ಕೆ.ಎಸ್.ಆರ್.ಟಿ.ಸಿ ಬಸ್ ಕದ್ದ ಕಳ್ಳರು?

ತುಮಕೂರು: ಬಸ್ಸಿನಲ್ಲಿದ್ದ ಜನರ ಪರ್ಸ್, ಹಣ, ಮೊಬೈಲ್ ಕದ್ದ ಘಟನೆಗಳನ್ನು ನೀವು ನೋಡಿದ್ದೀರಿ, ಕೇಳಿದ್ದೀರಿ, ಆದರೆ ಕಳ್ಳರು  ಬಸ್ ನ್ನೆ ಕದ್ದರು ಎಂದರೆ ನಂಬುತ್ತೀರಾ? ಅದು ಸರಕಾರಿ ಬಸ್ ನ್ನು!

ಹೌದು ನಂಬಲೇಬೇಕು,  ಸಾರಿಗೆ ಬಸ್​ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್​ ಅನ್ನು ಕದ್ದೊಯ್ದ ಕಳ್ಳರು, ಹಲವೆಡೆ ಸುತ್ತಾಡಿ ಮತ್ತೆ ಪಕ್ಕದ ಗ್ರಾಮದ ಬಳಿ ಬಿಟ್ಟು ಹೋಗಿದ್ದಾರೆ.

ಇಂತಹ ವಿಚಿತ್ರ ಘಟನೆ ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ.

ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್‌ಆರ್​ಟಿಸಿ ಬಸ್ ಅನ್ನು ಸೋಮವಾರ ಕಳ್ಳರು ಕದ್ದೊಯ್ದಿದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕುಣಿಗಲ್ ತಾಲೂಕಿನ ಅಮೃತೂರು, ಯಡಿಯೂರು ಸುತ್ತಮುತ್ತಲ ಗ್ರಾಮಗಳ ಸಮೀಪ ಈ ಬಸ್​ ಅನ್ನು ಓಡಾಡಿಸಿದ ಕಳ್ಳರು ಮತ್ತೆ ಗುಬ್ಬಿ ತಾಲೂಕಿನ ಜನ್ನೇನಹಳ್ಳಿ ಗ್ರಾಮದತ್ತ ಬಂದಿದ್ದಾರೆ.

ಡೀಸೆಲ್​ ಖಾಲಿಯಾದ ಕಾರಣ ಆ ಬಸ್​ ಅನ್ನು ಜನ್ನೇನಹಳ್ಳಿ ಗ್ರಾಮದ ಬಳಿಯೇ ಬಿಟ್ಟು ಪರಾರಿಯಾಗಿದ್ದಾರೆ. ಗುಬ್ಬಿ ಪಟ್ಟಣದ ಬಸ್​ ನಿಲ್ದಾಣದಲ್ಲಿ ಸಿಸಿಟಿವಿ ಇಲ್ಲದಿರುವುದೇ ಕಳ್ಳರಿಗೆ ಪ್ಲಸ್​ ಪಾಯಿಂಟ್​ ಆಗಿದೆ ಎನ್ನಲಾಗಿದೆ.

ಬಸ್ಸೇ ನಾಪತ್ತೆಯಾಗುವ ಮಟ್ಟಕ್ಕೆ ಅಧಿಕಾರಿಗಳು, ಚಾಲಕ ಮತ್ತು ನಿರ್ವಾಹಕ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಗುಬ್ಬಿ  ಬಸ್‌ ನಿಲ್ದಾಣದಲ್ಲಿ ಕಳ್ಳತನ ಹಾಗೂ ಇನ್ನಿತರ ಅಪರಾಧ ಕೃತ್ಯಗಳು ನಡೆಯುತ್ತಿದ್ದರೂ ಸಿಸಿಕ್ಯಾಮೆರಾ  ಅಳವಡಿಸುವಲ್ಲಿ ಬೇಜವಾಬ್ದಾರಿತನ ತೋರಿದ ಅ​ಧಿಕಾರಿಗಳ ಬಗ್ಗೆ ಖಂಡನೆ ವ್ಯಕ್ತವಾಗಿದೆ.

ಇನ್ನೂ ಬಸ್ ನ್ನು ಕದಿಯಲೇಬೇಕು ಎಂಬ ಕಾರಣಕ್ಕೆ ಕದ್ದರಾ? ಅಥವಾ ಸಾರಿಗೆ ಬಸ್ ಓಡಿಸುವ ಮೋಜಿಗಾಗಿ ಯಾರೋ ಈ ರೀತಿ ನಡೆಸಿದರಾ? ಇಲ್ಲವೆ ಗಾಡಿ ಓಡಿಸಿದವನು ಮಾನಸಿಕನಾ ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *