ಬಿಜ್ನೋರ್: ರೈತರ ಬೃಹತ್ ಹೋರಾಟದ ಬಗ್ಗೆ ಕಳೆದ 15-20 ದಿನಗಳಿಂದ ಕೇಂದ್ರದ ಬಿಜೆಪಿ ಸರ್ಕಾರದ ʻಮೌನʼವನ್ನು ಗಮನಿಸಿದರೆ ರೈತರ ಆಂದೋಲನದ ವಿರುದ್ಧ ಕೆಲವು ಕ್ರಮಗಳನ್ನು ಯೋಜಿಸುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿದರು.
ಭಾನುವಾರ ರಾತ್ರಿ ಉತ್ತರಾಖಂಡದ ಉಧಮ್ ಸಿಂಗ್ ನಗರಕ್ಕೆ ತೆರಳುವ ಮೊದಲು, ಬಿಕೆಯು ನಾಯಕ ಬಿಜ್ನೋರ್‌ನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ ದೇಶದ ರೈತರ ಮೇಲೆ ಹೇರಿರುವ ಹೊಸದಾದ ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ರೈತರು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಆರೋಪಿಸಿದರು.
ಮಾರ್ಚ್ 24 ರವರೆಗೆ ದೇಶದ ಹಲವಾರು ಸ್ಥಳಗಳಲ್ಲಿ ರೈತರ “ಮಹಾಪಂಚಾಯತ್” ನಡೆಯಲಿದೆ ಎಂದ ಅವರು ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ಸರ್ಕಾರವೇ ಮುಂದಾಗಬೇಕಿದೆ ಎಂದು ಅವರು ಒತ್ತಿ ಹೇಳಿದರು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಂದು ಟ್ರಾಕ್ಟರ್ ಮೆರವಣಿಗೆಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಕೇಳಿದಾಗ, ಸರ್ಕಾರವು ತೊಂದರೆಯನ್ನು ಸೃಷ್ಟಿಸಿದೆ. ರೈತ ಕೂಡ ಸಿದ್ಧ. ಅವನು ತನ್ನ ಬೆಳೆ ಮತ್ತು ಆಂದೋಲನವನ್ನು ನೋಡಿಕೊಳ್ಳುತ್ತಾನೆ. ಸಮಯ ಸಿಕ್ಕಾಗ ಸರ್ಕಾರ ಮಾತುಕತೆ ನಡೆಸಲಿ” ಎಂದರು.
ಇದನ್ನೂ ಓದಿ : ಮಾದರಿ ಎಂ.ಎಸ್.ಪಿ. ಮಸೂದೆಯನ್ನು ಪ್ರಸ್ತುತಪಡಿಸಿದ ಅಖಿಲ ಭಾರತ ಕಿಸಾನ್ ಸಭಾ
ಉತ್ತರಪ್ರದೇಶದಲ್ಲಿ ಗೋಧಿ ಬೆಳೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಮಾರಾಟ ಮಾಡದಿದ್ದರೆ ರೈತರು ತಮ್ಮ ಆಂದೋಲನವನ್ನು ತೀವ್ರಗೊಳಿಸುತ್ತಾರೆ ಮತ್ತು ಅವರು ರಾಜ್ಯದಾದ್ಯಂತ ಜಿಲ್ಲಾ ಕೇಂದ್ರ ಕಚೇರಿಯ ಹೊರಗೆ ಧರಣಿಗಳನ್ನು ನಡೆಸುತ್ತಾರೆ. ರೈತರು ವಿವಿಧ ಸ್ಥಳಗಳಲ್ಲಿ ತಮ್ಮ ಬೆಳೆದಿರುವ ಬೆಳೆಗಳನ್ನು ನಾಶಪಡಿಸುವ ವಿಷಯದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ʻರೈತರಿಗೆ ಅಂತಹ ಕ್ರಮಕೈಗೊಳ್ಳುವ ಸಮಯ ಬಂದಿಲ್ಲʼ ಎಂದು ಹೇಳಿದರು.