ಅಪಘಾತ ಪರಿಹಾರ ವಿಳಂಬ: ಸಾರಿಗೆ ಇಲಾಖೆಯ ಎರಡು ಬಸ್ಸು ಜಪ್ತಿ ಮಾಡಿದ ನ್ಯಾಯಾಲಯ?

ದಾವಣಗೆರೆ: ಕಳೆದ 5 ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಕಾರಿಗೆ ಬಸ್‌ ಡಿಕ್ಕಿ ಹೊಡೆದು ಇಬ್ಬರು ಮೃತ ಪಟ್ಟಿದ್ದರು. ಅಪಘಾತವಾಗಿ ಇಷ್ಟು ವರ್ಷ ಕಳೆದರೂ ಸಹ ಸಾರಿಗೆ ಇಲಾಖೆ ಮೃತರ ಕುಟುಂಬದವರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಆದೇಶದ ಮೇರೆ ನ್ಯಾಯಾಲಯದ ಸಿಬ್ಬಂದಿಗಳು 2 ಬಸ್ಸುಗಳನ್ನು ಜಪ್ತಿ ಮಾಡಿದ್ದಾರೆ.

2019ರ ಮೇ 6ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಬಳಿ ಕಾರಿಗೆ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದರು. ಕುಟುಂಬಸ್ಥರಿಗೆ 1.32 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು.

ಅಂದು ನಡೆದ ಅಪಘಾತದಲ್ಲಿ ದಾವಣಗೆರೆ ಎವಿಕೆ ಕಾಲೇಜು ಪ್ರಾಧ್ಯಾಪಕ ನಂಜುಂಡಸ್ವಾಮಿ ಸೇರಿ ಇಬ್ಬರು ಸಾವನ್ನಪ್ಪಿದ್ದರು. ಈ ವೇಳೆ ಓರ್ವನಿಗೆ ಗಂಭೀರ ಗಾಯಗಳಾಗಿತ್ತು. ನ್ಯಾಯಾಲಯದ ಸೂಚನೆ ನಂತರವೂ ಸಾರಿಗೆ ಇಲಾಖೆ ಪರಿಹಾರ ನೀಡದಿರುವುದಕ್ಕೆ ಮೃತ ಪ್ರಾಧ್ಯಾಪಕನ ಪತ್ನಿ ಪುತ್ರನೊಂದಿಗೆ ಸುಮಾ ಕೋರ್ಟ್​ಗೆ ಅಲೆದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್​ ಸಿಬ್ಬಂದಿ ದಾವಣಗೆರೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಎರಡು ಬಸ್ಸ್ಸುಗಳನ್ನು ಜಪ್ತಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *