ಬೆಂಗಳೂರು : ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಾಗ, ಸಂವಿಧಾನಕ್ಕೆ ಹೊಡೆತ ಬಿದ್ದಾಗ ಅವುಗಳನ್ನು ಉಳಿಸಲು ಸಂದರ್ಭ ಬಂದಾಗ ಸಾಮಾಜಿಕ ಪ್ರಜ್ಞೆ ಹೊತ್ತು ಸಾಹಿತಿಗಳು ಬೀದಿಗೆ ನಿಂತು ಹೋರಾಟವನ್ನೂ ಮಾಡಬೇಕಾಗುತ್ತದೆ ಎಂದು ಚಿಂತಕ ಸಾಹಿತಿ ಪ್ರೊ.ಎಸ್ ಜಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಎಸ್ ಜಿ ಸಿದ್ದರಾಮಯ್ಯ
ಜನಶಕ್ತಿ ಮೀಡಿಯಾ ಜೊತೆ ಮಾತನಾಡಿದ ಅವರು, 2024 ರ ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಕೋಮುವಾದಿ ಶಕ್ತಿಗಳನ್ನು ಓಡಿಸದ ಹೊರತು ಪ್ರಜಾಪ್ರಭುತ್ವಕ್ಕೂ ಸಂವಿಧಾನಕ್ಕೂ ಉಳಿಗಾಲವಿಲ್ಲ. ಹಿಂದೆ ತುರ್ತು ಪರಿಸ್ಥಿತಿ ಘೋಷಿಸಿದ್ದಾಗಲೂ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿಲ್ಲ. ಆದರೆ ಈ ಕೇಂದ್ರದ ಸುಳ್ಳಿನ ಬಿಜೆಪಿ ಸರ್ಕಾರದಿಂದ ಅನಧಿಕೃತ ತುರ್ತು ಪರಿಸ್ಥಿತಿ ಎದುರಾಗಿದೆ. ಎಸ್ ಜಿ ಸಿದ್ದರಾಮಯ್ಯ
ಇದನ್ನು ಓದಿ : ಶೋಮಾ ಸೇನ್ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು
ಪ್ರಜಾಪ್ರಭುತ್ವವನ್ನು ಸಂವಿಧಾನವನ್ನು ಉಳಿಸುವ ಹೊಣೆಗಾರಿಕೆ ಸಾಹಿತಿಗಳು ಸೇರಿದಂತೆ ಎಲ್ಲರ ಮೇಲೂ ಇದೆ. ಸಂದರ್ಭ ಬಂದಾಗ ಸಾಹಿತಿ, ಬೀದಿಗೂ ಇಳಿಯಬೇಕು,ಪ್ರತಿಭಟಿಸಬೇಕು. ಆತ್ಮದ್ರೋಹ, ಅವಕಾಶವಾದತನ ಮಾಡಬಾರದು ಎಂದು ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ದೇಶದ ಪ್ರಜಾತಂತ್ರದ ಸೂಕ್ಷ್ಮತೆಗೆ ಧಕ್ಕೆ ಬಂದಿದೆ. ಏನಾಗುತ್ತಿದೆ ಭಾರತ? ಏನಾಗುತ್ತಿದೆ ಭಾರತದ ಪರಿಸ್ಥಿತಿ ಎನ್ನುವ ಪ್ರಶ್ನೆಯಿಟ್ಟುಕೊಂಡು ಇಡೀ ವಿಶ್ವವೇ ಭಾರತದತ್ತ ಕುತೂಹಲಕಾರಿಯಾಗಿ ನೋಡುವಂತೆ ಮಾಡಿದೆ. ರಾಜ್ಯದ ಜನರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಿರ್ಭೀತಿಯಿಂದ ಕೋಮುವಾದಿ ಶಕ್ತಿಗಳ ವಿರುದ್ಧ ಮತಚಲಾಯಿಸಿ, ಪ್ರಜಾಪ್ರಭುತ್ವವನ್ನು ಗೆಲ್ಲಿಸಿ ಸಂವಿಧಾನ ಉಳಿಸಬೇಕು ಎಂದರು.
ಇದನ್ನು ನೋಡಿ : ಕಾರ್ಮಿಕ ಪ್ರಣಾಳಿಕೆ ಬಿಡುಗಡೆ |ಕಾರ್ಮಿಕ ವಿರೋಧಿ ಬಿಜೆಪಿಯನ್ನು ಸೋಲಿಸಿ Janashakthi Media