ಬೆಂಗಳೂರು: ಸರ್ಕಾರ ಜಾತಿಗಣತಿ ಜಾರಿ ಮಾಡಲೇಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಮೀಸಲಾತಿಯ ಒಳಮುಖ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು,ಮೀಸಲಾತಿಯನ್ನು ಉಳಿಸುವುದು, ಜಾತಿ ಹಾಗೂ ಜನಗಣತಿಯನ್ನು ನಡೆಸುವುದು ನಮ್ಮ ಪಕ್ಷದ ಆದ್ಯ ಕರ್ತವ್ಯ.ಅಧಿಕಾರಕ್ಕಾಗಿ ಮೀಸಲಾತಿ ವಿಷಯದಲ್ಲಿ ರಾಜಿಯಾಗಲು ಎಂದೂ ಸಾಧ್ಯವಿಲ್ಲ ಎಂದು ಹೇಳಿದರು.
ಚುಣಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಜಾತಿ ಗಣತಿ ಜಾರಿ ವಿಚಾರ ಇರುವುದರಿಂದ ಕೂಡಲೇ ಜಾರಿ ಮಾಡಬೇಕು. ಜಾತಿ ಗಣತಿ ಜಾರಿ ಮಾಡಿದರೆ ಸರ್ಕಾರ ಬಿದ್ದು ಹೋಗಲಿದೆ ಎಂಬ ಭಯ ಏಕೆ, ಯಾವುದಕ್ಕೂ ಅಂಜದೆ ಜಾತಿ ಗಣತಿ ಜಾರಿಯಾಗಲೇಬೇಕು ಎಂದು ಹೇಳಿದ್ದಾರೆ.
ಜಾತಿ ಗಣತಿ ಜಾರಿಗೆ ಸರ್ಕಾರ ಯಾಕೆ ಯೋಚನೆ ಮಾಡುತ್ತಿದೆಯೊ ಗೊತ್ತಿಲ್ಲ, ಜಾತಿಗಣತಿಯಿಂದ ಎಲ್ಲಾ ಸಮುದಾಯಗಳಿಗೂ ಅನುಕೂಲ ಆಗಲಿದೆ ಎಂದು ತಿಳಿಸಿದರು.
ಇದನ್ನೂ ನೋಡಿ: ವಚನಾನುಭವ -15 ಕಾಗೆ ಒಂದಗುಳ ಕಂಡಡೆ | ಬಸವಣ್ಣ ವಚನ