ಸರಕಾರಿ ಕಾಲೇಜಿನಲ್ಲಿ ಪದವಿ ಪ್ರವೇಶಾತಿ ತಾರತಮ್ಯ ವಿರುದ್ಧ ಎಸ್‌ಎಫ್‌ಐ ಪ್ರತಿಭಟನೆ

ಗಂಗಾವತಿ: ಸರಕಾರಿ ಪದವಿ ಕಾಲೇಜಿಗೆ ಪ್ರವೇಶ ಬಯಸಿ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಪದವಿ ಪ್ರವೇಶಾತಿಯನ್ನು ಕಲ್ಪಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ಸಂಘಟನೆಯು ಸರಕಾರಿ ಪದವಿ ಮಹಾವಿದ್ಯಾಲಯದ ಮುಂಭಾಗ ಪ್ರತಿಭಟನೆ ನಡೆಸಿದರು.

ಎಸ್‌ಎಫ್‌ಐ ಹಾಗೂ ಹಲವು ವಿದ್ಯಾರ್ಥಿಗಳು ಭಾಗವಹಿಸಿದ ಪ್ರತಿಭಟನೆಯಲ್ಲಿ ಸರ್ಕಾರ ಪದವಿ ಕಾಲೇಜು ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಪ್ರಾರಂಭಿಸಿದೆ. ಆದರೆ, ಗಂಗಾವತಿಯ ಸರಕಾರಿ ಪದವಿ ಕಾಲೇಜಿನಲ್ಲಿ ತಾಲ್ಲೂಕಿನ ಹಾಗೂ ಜಿಲ್ಲೆಯ ವಿವಿಧ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಲೇಜಿನ ಇಂತಹ ನಡೆಯನ್ನು ಖಂಡಿಸಿರುವ ಎಸ್‌ಎಫ್‌ಐ ಸಂಘಟನೆಯು ಇದು ಸರ್ಕಾರಿ ಕಾಲೇಜು ಆಗಿದ್ದು, ಪ್ರವೇಶಾತಿ ಬಯಸಿ ಬರುವ ಎಲ್ಲ ವಿದ್ಯಾರ್ಥಿಗಳಿಗೆ ಪದವಿ ಪ್ರವೇಶ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನು ಓದಿ: ಖಾಸಗಿ ಶಾಲೆಗಳ ಹೆಚ್ಚುವರಿ ಶುಲ್ಕ ವಸೂಲಿ ವಿರುದ್ಧ ಎಸ್‌ಎಫ್‌ಐ ಪ್ರತಿಭಟನೆ

ಗಂಗಾವತಿ ಒಂದು ಎಲ್ಲಾ ಮೂಲಭೂತ ಸೌಲಭ್ಯ ಹೊಂದುತ್ತಿರುವ ತಾಲ್ಲೂಕಾಗಿದೆ. ಇಲ್ಲಿಗೆ ವಿವಿಧ ಪ್ರದೇಶಗಳಿಂದ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯಕ್ಕೆ ಅನುಕೂಲಕರವಾಗಿದೆ. ಶ್ರೀರಾಮನಗರ ಕನಕಗಿರಿ ತಾವರಗೇರಾದಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್ ಸೌಲಭ್ಯವಿಲ್ಲದೇ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅಲ್ಲಿನ ಕಾಲೇಜುಗಳಿಗೆ ಸಮಗ್ರ ಸೌಲಭ್ಯ ಸರ್ಕಾರ ನೀಡಬೇಕು ಮತ್ತು ಸರ್ಕಾರಿ ಪದವಿ ಕಾಲೇಜುಗಳಿಗೆ ಸರ್ಕಾರ ನಿಯಮದಂತೆ ಎಲ್ಲಾ ವಿದ್ಯಾರ್ಥಿಗಳನ್ನು ಪ್ರವೇಶಾತಿ ಪಡೆಯಬೇಕು ಎಂದು ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಿಗೆ ಸಲ್ಲಿಸಲಾಗಿರುವ ಮನವಿಯಲ್ಲಿ ತಿಳಿಸಲಾಗಿದೆ.

ಅಲ್ಲದೆ, ಸಿಡಿಸಿ ಜೊತೆ ಸಭೆ ಮಾಡಿ ಕಾಲೇಜಿಗೆ ಸಮಗ್ರ ಸೌಲಭ್ಯ ಒದಗಿಸಬೇಕು. ಮಾದರಿ ಕಾಲೇಜು ಮಾಡಬೇಕೆಂದು ಎಸ್‌ಎಫ್ಐ ಸಂಘಟನೆ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ಮೂಲಕ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ಗಂಗಾವತಿ ತಾಲ್ಲೂಕು ಅಧ್ಯಕ್ಷರಾದ ಗ್ಯಾನೇಶ ಕಡಗದ, ಕಾರ್ಯದರ್ಶಿ ಶಿವುಕುಮಾರ, ಸಹ ಕಾರ್ಯದರ್ಶಿ ಸೋಮನಾಥ, ಮುಖಂಡರಾದ ಬಾಳಪ್ಪ, ಶರೀಪ್, ಶಿವು, ಟಿಪ್ಪು, ದೇವರಾಜ, ಯಮುನಾ, ದುರ್ಗಾ, ಸವಿತಾ, ಬಸವರಾಜ, ಬೀಮೇಶ, ಹನುಮೇಶ ಮತ್ತಿತರರು ಇದ್ದರು.

Donate Janashakthi Media

Leave a Reply

Your email address will not be published. Required fields are marked *