ಕರ್ನಾಟಕಕ್ಕೆ ಬಿ.ಎಲ್. ಸಂತೋಷ್‌ ಅಚಾನಕ್‌ ಎಂಟ್ರಿ..ಬಿಜೆಪಿಗೆ ಅನುಕೂಲವೋ ಅನಾನುಕೂಲವೋ?

– ವಿಶೇಷ ವರದಿ: ಸಂಧ್ಯಾ ಸೊರಬ

ಬೆಂಗಳೂರು: ಇದ್ದಕ್ಕಿದ್ದಂತೆ ಬಿ.ಎಲ್.ಸಂತೋಷ್‌ ಅಚಾನಕ್‌ ಆಗಿ ರಾಜ್ಯಕ್ಕೆ ಎಂಟ್ರಿಯಾಗಿದ್ದು, ಬಿಜೆಪಿ ಪಾಳಯದಲ್ಲಿ ತಳಮಳ ಸೃಷ್ಟಿಸಿದ್ದು, ಹೀಗೆ ದೀಢೀರನೇ ಚಿತ್ರದುರ್ಗ, ತುಮಕೂರು ಸಭೆಗಳಲ್ಲಿ ಔಪಚಾರಿಕವಾಗಿ ಕಾಣಿಸಿಕೊಂಡಿರುವ ಬಿ.ಎಲ್.ಸಂತೋಷ್‌ ಪ್ರವೇಶ ಕಮಲಕ್ಕೆ ಅನುಕೂಲವೋ?ಅನಾನುಕೂಲವೋ? ಎಂಬ ಪ್ರ‍ಶ್ನೆಗಳನ್ನು ಹುಟ್ಟುಹಾಕಿದೆ.

ಮೊದಲಿನಿಂದಲೂ ಬಿ.ಎಲ್.ಸಂತೋಷ್‌ಗೂ ಬಿ.ಎಸ್.ಯಡಿಯೂರಪ್ಪಗೂ ಅಷ್ಟಕಷ್ಟೇ ಎನ್ನುವುದು ಬಹಿರಂಗ ಸತ್ಯ. ಅವರ ಮಾತುಕೇಳಿ ಯಡಿಯೂರಪ್ಪರನ್ನು ಬಿಜೆಪಿಯ ವರಿಷ್ಠರು ದೂರವಿಟ್ಟರು ಎನ್ನಲಾಗಿದ್ದು, ಇದರ ಹೊಡೆತವನ್ನು ಬಿಜೆಪಿ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನುಂಡಿರುವುದು.

ಅಂದ್ಹಾಗೆ ವಿಧಾನಸಭೆ ಚುನಾವಣೆಯಿಂದ ಪಾಠ ಕಲಿತ ಕೇಂದ್ರದ ಬಿಜೆಪಿ ನಾಯಕರು ಅದರಲ್ಲಿಯೂ ಮೋದಿ ಮತ್ತು ಶಾ, ಬಿ.ಎಲ್.ಸಂತೋಷ್‌ಗೆ ಕರ್ನಾಟಕ ಲೋಕಸಭಾ ಚುನಾವಣೆಯ ರಾಜಕಾರಣದಿಂದ ದೂರವಿರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯ ಪಟ್ಟಿಯಲ್ಲಿ ಬಿ.ಎಸ್.ಯಡಿಯೂರಪ್ಪ ಮೇಲುಗೈ ಸಾಧಿಸಿದ್ದು, ಒಳಗೊಳಗೆ ಬಿಜೆಪಿಯಲ್ಲಿಯೇ ಇರುವ ಬಿಎಸ್ವೈ ವಿರುದ್ಧದ ಬಣಕ್ಕೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.

