ಮೀನು ಕಾರ್ಖಾನೆ ದುರಂತ: ಸಾವಿಗೀಡಾದ ಕುಟುಂಬಸ್ಥರನ್ನು ಭೇಟಿ ಮಾಡಿದ ಡಿವೈಎಫ್‌ಐ

  • ಏಪ್ರಿಲ್‌ 17ರಂದು ಮೀನು ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ
  • ಪಶ್ಚಿಮ ಬಂಗಾಳ ಮೂಲದ ದುರಂತದಲ್ಲಿ 5 ಮಂದಿ ಕಾರ್ಮಿಕರು ದುರ್ಮರಣ
  • ಎಸ್‌ಇಝೆಡ್‌ ವ್ಯಾಪ್ತಿಯ ಉಲ್ಕಾ ಮೀನು ಕಾರ್ಖಾನೆ

ಮಂಗಳೂರು: ತಿಂಗಳ ಹಿಂದಷ್ಟೇ ಮಂಗಳೂರು ಸೆಝ್ ನಲ್ಲಿರುವ ಶ್ರೀ ಉಲ್ಕಾ ಮೀನು ಕಾರ್ಖಾನೆಯಲ್ಲಿ ಸಂಭವಿಸಿದ ದುರಂತದಲ್ಲಿ ಸಾವಿಗೀಡಾದ ಕಾರ್ಮಿಕರ ಕುಟುಂಬಸ್ಥರು ವಾಸವಾಗಿರುವ ಪಶ್ಚಿಮ ಬಂಗಾಳದ ದೇಗಂಗಾ ಗ್ರಾಮದ ನಿವಾಸಕ್ಕೆ ಭೇಟಿ ನೀಡಿದ ಡಿವೈಎಫ್‌ಐ ರಾಜ್ಯ ಸಮಿತಿ ನಿಯೋಗ ಸಾಂತ್ವನ ಹೇಳಿದೆ.

ಇದನ್ನು ಓದಿ: ಎಸ್ಇಝಡ್ ದುರಂತಕ್ಕೆ ಜಿಲ್ಲಾಡಳಿತವೇ ಹೊಣೆ : ಡಿವೈಎಫ್ಐ

ಪರಿಹಾರ ಮೊತ್ತ ಒದಗಿಸುವ ಕೆಲಸದ ಪ್ರಗತಿಯ ಕುರಿತು ಪರಿಶೀಲನೆ ಹಾಗೂ ವಲಸೆ ಕಾರ್ಮಿಕರ ಸಂಘಟನೆಯ ಪ್ರಮುಖರೊಂದಿಗೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್‌ಐ) ರಾಜ್ಯ ನಿಯೋಗವು ಚರ್ಚಿಸಿದೆ.

ನಿಯೋಗವನ್ನು ಆತ್ಮೀಯವಾಗಿ ಬರಮಾಡಿಕೊಂಡ ಗ್ರಾಮಸ್ಥರು ದುರಂತದ ಸಂದರ್ಭ ಜೊತೆ ನಿಂತ ಸಹಾಯ ಒದಗಿಸಿದ, ಕುಟುಂಬಗಳಿಗೆ ತಲಾ 15 ಲಕ್ಷ ರೂಪಾಯಿ ಪರಿಹಾರ ಕೊಡಿಸಲು ಶ್ರಮಿಸಿದ ಮಂಗಳೂರಿನ ಡಿವೈಎಫ್‌ಐ ಸಂಘಟನೆಯ ಮುಖಂಡರಿಗೆ ದೇಗಂಗಾ ಗ್ರಾಮದ ನಿವಾಸಿಗಳಿಗೆ ಕೃತಜ್ಞತೆಯನ್ನು ಅರ್ಪಿಸಿದರು.

ಕುಟುಂಬಳಿಗೆ ಉಲ್ಕಾ ಮೀನು ಕಾರ್ಖಾನೆಯ ಕಡೆಯಿಂದ ಪರಿಹಾರ ಧನ ಒದಗಿಸುವ ಕೆಲಸ ಪ್ರಗತಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಸಂತ್ರಸ್ತರ ಕುಟುಂಬದ ಗುರುತು ದೃಢೀಕರಣಕ್ಕಾಗಿ 24 ಪರಗಣ ಜಿಲ್ಲಾಧಿಕಾರಿಗಳಿಗೆ ಕಳುಹಿಸಿರುವ ಪಟ್ಟಿಯ ಪರಿಶೀಲನೆ ನಡೆಯುತ್ತಿದೆ. ಬಹುತೇಕ ಪೂರ್ಣಗೊಂಡಿದೆ ಎಂದು ತಿಳಿದುಬಂದಿದ್ದು, ದೃಢೀಕರಣಗೊಂಡ ಪಟ್ಟಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ತಲುಪಿದ ತಕ್ಷಣ ಕಂಪೆನಿ ಕುಟುಂಬಗಳ ಖಾತೆಗೆ ನಗದು ವರ್ಗಾಯಿಸಲಿದೆ ಎಂದು ವರದಿಯಾಗಿದೆ.

ಡಿವೈಎಫ್‌ಐ ಕರ್ನಾಟಕ ರಾಜ್ಯ ನಿಯೋಗದಲ್ಲಿ, ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಮಹೇಶ್‌ ಬಿಸಾಟಿ, ವಿ.ಅಂಬರೀಶ್‌, ಸಂತೋಷ್‌ ಹಾಗೂ  24 ಪರಗಣ ಜಿಲ್ಲೆಯ ಸ್ಥಳೀಯ ಡಿವೈಎಫ್‌ಐ ಮುಖಂಡರು ಜೊತೆಯಾಗಿದ್ದರು.

Donate Janashakthi Media

Leave a Reply

Your email address will not be published. Required fields are marked *