ಸತ್ಯು ಸಂಭ್ರಮ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಸಿನಿಮಾ ನಿರ್ದೇಶಕ, ಕಲಾ ನಿರ್ದೇಶಕ, ಹಿರಿಯ ರಂಗಕರ್ಮಿ ಎಂ.ಎಸ್‌. ಸತ್ಯು ಅವರಿಗೆ ಜುಲೈ 6ರಂದು ಜನ್ಮದಿನ. 93ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ವಿಭಿನ್ನ ವತಿಯಿಂದ ʻಸತ್ಯು ಸಂಭ್ರಮʼ ಹಮ್ಮಿಕೊಳ್ಳಲಾಗಿದೆ. 2022ರ ಜುಲೈ 4 ರಿಂದ 10ರವರೆಗೆ, ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ನಾಟಕ, ಚಲನಚಿತ್ರ, ಸಾಕ್ಷ್ಯಚಿತ್ರ, ರಂಗವಿನ್ಯಾಸ, ರಂಗಚಿತ್ರ, ಸಂವಾದ ಮತ್ತು ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.

1930ರ ಜುಲೈ 6ರಂದು ಮೈಸೂರಿನಲ್ಲಿ ಜನಿಸಿದ ಎಂ ಎಸ್‌ ಸತ್ಯು ಅವರು, ಶಾಲಾ ಶಿಕ್ಷಣ ಮೈಸೂರಿನಲ್ಲಿ ಮುಗಿಸಿ, ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಮುಗಿಸುವಷ್ಟರಲ್ಲಿ ರಂಗಚಟುವಟಿಕೆಗಳು ಮತ್ತು ಸಿನಿಮಾ ಅವರ ಮನಸ್ಸನ್ನು ಸೆಳೆದವು. 1952ರಲ್ಲಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ, ಮುಂಬಯಿಗೆ ಪ್ರಯಾಣ ಬೆಳೆಸಿದರು.

ಚಲನಚಿತ್ರ ನಿರ್ದೇಶನ, ರಂಗಸಜ್ಜಿಕೆ ಚಲನಚಿತ್ರ ಕಲಾ ನಿರ್ದೇಶನ, ಚಿತ್ರಕಥೆ ರಚನೆ, ನಾಟಕ ಒಳಾಂಗಣ ವಿನ್ಯಾಸ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಕೆಲವು ದಶಕಗಳಿಂದ ತೊಡಗಿಸಿಕೊಂಡಿರುವ ಎಂ ಎಸ್‌ ಸತ್ಯು ಅವರು ಭಾರತೀಯ ಸಿನಿಮಾರಂಗ ಹಾಗೂ ರಂಗಭೂಮಿಗೆ ನೀಡಿದ ಕೊಡುಗೆ ಅಪಾರವಾದದ್ದು. ಕಿರುತೆರೆ, ಕಿರುಚಿತ್ರ ನಿರ್ಮಾಣದಲ್ಲಿಯೂ ಖ್ಯಾತಿಗಳಿಸಿದ ಅವರು, ಇತ್ತೀಚಿಗಷ್ಟೇ ಹೊಸ ನಾಟಕವನ್ನು ನಿರ್ದೇಶನ ಮಾಡಿದ್ದಾರೆ. ಸತ್ಯು ಅವರು ಕಲಾನಿರ್ದೇಶಕನಾಗಿ ನಿರ್ದೇಶಿಸಿದ ಮೊದಲ ಚಲನಚಿತ್ರ ಹಕೀಕತ್. ಈ ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು. ನಂತರ ಇವರು ವಿನ್ಯಾಸಕರಾಗಿ ಸೇವೆ ಸಲ್ಲಿಸಿದರು.

ಭಾರತದ ಪ್ರಮುಖ ರಂಗ ಚಳುವಳಿಗಳಲ್ಲಿ ಒಂದಾದ “ಇಪ್ಟಾ” ಪ್ರಮುಖರಲ್ಲಿ ಎಂ ಎಸ್‌ ಸತ್ಯು ಒಬ್ಬರು. ಅವರ ಪ್ರತಿಯೊಂದು ಚಿತ್ರವೂ ಒಂದಲ್ಲ ಒಂದು ರಾಜ್ಯ ಅಥವಾ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿವೆ.

‘ಏಕ್ ಥಾ ಚೋಟು ಏಕ್ ಥಾ ಮೋಟು’, ‘ಗರ೦ ಹವಾ’, ‘ಚಿತೆಗೂ ಚಿಂತೆ’, ‘ಕನ್ನೇಶ್ವರರಾಮ’, ‘ಬರ’, ‘ಸೂಖಾ’, ‘ಘಳಿಗೆ’, ‘ಕೊಟ್ಟ’ ಹಾಗೂ ‘ಇಜ್ಜೋಡು’ ಸತ್ಯು ಅವರು ನಿರ್ದೇಶಿಸಿದ ಪ್ರಮುಖ ಚಿತ್ರಗಳು. ಸತ್ಯು ಅವರ ನಿರ್ದೇಶನದ ಚಿತ್ರ ‘ಗರ೦ ಹವಾ’ ಮಾರ್ಕ್ಸಿಸ್ಟ್ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಧರಿಸಿದ್ದಾದ್ದಾಗಿತ್ತು. ‘ಗರ೦ ಹವಾ’ ಎಂದರೆ ಸತ್ಯು, ಸತ್ಯು ಎಂದರೆ ‘ಗರಂ ಹವಾ’ ಎನ್ನುವಷ್ಟರ ಮಟ್ಟಿಗೆ ಹೊಸ ಅಲೆಯ ಚಿತ್ರ ಅದಾಗಿತ್ತು. ಭಾರತೀಯ ಚಿತ್ರರಂಗಕ್ಕೂ ಸತ್ಯು ಅವರ ಪ್ರತಿಭೆಯನ್ನು ದರ್ಶನ ಮಾಡಿಸಿತೆಂದರೂ ಅತಿಶಯವಲ್ಲ. ಅಲ್ಲದೆ, ಗರಂ ಹವಾ ಕಾನ್‌ ಚಿತ್ರೋತ್ಸವದ ಮುಖ್ಯ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡು, ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಖ್ಯಾತಿ ಈ ಚಿತ್ರಕ್ಕಿದೆ.

ತಾವು ನಂಬಿದ ತತ್ವ ಸಿದ್ಧಾಂತಗಳೊಂದಿಗೆ ಎಂದೂ ರಾಜಿ ಮಾಡಿಕೊಳ್ಳದ ಎಂ ಎಸ್ ಸತ್ಯು ಅವರು ಚಲನಚಿತ್ರ ಮತ್ತು ರಂಗಭೂಮಿಯಲ್ಲಿ ಸಲ್ಲಿಸುತ್ತಿರುವ ಸೇವೆ ಅತ್ಯಂತ ಮಹತ್ವಪೂರ್ಣವಾದದ್ದು.

ಸತ್ಯು ಸಂಭ್ರಮ

weಭಿನ್ನ ಅರ್ಪಿಸುವ ʻಸತ್ಯು ಸಂಭ್ರಮʼ ಒಂದು ವಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರಾದ ಸತೀಶ್‌ ಯಾದವ್‌, ಸುಷ್ಮಾ ನಾಣಯ್ಯ ತಿಳಿಸಿದ್ದಾರೆ.

4ನೇ ಜುಲೈ 2022, ಸೋಮವಾರ ಸಂಜೆ 6.30ಕ್ಕೆ ಸಮುದಾಯ ಬೆಂಗಳೂರು ಅರ್ಪಿಸುವ ಜಯರಾಮ್‌ ರಾಯಪುರ ಅವರ ʻವಾರಸುದಾರʼ ನಾಟಕ ಪ್ರದರ್ಶನ. ನಿರ್ದೇಶನ: ಎಂ ಎಸ್‌ ಸತ್ಯು, ಸಹ ನಿರ್ದೇಶನ: (ದಿ) ಎಂ ಸಿ ಆನಂದ್, ಸಂಗೀತ: ಸಮೀರ್‌ ಕುಲ್ಕರ್ಣಿ, ವಸ್ತ್ರಾಲಂಕಾರ ಜಯಂತಿ ಮರುಳಸಿದ್ದಪ್ಪ, ನೃತ್ಯ ಸಂಯೋಜನೆ: ನಂದಿನಿ ಕೆ. ಮೆಹತಾ.

5ನೇ ಜುಲೈ 2022, ಮಂಗಳರವಾದ ಸಂಜೆ 6.30ಕ್ಕೆ ಎಡಿಎ ಅರ್ಪಿಸುವ, ಸುಧೀರ್‌ ಅತ್ತಾವರ್‌ ಅವರ ʻಗುಲ್‌ ಎ ಬಕಾವಲಿʼ ನಾಟಕ ಪ್ರದರ್ಶನ. ನಿರ್ದೇಶನ: ಎಂ ಎಸ್. ಸತ್ಯು, ಸಹ ನಿರ್ದೇಶನ: (ದಿ) ಎಂ ಸಿ ಆನಂದರ್‌, ಸುಷ್ಮಾ ನಾಣಯ್ಯ, ಸಂಗೀತ: ಸಮೀರ್‌ ಕುಲ್ಕರ್ಣಿ, ವಸ್ತ್ರಾಲಂಕಾರ ಜಯಂತಿ ಮರುಳಸಿದ್ದಪ್ಪ, ನೃತ್ಯ ಸಂಯೋಜನೆ: ನಂದಿನಿ ಕೆ. ಮೆಹತಾ. ಸಹ ನಿರ್ದೇಶನ : ಎಂ.ಸಿ. ಆನಂದ್‌, ಸುಷ್ಪಾ ನಾಣಯ್ಯ.

6ನೇ ಜುಲೈ 2022, ಬುಧವಾರ ಸಂಜೆ 6ಕ್ಕೆ ʻಚಿತೆಗೂ ಚಿಂತೆʼ ಚಲನಚಿತ್ರ ಪ್ರದರ್ಶನ. ಚಿತ್ರಕಥೆ : ಜಾವೇದ್‌ ಸಿದ್ದೀಕಿ, ನಿರ್ದೇಶನ: ಎಂ ಎಸ್‌ ಸತ್ಯು, ನಿರ್ಮಾಣ: ಜಿ ಎನ್‌ ಲಕ್ಷ್ಮೀಪತಿ, ಸಂಗೀತ: ಜಿ ಕೆ ವೆಂಕಟೇಶ್‌, ಸಂಭಾಷಣೆ : ಎಸ್‌. ರಾಮಸ್ವಾಮಿ. ಕಾರ್ಯಕ್ರಮದಲ್ಲಿ ಉಪಸ್ಥಿತಿ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.

7ನೇ ಜುಲೈ 2022, ಗುರುವಾರ ಸಂಜೆ 6ಕ್ಕೆ ಯು.ಆರ್‌. ಅನಂತಮೂರ್ತಿ ಕಥೆ ಆಧಾರಿತ ʻಬರʼ ಚಲನಚಿತ್ರ ಪ್ರದರ್ಶನ. ಚಿತ್ರಕತೆ: ಜಾವೇದ್‌ ಸಿದ್ದೀಕಿ ಮತ್ತು ಶಮಾ ಜೈದಿ, ನಿರ್ಮಾಣ ಮತ್ತು ನಿರ್ದೇಶನ:  ಎಂ ಎಸ್‌ ಸತ್ಯು, ಸಂಗೀತ: ಮೈಸೂರು ಅನಂತಸ್ವಾಮಿ, ಸಂಭಾಷಣೆ: ಎಸ್‌. ರಾಮಸ್ವಾಮಿ.

8ನೇ ಜುಲೈ 2022, ಶುಕ್ರವಾರ ಸಂಜೆ 4 ರಿಂದ 6ರವರೆಗೆ ರಂಗ ವಿದ್ಯಾರ್ಥಿಗಳ ಜೊತೆ ಕೆ ಎಂ ಚೈತನ್ಯ ಅವರ ಸತ್ಯು ಮತ್ತು ರಂಗ ಚಳುವಳಿ ಕುರಿತ ಸಂವಾದ – ಸಂಜೆ 6ಕ್ಕೆ ಸತ್ಯು ಮತ್ತು ನಾವು – ಹಿರಿಯ ರಂಗಕರ್ಮಿಗಳಿಂದ ನೆನಪಿನ ಮಾತು

9ನೇ ಜುಲೈ 2022, ಶನಿವಾರ ಮಧ್ಯಾಹ್ನ 3ಕ್ಕೆ ಸತ್ಯು ಅವರ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ – ನಿರ್ದೇಶನ: ಮಸೂದ್‌ ಅಖ್ತರ್‌, ಸಂಜೆ 4ಕ್ಕೆ ಸತ್ಯು ಅವರ ರಂಗ ವಿನ್ಯಾಸ, ರಂಗ ಚಿತ್ರ ಪ್ರದರ್ಶನ – ಶೀರ್ಷಿಕೆಗಳೊಂದಿಗೆ, ಸಂಜೆ 5 ರಿಂದ 7 ನಾನು ಮತ್ತು ಸತ್ಯು ಅವರ ಜೊತೆ ಒಡನಾಟ ಇರುವ ಯುವ ರಂಗಕರ್ಮಿಗಳ ಅನುಭವದ ಮಾತು.

10ನೇ ಜುಲೈ 2022, ಭಾನುವಾರ ಬೆಳಿಗ್ಗೆ 10 ರಿಂದ 12.30ರವರೆಗೆ, ಎಂ ಎಸ್. ಸತ್ಯು ಅವರಿಗೆ ಶುಭ ಹಾರೈಕೆ ಸಮಾರಂಭ. ಶುಭ ಹಾರೈಸುವವರು: ವಿಮಲ ರಂಗಾಚಾರ್‌, ಕೆ. ಮರಳುಸಿದ್ದಪ್ಪ, ಚಿರಂಜೀವಿ ಸಿಂಗ್‌, ಅರುಂಧತಿ ನಾಗ್‌, ಪ್ರಸನ್ನ, ದತ್ತಣ್ಣ, ಸುಂದರ್‌ ರಾಜ್, ಕಾರ್ಯಕ್ರಮ ನಿರ್ವಹಣೆ: ಶ್ರೀನಿವಾಸ್‌ ಜಿ. ಕಪ್ಪಣ್ಣ.

Donate Janashakthi Media

Leave a Reply

Your email address will not be published. Required fields are marked *