ಇದನ್ನು ಓದಿ : ಸಿಪಿಐಎಂ ಪ್ರಣಾಳಿಕೆ | ಯುಎಪಿಎ, ಸಿಎಎ ರದ್ದು : ಶಿಕ್ಷಣ, ಉದ್ಯೋಗ, ಆರೋಗ್ಯ ಖಾತ್ರಿ ಭರವಸೆ

ಈಗ ಯಡಿಯೂರಪ್ಪ ವಿರುದ್ಧ ಬಣದ ವಿ.ಸೋಮಣ್ಣ ಹಾಗೂ ದಲಿತ ಬ್ರಾಹ್ಮಣವೆಂದೇ ಬಿಜೆಪಿಯಲ್ಲಿ ಕರೆಸಿಕೊಳ್ಳುವ ಗೋವಿಂದ ಕಾರಜೋಳರ ಸಭೆಯಲ್ಲಿ ಪಾಲ್ಗೊಳ್ಳುವ ಔಪಚಾರಿಕ ಕಾರಣದಿಂದ ಅವರು, ಕರ್ನಾಟಕಕ್ಕೆ ಬಂದಿದ್ದರೂ ಹಿಂದಿನ ಕಾರಣವೇ ಬೇರೆ ಇದೆ ಎನ್ನುತ್ತವೆ ರಾಜಕೀಯ ಮೂಲಗಳು. ಬಿಎಸ್ವೈ ವಿರುದ್ಧದ ಅಪಸ್ವರಗಳು ಯಡಿಯೂರಪ್ಪ ಕುಟುಂಬ ರಾಜಕಾರಣದ ಧ್ವನಿಗಳು ಬಿ.ಎಲ್.ಸಂತೋಷ್‌ ಅವರನ್ನು ಮುಟ್ಟಿದ್ದು, ಏನಾದರೂ ಮಾಡಿ ಬಿಎಸ್ವೈ ಓಟಕ್ಕೆ ಕಡಿವಾಣ ಹಾಕಬೇಕೆಂಬ ದೂರಗಳು ಹೋಗಿವೆ.

ಇದೇ ನೆಪದಲ್ಲಿ ಅವರು ರಾಜ್ಯಕ್ಕೆ ಆಗಮನವಾಗಿದ್ದು, ಬಿಜೆಪಿ ವಿರುದ್ಧದ ‍ವರದಿಯನ್ನು ಅದರಲ್ಲಿಯೂ ಸಂತೋಷ್‌ ಬಣದ ಬಿಜೆಪಿ ನಾಯಕರಾಗಿರುವ ಕೆಲವರು ಬಿಎಸ್ವೈ ವಿರುದ್ಧದ ಬಣದಲ್ಲಿರುವ ಕೂಗುಗಳ ಪಟ್ಟಿಯನ್ನು ಕೇಂದ್ರಕ್ಕೆ ಮತ್ತೆ ಅವರು ಮುಟ್ಟಿಸಲಿದ್ದಾರಾ? ಗೊತ್ತಿಲ್ಲ. ಒಟ್ಟಾರೆ ಲೋಕಸಭಾ ಚುನಾವಣೆಗೆ ಮತದಾನ ಹತ್ತಿರವಿದೆ ಎನ್ನುವಾಗಲೇ ಈ ರೀತಿ ಅವರ ಆಗಮನವನ್ನು ಕಮಲ ಪಾಳಯ ಹೇಗೆ ಸ್ವೀಕರಿಸಲಿದೆಯೋ? ಈ ಆಗಮನ ಲಾಭವಾಗಲಿದೆಯೋ ಅಥವಾ ಇನ್ಯಾವ ಬಿಜೆಪಿಯ ಸಂಘ ಪರಿವಾರದ ರಾಜಕೀಯ ಬದಲಾವಣೆಗೆ ಕಾರಣವಾಗಲಿದೆಯಾ? ಎನ್ನುವುದನ್ನು ಕಾದುನೋಡಬೇಕು.

ಇದನ್ನು ನೋಡಿ : ನಾವು ಬಿಜೆಪಿಗೆ ಓಟು ಹಾಕುವುದಿಲ್ಲ – ಕಟ್ಟಡ ಕಾರ್ಮಿಕರ ನಿರ್ಧಾರ Janashakthi Media

Donate Janashakthi Media

Leave a Reply

Your email address will not be published. Required fields are marked *