ್ಲಿ,  2002ರ ಗುಜರಾತ್ ಕೋಮು ಹತ್ಯೆಗಳ ಸಂತ್ರಸ್ತರು ಸಲ್ಲಿಸಿದ್ದ ಅರ್ಜಿಗಳನ್ನು ಹಾಗೂ ಬಹಳ ಕಾಲ ಬಾಕಿ ಉಳಿದಿದ್ದ ಮಾನವ ಹಕ್ಕು ಆಯೋಗವು ಸಲ್ಲಿಸಿದ್ದ ಅರ್ಜಿಗಳನ್ನು ಯೋಗ್ಯ ರೀತಿಯಲ್ಲಿ ಮುಂದುವರೆಸುವ ಬದಲು, ಅವುಗಳನ್ನು ‘ಅನುಪಯುಕ್ತ’ ಎಂದಿರುವ ಬಗ್ಗೆ ಎಸ್‌ಯುಸಿಐ(ಸಿ) ಪಕ್ಷವು ಬೇಸರ ವ್ಯಕ್ತಪಡಿಸಿದೆ.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಎಸ್‌ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಕೆ. ಉಮಾ ಅವರು, ಕಳೆದ 20 ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿರುವ ಗುಜರಾತ್ ಅಲ್ಪಸಂಖ್ಯಾತ ವಿರೋಧಿ ಕೋಮು ಹತ್ಯಾಕಾಂಡ ಪ್ರಕರಣಗಳನ್ನು ವ್ಯವಸ್ಥಿತ ರೀತಿಯಲ್ಲಿ ಮುಚ್ಚಿಹಾಕುವ ಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.

ಅಲ್ಲದೇ, ಸುಪ್ರೀಂ ಕೋರ್ಟ್‌ ಇತ್ತೀಚಿಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಅತ್ಯಂತ ಏಕಪಕ್ಷೀಯ ರೀತಿಯಲ್ಲಿ ಅಂತ್ಯಗೊಳಿಸಿವ ಇರಾದೆ ಇದಾಗಿದೆ, ಇದರಿಂದ ನಾವು ಆಘಾತಕ್ಕೊಳಗಾಗಿದ್ದೀವೆ. ನಮ್ಮ ಅಭಿಪ್ರಾಯದಲ್ಲಿ, ಇದು ನೊಂದವರಿಗೆ ನ್ಯಾಯ ಒದಗಸಲು ವಿಫಲವಾಗಿರುವುದು ಮಾತ್ರವಲ್ಲ, ಬದಲಿಗೆ ಗುಜರಾತ್ ಹತ್ಯಾಕಾಂಡದ ಅಪರಾಧಿಗಳಿಗೆ ಪುರಸ್ಕಾರ ನೀಡಿರುವ ಅತ್ಯಂತ ಗಂಭೀರ ರೀತಿಯ ತಪ್ಪಾಗಿದೆ ಎಂದು ತಿಳಿಸಿದ್ದಾರೆ.

ಈ ಘೋರ ಅನ್ಯಾಯದ ಆದೇಶವನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಅರ್ಜಿಗಳನ್ನು ಪರಿಗಣಿಸಿ, ಆ ಮೂಲಕ ನೊಂದವರಿಗೆ ಸಾಧ್ಯವಾದಷ್ಟು ಬೇಗ ನ್ಯಾಯವನ್ನು ಒದಗಿಸಬೇಕು ಎಂದು ಎಂದು ಆಗ್ರಹಿಸಿದ್ದಾರೆ.

ಇಂತಹ ಅನ್ಯಾಯದ ವಿರುದ್ಧ ಪ್ರಬಲ ಹೋರಾಟ ಬೆಳೆಸಿ, ಪ್ರತಿಭಟನೆಯ ಧ್ವನಿಯನ್ನು ಎತ್ತಬೇಕೆಂದು ರಾಜ್ಯದ ಜನರಲ್ಲಿ ಎಸ್‌ಯುಸಿಐ(ಸಿ) ಪಕ್ಷದ ರಾಜ್ಯ ಸಮಿತಿಯು ಮನವಿ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *