ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಗುತ್ತಿರೋ ಬದಲಾವಣೆಗಳು, ಬೆಳಗಾವಿಗೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗಿನ ಮುನಿಸು, ಶಾಸಕರೊಂದಿಗಿನ ಪ್ರವಾಸದ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಮೌನ ಮುರಿದಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಮಾರ್ಮಿಕವಾಗಿ ಡಿಸಿಎಂ ಮತ್ತು ಹೆಬ್ಬಾಳ್ಕರ್ ಗೆ ಎಚ್ಚರಿಕೆ ಸಂದೇಶವನ್ನು ರವಾನಿಸುವ ಪ್ರಯತ್ನ ಮಾಡಿದರು. ನಾನು ಪಕ್ಷಕ್ಕೆ ಕಾಂಪ್ರಮೈಸ್ ಆಗಿದ್ದೇನೆ. ಹಾಗಂತ ವೀಕ್ ಅಲ್ಲ. ನಾನು ಅನೇಕ ಬಾರಿ ಕಾಂಪ್ರಮೈಸ್ ಆಗಿದ್ದೇನೆ, ಮುಂದೆಯೂ ಆಗುತ್ತೇನೆ. ನನ್ನ ಸೈಲೆಂಟ್ ನನಗೆ ಸಕ್ಸಸ್ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಯಾವುದೇ ಕಿರಿಕಿರಿಯಿಲ್ಲ, ಅವರನ್ನು ಮೀರಿ ಬೆಳೆದಿದ್ದೇವೆ. ಎಲ್ಲರನ್ನೂ ನಾವು ಸಂಭಾಳಿಸಿಕೊಂಡುಹೋಗಬೇಕು. ನಾನು ಆರು ಬಾರಿ ಮತ್ತು ಹೆಬ್ಬಾಳ್ಕರ್ ಎರಡು ಬಾರಿ ಶಾಸಕರಾಗಿದ್ದಾರೆ. ಕೆಲವರು ಒಂದೇ ಬಾರಿ ಶಾಸಕರಾಗಿ ಸಚಿವರಾಗಿದ್ದಾರೆ. ಎಲ್ಲರ ಜೊತೆಗೆ ಹೊಂದಿಕೊಂಡು ಕೆಲಸ ಮಾಡಬೇಕು ಎಂದರು.
ಇದನ್ನೂ ಓದಿ:20ಕ್ಕೂ ಅಧಿಕ ಶಾಸಕರೊಂದಿಗೆ ಮೈಸೂರಿಗೆ| ಸಚಿವ ಸತೀಶ್ ಜಾರಕಿಹೊಳಿ ನಡೆಗೆ ಹೈಕಮಾಂಡ್ ತಡೆ
ಸೈಲೆಂಟ್ ನನ್ನ ರಾಜಕೀಯದ ಸಕ್ಸಸ್:
ಲಕ್ಷ್ಮಣ್ ಸವದಿ ಕೂಡ ಕಾಂಗ್ರೆಸ್ಸಿಗೆ ಬರುವಾಗ ನನ್ನ ಜೊತೆ ಮಾತನಾಡಿದ್ರು. ಕಿರಿಕಿರಿ ಮಾಡೋದಾದ್ರೆ ನಾನು ಬರಲ್ಲ ಅಂದಿದ್ರು. ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ನನ್ನ ಸೈಲೆಂಟ್ ನನಗೆ 30 ವರ್ಷದ ರಾಜಕೀಯದಲ್ಲಿ ಯಶಸ್ಸು ನೀಡಿದೆ. ಲಕ್ಷ್ಮಣ ಸವದಿ ಎಲ್ಲೂ ಕಾರ್ಯಧ್ಯಕ್ಷ ಸ್ಥಾನ ಕೇಳಿಲ್ಲ. ಮಾಡೋದಾದ್ರೆ ನಮ್ಮ ಅಭ್ಯಂತರ ಏನು ಇಲ್ಲ. ಸವದಿ, ಅಂಜಲಿ ನಿಂಬಾಳ್ಕರ್ ಯಾರೇ ಕಾರ್ಯಾಧ್ಯಕ್ಷರು ಆದ್ರೂ ನಮ್ಮ ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕರ ಜೊತೆಗಿನ ಪ್ರವಾಸದ ಯೋಜನೆ ಮುಂದೆಯೂ ಇರುತ್ತದೆ. ನಮ್ಮ ಪ್ರವಾಸಕ್ಕೆ ಯಾವುದೇ ಅಡೆತಡೆ ಇಲ್ಲ. ಕೆಲಸದ ಜೊತೆಯಲ್ಲಿ ಒಟ್ಟಿಗೆ ಪ್ರವಾಸ ಕೂಡ ಮಾಡಬೇಕು. ಮುಂದೆ ಪ್ರವಾಸದ ಬಗ್ಗೆ ಪ್ಲಾನ್ ಮಾಡುತ್ತೇವೆ ಎಂದು ಹೇಳುವ ಮೂಲಕ ರೆಬೆಲ್ ಆಗುವ ಸಂದೇಶದ ಸುಳಿವು ನೀಡಿದರು.
ಜಿಲ್ಲಾಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರ ಬದಲಾವಣೆ ಶಿಫಾರಸು ಮಾಡಿದ್ದೇನೆ. ಸುಮಾರು ಹೆಸರು ಕೇಳಿ ಬಂದಿದ್ದು, ಡಿಕೆ ಶಿವಕುಮಾರ್ ಮನೆಗೆ ತೆರಳಿ ಈ ಬಗ್ಗೆ ಚರ್ಚಿಸಲಾಗುವುದು. ನಮ್ಮ ನಡುವೆ ಅಸಮಾಧಾನ ಅಂತೇನಿಲ್ಲ. ನಮ್ಮ ಸಮಸ್ಯೆಗಳನ್ನು ಹೇಳಿದ್ದೇನೆ.
ಇದನ್ನೂ ಓದಿ:ಬಿಜೆಪಿಯ ಆರೋಪ ರಾಜಕೀಯ ಪ್ರೇರಿತ ಹಾಗೂ ಆಧಾರರಹಿತ| ಸಿಎಂ ಸಿದ್ದರಾಮಯ್ಯ
ಕಾಂಪ್ರಮೈಸ್ ಆಗಿದ್ದೇನೆ ಅಂತ ವೀಕ್ ಅಲ್ಲ:
ಇನ್ನು ಬುಧವಾರದ ಡಿಕೆ ಶಿವಕುಮಾರ್ ಸಭೆಗೆ ಗೈರಾಗಿರೋದರ ಕುರಿತು ಪ್ರತಿಕ್ರಿಯಿಸಿದ ಸಚಿವರು, ನಾನು ಪಕ್ಷಕ್ಕೆ ಕಾಂಪ್ರಮೈಸ್ ಆಗಿದ್ದೇನೆ ಅಂತ ವೀಕ್ ಅಲ್ಲ. ಸಭೆಗೆ ಬರಲು ಆಗಲ್ಲ ಎಂದು ಒಂದು ದಿನ ಮುಂಚೆಗೆ ಡಿಸಿಎಂ ಗಮನಕ್ಕೆ ತರಲಾಗಿತ್ತು ಎಂದರು.
ಡಿಸಿಎಂ ಹಸ್ತಕ್ಷೇಪಕ್ಕೆ ಬೇಸರ:
ಬೆಳಗಾವಿ ಜಿಲ್ಲೆಯಲ್ಲಿ ಡಿಸಿಎಂ ಹಸ್ತಕ್ಷೇಪ ವಿಚಾರಕ್ಕೆ ಮಾತನಾಡಿ, ಈ ಹಿಂದೆ ಸಾಕಷ್ಟು ಬಾರಿ ಆಗಿದೆ. ವರ್ಗಾವಣೆ ಸೇರಿದಂತೆ ನಾಲ್ಕು ತಿಂಗಳಲ್ಲಿ ಸಾಕಷ್ಟು ಬಾರಿ ಹಸ್ತಕ್ಷೇಪ ಆಗಿದ್ದು, ಪಕ್ಷಕ್ಕಾಗಿ ಅನುಸರಿಸಿಕೊಂಡು ಹೋಗುತ್ತಿದ್ದೇನೆ. ವರ್ಗಾವಣೆಗೆ ಕೆಲವು ಶಿಫಾರಸ್ಸು ಮಾಡಿದ್ದು, ಅಂತಿಮ ನಿರ್ಧಾರ ಅವರದ್ದೇ ಆಗಿರಲಿದೆ.
ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಕೇವಲ ಶಾಸಕರಿಗೆ ನೀಡದೇ ಕಾರ್ಯಕರ್ತರಿಗೆ ನೀಡಬೇಕು ಎಂದು ಹೇಳಿದ್ದೇನೆ. ಮಾಡೋದು ಬಿಡೋದು ಪಕ್ಷಕ್ಕೆ ಬಿಟ್ಟಿದ್ದು ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ಜೊತೆಗಿನ ಅಸಮಾಧಾನವನ್ನು ಒಪ್ಪಿಕೊಂಡರು.
ವಿಡಿಯೋ ನೋಡಿ:ಜೆಡಿಎಸ್ ರಾಜ್ಯ ಘಟಕ ವಿಸರ್ಜನೆ : ಸಿ.ಎಂ. ಇಬ್ರಾಹಿಂ ಔಟ್, ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಪಟ್ಟ