ಸಾರಿಗೆ ಮುಷ್ಕರ  ಪರಿಹಾರಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಒತ್ತಾಯ

ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ನಿಗಮಗಳು ಮತ್ತು ಬೆಂಗಳೂರು ಮಹಾನಗರ ಸಾರಿಗೆ ನಿಗಮ ನೌಕರರು ಕಳೆದ ಏಪ್ರಿಲ್ 7 ರಿಂದ ತಮ್ಮ ಬೇಡಿಕೆಗಳಿಗಾಗಿ  ಮುಷ್ಕರವನ್ನು ನಡೆಸುತ್ತಿದ್ದು. ಅವರ ಬೇಡಿಕೆಯನ್ನು ಸರ್ಕಾರ ತಕ್ಷಣ ಈಡೇರಿಸಲು ಮುಂದಾಗಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಒತ್ತಾಯಿಸಿದೆ.

ಈ ಹಿಂದೆಯೆ ಸಾರಿಗೆ ನೌಕರರ ಸಂಘಟನೆಗಳು ಹಲವಾರು ಬಾರಿ ಮನವಿ ಸಲ್ಲಿಸಿ, ಕರ್ತವ್ಯ ನಿರ್ವಹಿಸುತ್ತಲೇ  ಶಾಂತಿಯುತವಾಗಿ ಧರಣಿ, ಪ್ರತಿಭಟನೆಗಳನ್ನು ನಡೆಸಿದಾಗ ಕನಿಷ್ಟ ಸೌಜನ್ಯ ತೋರದೇ ಅವರ ಬೇಡಿಕೆಗಳಿಗೆ ನಿಗಮ ಮತ್ತು ಸರಕಾರಗಳು ಸ್ಪಂದಿಸಿಲ್ಲ. ಹಾಗಾಗಿ  ಈಗ ಅವರಸಹನೆಯ ಕಟ್ಟೆ ಒಡೆದಿದೆ.

ಈಗ ಸರಕಾರ ಸಂಯಮ ಮತ್ತು ಮಾನವೀಯ‌ ನಡೆ ತೋರಿಸುವ ಅಗತ್ಯವಿದೆ. ಇದು ಕೇವಲ ನೌಕರ ಸಮಸ್ಯೆಗಳು ಮಾತ್ರ ಇಲ್ಲ. ದಿನ ನಿತ್ಯ  ಸಾರಿಗೆ ಮೇಲೆ ಆವಲಂಬಿಸಿರುವ ಲಕ್ಷಾಂತರ ಜನರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ಉದ್ಯೋಗ ಮತ್ತಿತರ ಕೆಲಸ ಮತ್ತು ಶಾಲಾ ಕಾಲೇಜು ಹಾಗೂ  ಆಸ್ಪತ್ರೆಗಳಿಗೆ ಹೋಗುವವರ ಮೇಲೆ ಈ ಮುಷ್ಕರದ ಪರಿಣಾಮ ಬೀರಿದೆ. ಇನ್ನೊಂದು ಕಡೆ  ನೌಕರರ ಕುಟುಂಬಗಳು ಕಡಿಮೆ ಸಂಬಳದಲ್ಲಿ ಕುಟುಂಬ ನಿರ್ವಹಣೆ ಮಾಡಲಾಗದೆ ಅವರ ಪತ್ನಿಯರು ಈ ಹೋರಾಟವನ್ನು ಬೆಂಬಲಿಸಿದ ಕೂಡಲೇ ಕ್ವಾಟರ್ಸ್ ಖಾಲಿ ಮಾಡಲು ಮತ್ತು ಎಸಾಂ ಜಾರಿ ಮಾಡುವ ಕುರಿತು ಬೆದರಿಸಲು ಮುಂದಾಗಿದೆ. ಇದನ್ನು ಗಮನಿಸಿದಾಗ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಎದ್ದು ಕಾಣುತ್ತದೆ. ಇವತ್ತು ಮುಷ್ಕರದಿಂದ ಇಲಾಖೆಗೆ ನಿಗಮ ಮಂಡಳಿಗಳಿಗೆ ಲಾಸ್ ಆಗಿದೆಯೆಂದು ಹೇಳುವ ಸರ್ಕಾರಕ್ಕೆ  ಇದೇ ಕಾರ್ಮಿಕರು ಲಾಭ ತಂದು ಕೊಟ್ಟಿದ್ದನ್ನು ಸರ್ಕಾರ ಮರೆಯುವಂತಿಲ್ಲ.

ಕಾರ್ಮಿಕರ ಬೇಡಿಕೆ ಇತ್ಯರ್ಥಕ್ಕೆ ಮುಂದಾಗದೆ ಹೋರಾಟ ಮತ್ತು ಒಗಟ್ಟು ಮುರಿಯಲು ಖಾಸಗಿ ವಾಹನಗಳ ಮಾಲೀಕರ ಜೊತೆ ಮಾತುಕತೆಗೆ ಮುಂದಾಗಿರುವ ಸರ್ಕಾರದ ಈ ನಡೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಹಾಗೂ  ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ನೇರೆ ಹೊಣೆಯನ್ನು ಹೊರಬೇಕಾಗುತ್ತದೆ.  ಹಾಗಾಗಿ ಕೂಡಲೇ ಸರ್ಕಾರ ಹಟಮಾರಿ ದೋರಣೆ ಬಿಟ್ಟು ನೌಕರರ ಬೇಡಿಕೆಯನ್ನು ಬಗೆ ಹರಿಸಬೇಕು. ಕ್ವಾಟ್ರಸ್ ಖಾಲಿಮಾಡುವುದಾಗಲಿ, ಎಸ್ಮಾ ಜಾರಿ ಮಾಡುವ ಕ್ರಮವನ್ನು ಕೈಬೀಡಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷರಾದ ದೇವಿ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *