ಸಂಸದ ಪ್ರತಾಪಸಿಂಹ ಅವಿವೇಕಿ – ರೈತರ ಆಕ್ರೋಶ

ಮೈಸೂರು : ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು, ಸಂಸದ ಪ್ರತಾಪ್ ಸಿಂಹ ಅವರನ್ನು ‘ಅವಿವೇಕಿ ಸಂಸದ’ ಎಂದು ಕೂಗಿ ರೈತರು ಪ್ರತಿಭಟಿಸಿದ ಘಟನೆ ನಡೆಯಿತು.

ನಗರದ ಜಿ.ಪಂ.ಸಭಾಂಗಣದಲ್ಲಿ ಸೋಮವಾರ ಕಬಿನಿ ನೀರಾವರಿ ಸಲಹಾ ಸಮಿತಿ ಸಭೆಗೆ ಆಗಮಿಸಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಸುತ್ತುವರಿದ ರೈತರು, ಕಬಿನಿ ನೀರಾವರಿ ಸಲಹಾ ಸಮಿತಿ ಸಭೆಗೆ ರೈತ ಮುಖಂಡರನ್ನು ಆಹ್ವಾನಿಸದಿರುವ ಬಗ್ಗೆ ಪ್ರಶ್ನಿಸಿದರು. ಅವಿವೇಕಿಗಳನ್ನು ಗೆಲ್ಲಿಸಿಕೊಂಡು ಸಭೆ ಮಾಡಿದರೆ ಯಾವ ಪ್ರಯೋಜನವೂ ಇಲ್ಲ. ಇಂತಹ ಸಭೆಗಳಿಗೆ ರೈತರನ್ನು ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.

ರೈತರನ್ನು ಸಮಾಧಾನಪಡಿಸಿ ಉಸ್ತುವಾರಿ ಸಚಿವ ಸೋಮಶೇಖರ್ ನಾನು ಸ್ವತಃ ನೀರು ಹರಿಸಲು ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳುತ್ತಿರುವಾಗಲೇ, ಸಚಿವರ ಪಕ್ಕದಲ್ಲೇ ಇದ್ದ ಸಂಸದ ಪ್ರತಾಪ್ ಸಿಂಹ ಅವಿವೇಕಿ ಎಂದಾಕ್ಷಣ ಮಧ್ಯಪ್ರವೇಶಿಸಿ ಜನಪ್ರತಿನಿಧಿಗಳನ್ನು ಅವಿವೇಕಿ ಎನ್ನಬೇಡಿ ಎಂದರು.

ಇದರಿಂದ ಆಕ್ರೋಶಗೊಂಡ ರೈತರು, “ಅನರ್ಹ ಸಂಸದ, ಅವಿವೇಕಿ, ನಾಲಾಯಾಕ್ ಹಾಗೂ ರೈತ ವಿರೋಧಿ ಸಂಸದ ಎಂದು ಪ್ರತಾಪ್‌ ಸಿಂಹ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಪ್ರಧಾನಿ ಬಳಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಯೋಗ್ಯತೆ ಇಲ್ಲ, ಪರಿಜ್ಞಾನ ಬೇಡವಾ ಇವನಿಗೆ,” ಎಂದು ಕಿಡಿಕಾರಿದರು. ರೈತರನ್ನು ಪೊಲೀಸರು ಸಮಾಧಾನಪಡಿಸಿ ಕಳುಹಿಸಿದರು.

Donate Janashakthi Media

Leave a Reply

Your email address will not be published. Required fields are marked *