ಧಾರವಾಡ| ಉಪರಾಷ್ಟ್ರಪತಿ ಮಾಡಿದ ಭಾಷಣಕ್ಕೆ ಸಂತೋಷ ಲಾಡ್ ಆಕ್ಷೇಪ

ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕೃಷಿ ವಿಶ್ವವಿದ್ಯಾಲಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿಗಳು ಮಾಡಿದ ಭಾಷಣಕ್ಕೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ನಾನು ಮಾತನಾಡಲು ಅವಕಾಶವೇ ಸಿಕ್ಕಲಿಲ್ಲ. ಅದರ ಬಗ್ಗೆ ನನಗೆ ಬೇಸರವಿಲ್ಲ. ಆದರೆ ಉಪರಾಷ್ಟ್ರಪತಿಗಳು ಕೇಂದ್ರ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಕಳೆದ 40 ವರ್ಷಗಳಲ್ಲಿ ಆಯಾ ಸರ್ಕಾರಗಳು ಮಾಡದೇ ಇರುವ ಕೆಲಸಗಳನ್ನು ಪ್ರಧಾನಿ ಮೋದಿ ಸರ್ಕಾರ ತೀವ್ರಗತಿಯಲ್ಲಿ ಮಾಡಿ ಮುಗಿಸುತ್ತಿದೆ ಎಂಬ ಹಸಿ ಸುಳ್ಳುಗಳನ್ನು ಹೇಳಿದ್ದಾರೆ ಎಂದು ನೆನ್ನೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕ್ಷೇಪಿಸಿದ್ದಾರೆ.

ಈ ದೇಶದಲ್ಲಿ ಶೇ.75 ರಷ್ಟು ಜನ ಜಿಎಸ್‌ಟಿ ತೆರಿಗೆ ಕಟ್ಟುತ್ತಿದ್ದಾರೆ. ಆದರೆ ಶೇ.50 ರಷ್ಟು ಆಸ್ತಿ ಕೇವಲ ಶೇ.1 ರಷ್ಟು ಜನರ ಕೈಯಲ್ಲಿ ಅಂದರೆ ಬಂಡವಾಳಶಾಹಿಗಳ ಕೈಯಲ್ಲಿದೆ. ಇದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಜಿಡಿಪಿ ಬಗ್ಗೆ ಸುಳ್ಳು ಹೇಳುತ್ತಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ತೀವ್ರವಾಗಿ ಕುಸಿದು ಹೋಗಿದೆ. 2ಜಿ, 3ಜಿ ಮತ್ತು 5ಜಿ ಬಗ್ಗೆ ಮಾತನಾಡುತ್ತಾರೆ ಹೊರತು ಬಿಎಸ್‌ಎನ್‌ಎಲ್‌ನ್ನು ಎಷ್ಟು ಬೆಳೆಸಿದ್ದಾರೆ ಎಂಬುದನ್ನು ಹೇಳುತ್ತಲೇ ಇಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಕೋಟಾ: ನೀಟ್ ಆಕಾಂಕ್ಷಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

ಚೀನಾದಲ್ಲಿ ಆಗಿರುವ ಕೃಷಿ ಅಭಿವೃದ್ಧಿಗೆ ನಮ್ಮ ದೇಶದ ಕೃಷಿ ಅಭಿವೃದ್ಧಿ ಹೋಲಿಕೆ ಮಾಡುತ್ತಿಲ್ಲ. ಇಂದಿರಾಗಾಂಧಿ ಅವರು 66 ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಸ್ಥಾಪಿಸಿದ್ದರು. ಅಟಲ್ ಬಿಹಾರಿ ವಾಜಪೇಜಿ ಅವರು 17 ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಆದರೆ ಪ್ರಧಾನಿ ಮೋದಿ ಅವರು ಒಂದೇ ಒಂದು ಪಬ್ಲಿಕ್ ಸೆಕ್ಟರ್ ಉದ್ಯಮ ಆರಂಭಿಸಿಲ್ಲ. ಇಂತಹ ವಿಚಾರಗಳ ಬಗ್ಗೆ ಮಾಧ್ಯಮಗಳು ವರದಿ ಮಾಡದಿರುವುದು ಬೇಸರ ತರಿಸಿದೆ ಎಂದರು.

ದೇಶದಲ್ಲಿ ಬಿಜೆಪಿ ಅವಧಿಯಲ್ಲಿ 1.20 ಲಕ್ಷ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 40 ಕೋಟಿ ಜನರಿಗೆ ಕೌಶಲ್ಯ ತರಬೇತಿ ನೀಡುತ್ತೇನೆ ಎಂದಿದ್ದು ಏನಾಯಿತು? 1200 ಕೋಟಿ ರೂ. ಖೇಲೋ ಇಂಡಿಯಾ ಬಜೆಟ್‌ನಲ್ಲಿ 423 ಕೋಟಿ ರೂ.ಗಳು ಬರೀ ಗುಜರಾತ್‌ಗೆ ಹೋಗಿದೆ. ಆದರೆ ಒಂದೇ ಒಂದು ಮೆಡಲ್ ತರಲಿಲ್ಲ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಮಾಡಿಲ್ಲ. ಆದರೆ ಕಾಂಗ್ರೆಸ್ 40 ವರ್ಷ ಏನು ಮಾಡಿಲ್ಲ ಎಂದು ಉಪರಾಷ್ಟ್ರಪತಿಗಳು ಹೇಳಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಇದನ್ನೂ ನೋಡಿ: ಕಂದಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ : ತಡೆಗಟ್ಟುವಲ್ಲಿ ಸಮಾಜವೂ ವಿಫಲ, ಸರ್ಕಾರವೂ ವಿಫಲ Janashakthi Media

Donate Janashakthi Media

Leave a Reply

Your email address will not be published. Required fields are marked *