ಧಾರವಾಡ: ಪ್ರಸ್ತುತ 2023-2024 ರ ರಾಜ್ಯ ಬಜೆಟ್ ರಾಜ್ಯದ ಶಿಕ್ಷಕರುಗಳಿಗೆ ನೌಕರರ ಸಮುದಾಯಕ್ಕೆ ಸಂಪೂರ್ಣ ನಿರಾಸೆ ಉಂಟುಮಾಡಿದೆ ಎಂದು ಅಖಿಲ ಭಾರತ ಶಿಕ್ಷಕರ ಪೆಡರೇಷನ್ (ನವದೆಹಲಿ) ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದ್ದಾರೆ.
ರಾಜ್ಯ ಬಜೆಟ್ ಕುರಿತು ಹೇಳಿಕೆ ನೀಡಿರುವ ಅವರು, ಈ ಸಲದ ಬಜೆಟ್ಟಿನಲ್ಲಿ ಶಿಕ್ಷಕರುಗಳಿಗೆ, ನೌಕರರರಿಗೆ ಉನ್ನತವಾದ ವೇತನ ಶ್ರೇಣಿಗಳನ್ನು ನಿಗದಿಗೊಳಿಸಿ ವೇತನ ಸೌಲಭ್ಯ ನೀಡಬೇಕೆಂಬ ನಿರೀಕ್ಷೆ ಇತ್ತು. ಇದು ಸಂಪೂರ್ಣವಾಗಿ ಹುಸಿಯಾಗಿದೆ, ಹಳೆ ಪಿಂಚಣಿ ಯೋಜನೆ ಜಾರಿ ಮಾಡದೇ ಇರುವುದು ಕಂಡುಬಂದಿದೆ ಎಂದು ಆರೋಪಿಸಿದರು.
ಶಿಕ್ಷಕರ ನೇಮಕಾತಿ, ಶಾಲೆಗಳ ಸಬಲೀಕರಣದ ಬಗ್ಗೆ ಪ್ರಸ್ತಾಪ ಮಾಡದೆ ಇರುವುದು, ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸದೇ ಇರುವುದು, ಅಪೌಷ್ಟಿಕತೆಯ ಬಗ್ಗೆ ನಿರ್ಣಯ ಕೈಗೊಳ್ಳದೆ ಇರುವುದು, ಸಂಪೂರ್ಣ ನಿರಾಸೆಯ ಜೊತೆಗೆ ಶಿಕ್ಷಕರ, ನೌಕರರ ವರ್ಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
7ನೇ ವೇತನ ಆಯೋಗ ರಚನೆ ಮಾಡಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಆಗಿದೆ. ಈ ಬಜೆಟ್ ಶಿಕ್ಷಕರ ನೌಕರರ ಹಿತ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಬಸವರಾಜ್ ಗುರಿಕಾರ ಹೇಳಿದ್ದಾರೆ.
ಸರಕಾರ ಈಗ ಎಚ್ಚೆತ್ತುಕೊಳ್ಳಬೇಕು ಮುಖ್ಯಮಂತ್ರಿಗಳು ಉತ್ತರ ನೀಡುವ ಸಂದರ್ಭದಲ್ಲಿ ಶಿಕ್ಷಕರ ನೌಕರರ ಈಗಿರುವ ವೇತನವನ್ನು ದ್ವಿಗುಣಗೊಳಿಸಿ ಉನ್ನತವಾದ ವೇತನ ಶ್ರೇಣಿಗಳನ್ನು ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