ಸಂತಸ ಮತ್ತು ಸಂಕಟ ತಂದ ಮಳೆ

  • ಮಳೆ, ಗಾಳಿ, ಸಿಡಿಲುಗಳಿಂದ ಮನುಷ್ಯರು ಮತ್ತು ಪ್ರಾಣಿಗಳ ಜೀವಕ್ಕೆ ಹಾನಿ
  • ಹಲವು ಜಿಲ್ಲೆಗಳಿಗೆ ರೆಡ್‌ ಮತ್ತು ಯೆಲ್ಲೋ ಅಲರ್ಟ್‌
  • ಮಳೆಯಿಂದಾಗಿ ರೈತರಿಗೆ ಸಂತಸ

ಬೆಂಗಳೂರು: ಕರ್ನಾಟಕದೆಲ್ಲಡೆ ದಿನದಿಂದ ದಿನಕ್ಕೆ ಮಳೆ ಧಾರಾಕಾರವಾಗಿ ಬೀಳುತ್ತಿದೆ. ಮಳೆಯಿಂದಾಗಿ ನಗರ ವಾಸಿಗರ ಜೀವನ ಅಸ್ಥವ್ಯಸ್ಥಗೊಂಡಿದೆ. ಇನ್ನು ಈ ಮಳೆಯಿಂದಾಗಿ ರೈತರು ಸಂತಸ ಪಟ್ಟಿದ್ದಾರೆ.

ರಾಜ್ಯದಲ್ಲಿನ ರೈತರು ಮುಂಗಾರು ಹಂಗಾಮಿನ ಬಿತ್ತನೆಗೆ ಮಳೆಗಾಗಿ ಕಾಯುತ್ತಿದ್ದು, ಈ ಮಳೆಯಿಂದಾಗಿ ರೈರಿಗೆ ಸಂತಸ ಉಂಟಾಗಿದೆ. ತರಕಾರಿ ಬೆಳೆಯುವ ರೈತರಿಗೆ ಕೊಂಚ ಸಂಕಷ್ಟ ಎದುರಾಗಿದೆ.

ರಾಜ್ಯದಲ್ಲಿ ಸುರಿದ ಮಳೆ ಅನಾಹುತಗಳನ್ನು ಸೃಷ್ಟಿಸುತ್ತಿದೆ. ಚಿತ್ರದುರ್ಗದಲ್ಲಿ ಸಿಡಿಲಿಗೆ 150 ಕುರಿಗಳು, 1 ಎತ್ತು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. ಏಕಾಏಕಿ ಸೋಮವಾರ ಸಂಜೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಹಲವೆಡೆ ಸುರಿದ ಧಾರಾಕಾರ ಮಳೆಗೆ, ರೈತರು ತತ್ತರಿಸುವಂತೆ ಮಾಡಿದೆ. ಸಿಡಿಲು, ಗುಡುಗು ಸಹಿತ ಮಳೆ ಆರ್ಭಟಕ್ಕೆ ಜಾನುವಾರುಗಳು ನೆಲಕಪ್ಪಳಿಸಿ ಸಾವನ್ನಪ್ಪಿರೋ ದಾರುಣ ಘಟನೆ ನಡೆದಿದೆ.

ಬೀದರ್‌, ಯಾದಗಿರಿಯಲ್ಲೂ ಮಳೆ ಮುಂದುವರೆದಿದ್ದು, ಸಿಡಿಲು ಬಡಿದು ಇಬ್ಬರು ಕೃಷಿಕಾರ್ಮಿಕರು ಮೃತಪಟ್ಟಿದ್ದಾರೆ.ಇದೇ ರೀತಿಯಾಗಿ ಕಲುಬುರುಗಿಯಲ್ಲಿ ಎರೆಡು ಎತ್ತು, ಒಂದು ಹಸು, 30 ಮೇಕೆಗಳು ಸಾವನ್ನಪ್ಪಿವೆ.

ಹಳೆ ಮೈಸೂರು ಭಾಗದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಅಲ್ಲಿನ ಜಿಲ್ಲಾ ಕೇಂದ್ರದ ಬೋಗಾದಿ ಕೆರೆ ತುಂಬಿದೆ. ನೀರಿನ ರಭಸಕ್ಕೆ ಲಿಂಗಾಬುಧಿ ಕೆರೆಗೆ ಸಂಪರ್ಕ ಬೆಸೆಯುವ ರಾಜಕಾಲುವೆ ಸೇತುವೆ ಕೊಚ್ಚಿಕೊಂಡು ಹೋಗಿದೆ.

ಉತ್ತರ ಕರ್ನಾಟಕದ ಉತ್ತರಕನ್ನಡ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಮನೆಗಳು ದುಸ್ಥಿತಿ ಹೊಂದಿವೆ. ಹಾವೇರಿ ಜಿಲ್ಲೆಗಳಲ್ಲಿ ಒಟ್ಟು  78 ಮನೆಗಳಿಗೆ ಹಾನಿಯಾಗಿದೆ. ಮಂಗಳೂರಿನ ಭಟ್ಕಳ ಬಂದರಿನಲ್ಲಿ ಮಳೆಯ ಕಾರಣ 4 ಹಡಗುಗಳಿಗೆ ಹಾನಿಯಾಗಿದ್ದು ಒಂದು ಹಡಗು ಸಂಪೂರ್ಣ ಮುಳುಗಡೆಯಾಗಿದೆ. ಬೆಂಗಳೂರಿನಲ್ಲಿ 300 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ವರದಿಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲೂ ವಾರದಿಂದ ಪದೆ ಪದೆ ಮಳೆಯಾಗುತಿದ್ದು ನಗರವಾಸಿಗರ ಜೀವನ ಅಸ್ಥವ್ಯಸ್ಥಗೊಂಡಿದೆ. ತಡರಾತ್ರಿ ಸುರಿದ ಮಳೆಗೆ ಮೆಜೆಸ್ಟಿಕ್‌, ಕಾರ್ಪೋರೇಷನ್‌, ಶಾಂತಿನಗರ, ಚಾಮರಾಜ ಪೇಟೆ, ಕೋರಮಂಗಲ, ಬಿಟಿಎಂ ಲೇಔಟ್, ಜಯನಗರ, ಬಸವೇಶ್ವರನಗರ, ಸದಾಶಿವನಗರ, ಮಲ್ಲೇಶ್ವರಂ, ಪೀಣ್ಯ, ಜಾಲಹಳ್ಳಿ, ಸುಂಕದಕಟ್ಟೆ, ಗೊರಗುಂಟೆಪಾಳ್ಯ ಸೇರಿದಂತೆ ಬೆಂಗಳೂರಿನ ಹಲವು ಭಾಗಗಳಲ್ಲಿನ ಕೆಲವು ರಸ್ತೆಗಳು, ಗುಂಡಿಗಳು, ಚರಂಡಿಗಳು ಜಲಾವೃತವಾಗಿದ್ದವು, ರಸ್ತೆಗಳಲ್ಲಿ ನೀರು ನಿಂತಕಾರಣ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಇನ್ನು ಕೆಲವು ವಾಹನಗಳು ಮುಳುಗಡೆ ಹೊಂದಿದ್ದು. ಹಲವು ಬಡಾವಣೆಗಳಿಗೆ ನೀರು ನುಗ್ಗಿದ್ದು ಜನರ ನಿದ್ದೆಗೆಡುವಂತೆ ಮಾಡಿದೆ.

ಕಾರವಳಿ, ಮಳೆನಾಡು ಪ್ರದೇಶಗಳಿಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಕೆಲವು ಜಿಲ್ಲೆಗಳಾದ ಬೆಂಗಳೂರು, ಚಾಮರಾಜ ನಗರ , ಚಿಕ್ಕಬಳ್ಳಾಪುರ, ಚಿಕ್ಕಮಗಳೂರು,ಚಿತ್ರದರ್ಗ, ದಾವಣಗೆರೆ, ಹಾಸನ, ಕೊಡಗು, ಕೊಲಾರ, ಮಂಡ್ಯ, ಮೈಸೂರು,ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ 20 ರವರೆಗೆ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ.

 

Donate Janashakthi Media

Leave a Reply

Your email address will not be published. Required fields are marked *