ಸರ್ಕಾರದ ವಿರುದ್ಧ ಧ್ವನಿ ಎತ್ತಿದವರೆಲ್ಲರೂ ಜೈಲಿಗೆ: ಪಿಣರಾಯಿ ಎಚ್ಚರಿಕೆ

ತಿರುವನಂತಪುರಂ: ವಿವಿಧ ರಾಜ್ಯಗಳಲ್ಲಿ ಸ್ಥಾಪಿಸಲಾಗುತ್ತಿರುವ ಬಂಧನ ಕೇಂದ್ರಗಳು ಕೆಲವರನ್ನು ಮಾತ್ರ ಬಂಧಿಸಿಡಲು ನಿರ್ಮಿಸಲಾಗುತ್ತಿದೆ ಎಂಬ ತಪ್ಪು ಕಲ್ಪನೆ ಬೇಡ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದರು.

ಇದನ್ನು ಓದಿ : 14 ವರ್ಷಗಳ ನಂತರ ನಂದಿಗ್ರಾಮ ‘ಗೋಲೀಬಾರ್’ನ ಪಿತೂರಿ ಬಯಲು?

‘ಸಿಎಎ-ಎನ್‌ಆರ್‌ಸಿ ಬಂಧನ ಶಿಬಿರಗಳು ಕೆಲವೇ ನಿರ್ದಿಷ್ಟ ಸಮುದಾಯಗಳಿಗೆ ಸೀಮಿತವಾಗಿವೆ ಎಂಬ ತಪ್ಪು ಅಭಿಪ್ರಾಯಕ್ಕೆ ಒಳಗಾಗಬೇಡಿ. ಸರ್ಕಾರದ ವಿರುದ್ಧ ಯಾರೇ ಮಾತನಾಡಿದರೂ ಅವರನ್ನು ಅಲ್ಲಿಗೆ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಮಯನ್ಮಾರ್‌ನಲ್ಲಿ ಸೇನೆಯು ತನ್ನ ವಿರುದ್ಧ ಧ್ವನಿ ಎತ್ತುವವರನ್ನು ಜೈಲಿಗೆ ಅಟ್ಟುತ್ತಿರುವ ಘಟನೆಯನ್ನು ಉಲ್ಲೇಖಿಸಿ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

ನಮ್ಮ ಮುಂದೆ ಮಯನ್ಮಾರ್ ಉದಾಹರಣೆ ಇದೆ. ಆಡಳಿತ ವ್ಯವಸ್ಥೆಯಲ್ಲಿ ಆದ್ಯತೆ ಪಡೆಯದವರನ್ನು ಅದರಲ್ಲಿ ಹಾಕುತ್ತಾರೆ. ಫ್ಯಾಸಿಸಂ ಕೆಲಸ ಮಾಡುವುದೇ ಹೀಗೆ. ಜಾತ್ಯತೀತವು ಇದರಲ್ಲಿ ರಾಜಿಯಾಗಬಾರದು’ ಎಂದು ಪಿಣರಾಯಿ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *