ಸಪ್ತಸಾಗರದಾಚೆ ಎಲ್ಲೊ : ವಿಮರ್ಶೆ

ಸಪ್ತಸಾಗರದಾಚೆ ಎಲ್ಲೊ

ದರ್ಶನ್‌ ಹೊನ್ನಾಲೆ 

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಿಡುಗಡೆಯಾಗಿದ್ದು, ಸಿನಿ ರಸಿಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ.ವ ಈ ಸಿನಿಮಾವನ್ನು ನೋಡಿ ಬಹಳಷ್ಟು ಜನ ಭಾವುಕರಾಗುತ್ತಿದ್ದಾರೆ. ಸಪ್ತಸಾಗರದಾಚೆ ಎಲ್ಲೊ

ಹೌದು ವೀಕ್ಷಕರೆ, ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ರಾವ್ ಜೋಡಿ ಪ್ರೇಕ್ಷಕರನ್ನು, ಭಾವನಾಲೋಕಕ್ಕೆ ಕರೆದುಕೊಂಡು ಹೋಗಿದ್ದಾರೆ. “ಈ ಸಿನಿಮಾವನ್ನು ಒಂದು ಪೇಟಿಂಗ್ ರೀತಿಯಲ್ಲಿ ಚಿತ್ರಿಸಿದ್ದಾರೆ ಎಂದು ಸಿನಿಮಾಸಕ್ತರು ಫಿದಾ ಆಗಿದ್ದಾರೆ‌.

ಪ್ರೀತಿಗೆ ಬಣ್ಣ ಬಣ್ಣದ ಮಾತುಗಳು ಬೇಕಾಗಿಲ್ಲ, ಸರ್‌ಪ್ರೈಸ್‌ ಗಿಫ್ಟ್ಗಳ ಆಗತ್ಯವಿಲ್ಲ, ಆಸ್ತಿ-ಅಂತಸ್ತು ಲೆಕ್ಕಕ್ಕೇ ಬರೋದಿಲ್ಲ… ಅಲ್ಲಿ ಬೇಕಾಗಿರೋದು ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸ.. ಜೊತೆಗೊಂದು ಭವಿಷ್ಯದ ಭರವಸೆ… ಈ ಅಂಶಗಳನ್ನು ಮೂಲವಾಗಿಟ್ಟುಕೊಂಡು ಅದನ್ನು ಅಚ್ಚುಕಟ್ಟಾಗಿ ಮನಮುಟ್ಟುವಂತೆ ಜನರಮುಂದಿಟ್ಟಿದ್ದಾರೆ. ಮೊದಲ ದಿನದ ಮೊದಲ ಶೋನಲ್ಲಿ ಸಪ್ತಸಾಗರದಾಚೆ ಬಗ್ಗೆ ಸಿನಿ ಪ್ರಿಯರು ದಿಲ್‌ಖುಷ್‌ ಆಗಿದ್ದಾರೆ.

ಮಧ್ಯಮ ವರ್ಗದ ಪ್ರೇಮಿಗಳು ಅರಿಯದೇ ಮಾಡಿದ ಚಿಕ್ಕ ತಪ್ಪಿನಿಂದಾಗಿ ಒಬ್ಬರನ್ನೊಬ್ಬರು ಸೇರಲು ಪಡುವ ಕಷ್ಟಗಳನ್ನು ಜನರ ಮನಮುಟ್ಟುವಂತೆ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಹರಿಯುವ ನದಿ ಎಲ್ಲಾ ಅಡೆತಡೆಗಳನ್ನು ದಾಟಿ ಸಾಗರವನ್ನು ಸೇರುವುದಾದರು ಹೇಗೆ ಎಂಬುದು ಚಿತ್ರದ ಮೂಲ ಕಥೆಯಾಗಿದೆ.

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಹೇಮಂತ್ ರಾವ್ ನಿರ್ದೇಶನದಲ್ಲಿ ಮೂಡಿಬಂದಿದ್ದು, ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಜೋಡಿ ತೆರೆಯ ಮೇಲೆ ಸುಂದರವಾಗಿ ಮೂಡಿ ಬಂದಿದ್ದೆ.ಪವಿತ್ರ ಲೋಕೇಶ್‌, ಅಚ್ಯುತ್‌ ಕುಮಾರ್‌, ಶರತ್‌ ಲೋಹಿತಾಶ್ವ ಸೇರಿದಂತೆ ಎಲ್ಲಾ ಕಲಾವಿದರ ಅಧ್ಬುತ ನಟನೆ ಚಿತ್ರಕ್ಕೆ ಜೀವಕಳೆ ತಂದುಕೊಟ್ಟಿದೆ. ಸಪ್ತಸಾಗರದಾಚೆ ಎಲ್ಲೊ

ಇಂದು ತೆರೆಕಂಡಿರುವ ಈ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರರ್ದಶನಗೊಳ್ಳುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಬೆಂಬಲ ಸಿಕ್ಕಿದೆ.  ಸಿನಿ ಪ್ರೇಕ್ಷಕರು 10 ಕ್ಕೆ 7 ಅಂಕ ನೀಡಿದ್ದಾರೆ.

 

 

Donate Janashakthi Media

Leave a Reply

Your email address will not be published. Required fields are marked *